ಶಿವರಾತ್ರಿ ಪ್ರಯುಕ್ತ ಅಪ್ಪನ ಜತೆ ಸೇರಿ ಮನೆಯಲ್ಲಿಯೇ ಹೋಮ ಹಾಕಿಸಿದ ರಾಗಿಣಿ ದ್ವಿವೇದಿ
ಸದಾ ಬೋಲ್ಡ್ ಲುಕ್‌ನಲ್ಲಿ ಕಂಗೊಳಿಸುವ ರಾಗಿಣಿ, ಹಬ್ಬ ಹರಿದಿನಗಳಲ್ಲಿ ಸಾಂಪ್ರದಾಯಿಕ ದಿರಿಸಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಸಂಕ್ರಾಂತಿ ದಿನದಂದು ಸೀರೆಯುಟ್ಟು ದೇವಸ್ಥಾನಗಳಿಗೆ ತೆರಳಿದ್ದ ರಾಗಿಣಿ ಇದೀಗ,ಶಿವರಾತ್ರಿ ಪ್ರಯುಕ್ತ ಅಪ್ಪನ ಜತೆ ಸೇರಿ ಮನೆಯಲ್ಲಿಯೇ ಹೋಮ ಹಾಕಿಸಿದ ರಾಗಿಣಿ ದ್ವಿವೇದಿ. ಶಿವರಾತ್ರಿ ಪ್ರಯುಕ್ತ ಮನೆಯಲ್ಲಿ ಹೋಮ ಹವನ ಹಾಕಿಸಿದ ಫೋಟೋಗಳನ್ನು ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.(Instagram/ Ragini Dwivedi
ಇಂದಿನಿಂದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪ್ರಾರಂಭ: ಬಂಗಾಳದ ಹುಲಿಗಳ ಜೊತೆ ಕರ್ನಾಟಕ ಬುಲ್ಡೋಜರ್ ಕಾದಾಟ
ಚಿತ್ರರಂಗದ ಪುರುಷರ ಹವ್ಯಾಸಿ ಕ್ರಿಕೆಟ್ ಲೀಗ್ ಎಂದು ಕರೆಯಲಾಗುವ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) 2023, ಫೆ.18 ರಂದು ಪ್ರಾರಂಭವಾಗಿ ಮಾರ್ಚ್ 19 ರಂದು ಕೊನೆಗೊಳ್ಳಲಿದೆ. ಸಿಸಿಎಲ್ ಭಾರತೀಯ ಚಿತ್ರರಂಗದ ಒಂಬತ್ತು ಪ್ರಮುಖ ಪ್ರಾದೇಶಿಕ ಚಲನಚಿತ್ರ ಉದ್ಯಮಗಳ ಒಂಬತ್ತು ಚಿತ್ರ ನಟರ ತಂಡಗಳನ್ನು ಒಳಗೊಂಡಿದೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಅನ್ನು 2011 ರಲ್ಲಿ ಪ್ರಾರಂಭಿಸಲಾಯಿತು. ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಲೀಗ್ ಪಂದ್ಯಗಳನ್ನು ಕೈಗೊಂಡಿರಲಿಲ್ಲ. ಇಂದು ಕರ್ನಾಟಕ ಬುಲ್ಡೋಜರ್ಸ್ ತಂಡವು ಬೆಂಗಾಲ್ ಟೈಗರ್ಸ್ ಗಳನ್ನು ಎದುರಿಸಲಿದೆ. […]
ಜನರ ಕಣ್ಣಿಗೆ ಮಣ್ಣೆರಚುವ ತಂತ್ರದ ಬಜೆಟ್ ನಿಂದ ಯಾವುದೇ ಪ್ರಯೋಜನವಿಲ್ಲ: ಕೃಷ್ಣಮೂರ್ತಿ ಆಚಾರ್ಯ
ಉಡುಪಿ: ಶುಕ್ರವಾರದ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ನಲ್ಲಿ ನಮ್ಮ ಕರಾವಳಿ ಜಿಲ್ಲೆಗಳನ್ನು ಮತ್ತೆ ಕಡೆಗಣಿಸಿದ್ದಾರೆ. ತುಳು ಭಾಷೆಯನ್ನು ಸರ್ಕಾರದ ಮಂತ್ರಿ ಸಭೆಯಲ್ಲಿಯೇ ಅವಮಾನ ಮಾಡಿದಾರೆ. ಅದೇ ರೀತಿ ಅನೇಕ ಸಮುದಾಯಗಳ ಬೇಡಿಕೆಗೆ ಬಜೆಟ್ ನಲ್ಲಿ ಕಿಂಚಿತ್ತೂ ಸ್ಪಂದಿಸುವ ಕೆಲಸ ಮಾಡಿಲ್ಲ. ಅನೇಕ ಸಮುದಾಯಗಳ ಅಭಿವೃದ್ಧಿ ನಿಗಮ ಮಂಡಳಿಗೆ ಅನುದಾನವೂ ಘೋಷಣೆ ಮಾಡಿಲ್ಲ. ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್ ಊಟಕ್ಕೆ ಇಲ್ಲದ ಉಪ್ಪಿನಕಾಯಿಯಂತಾಗಿದೆ. ಇದರಿಂದ ಯಾರಿಗೂ ಪ್ರಯೋಜನ ಇಲ್ಲ. ಕಳೆದ ಬಾರಿ ಬಜೆಟ್ ನಲ್ಲಿ […]
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮಹಾಶಿವರಾತ್ರಿ ಹಾಗೂ ವಾರ್ಷಿಕ ರಥೋತ್ಸವ
ಉಡುಪಿ: ಬನ್ನಂಜೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಾಗೂ ವಾರ್ಷಿಕ ರಥೋತ್ಸವವು ಜರುಗಲಿದ್ದು ಭಾನುವಾರದಂದು ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ. ದೇವಳದ ಶ್ರೀನಿವಾಸ ತಂತ್ರಿ ಗಳ ನೇತೃತ್ವದಲ್ಲಿ ಶತ ರುದ್ರಾಭಿಷೇಕ, ನವಕ ಪ್ರಧಾನ ಹೋಮ, ಉತ್ಸವ ಬಲಿ, ರಥೋತ್ಸವ, ವಸಂತಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಉದ್ಘಾಟನೆಯನ್ನು ನಾಡೋಜ ಡಾ. ಜಿ. ಶಂಕರ್ ನೆರವೇರಿಸಿದರು. ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ಯಶಪಾಲ್ ಸುವರ್ಣ, ವಾಸ್ತು ತಜ್ಞ ಸುಬ್ರಮಣ್ಯ ಭಟ್ , ಆನಂದ ಪಿ ಸುವರ್ಣ , ಪ್ರಭಾಕರ್ ಪೂಜಾರಿ […]
ಉಡುಪಿ: ಜೆಡಿಎಸ್ ಚುನಾವಣಾ ಉಸ್ತುವಾರಿಗಳ ನೇಮಕ
ಉಡುಪಿ: ಫೆ. 15 ರಂದು ಜನತಾದಳ(ಜಾತ್ಯತೀತ) ಪಕ್ಷದ ಉಡುಪಿ ಜಿಲ್ಲಾ ಕಚೇರಿ ಕುಮಾರಕೃಪಾದಲ್ಲಿ ಚುನಾವಣಾ ಪೂರ್ವಭಾವಿ ಸಭೆ ಜರುಗಿತು. ಕಾರ್ಯಾಧ್ಯಕ್ಷ ವಾಸುದೇವ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ ಚುನಾವಣೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಪಕ್ಷದ ನಾಯಕ ಸಂಕಪ್ಪ. ಎ ಇವರು ಚುನಾವಣೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಇತ್ತೀಚೆಗೆ ನಿಧನರಾದ ಕಾಪು ವಿಧಾನಸಭಾ ಕ್ಷೇತ್ರದ ಕಾರ್ಯಧ್ಯಕ್ಷ ರಾಜು ಆರ್ ಪುತ್ರನ್ ಅವರಿಗೆ ಪಕ್ಷದ ವತಿಯಿಂದ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಜಿಲ್ಲಾಧ್ಯಕ್ಷ ಯೋಗೀಶ್ ವಿ ಶೆಟ್ಟಿ ಮಾತನಾಡಿ ಪಂಚರತ್ನ ಯೋಜನೆಯ […]