ಸಿದ್ದರಾಮಯ್ಯನವರನ್ನು ಹೊಡೆದು ಹಾಕಿ ಎಂದ ಅಶ್ವಥ್ ನಾರಾಯಣ್ ವಿರುದ್ದ ಪ್ರಕರಣ ದಾಖಲಿಸಿ: ವೆರೋನಿಕಾ ಕರ್ನೆಲಿಯೋ ಒತ್ತಾಯ
ರಾಜ್ಯದ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಿ ಎನ್ನುವ ಮೂಲಕ ಪ್ರಚೋದನಾತ್ಮಕವಾಗಿ ಮಾತನಾಡಿದ ಸಚಿವ ಡಾ.ಸಿ ಎನ್ ಅಶ್ವಥ್ ನಾರಾಯಣ್ ಅವರ ವಿರುದ್ದ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸ್ವಯಂ ಪ್ರೇರಿತ ದೂರು ದಾಖಲಿಸಿ ಬಂಧಿಸಬೇಕು ಎಂದು ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೋ ಆಗ್ರಹಿಸಿದ್ದಾರೆ. ರಾಜ್ಯಕ್ಕೆ ಉತ್ತಮ ಜನಪರ ಆಡಳಿತ ನೀಡಿರುವ ಹಿರಿಯ ರಾಜಕಾರಣಿ ಸಿದ್ದರಾಮಯ್ಯ ಅವರ ವಿರುದ್ದ ಸಚಿವ ಡಾ.ಸಿ ಎನ್ ಅಶ್ವಥ್ ನಾರಾಯಣ್ ಮಾತನಾಡಿದ ಪದಗಳನ್ನು ಯಾರೂ ಕೂಡ […]
ಬಿಜೆಪಿ ವಿವಿಧ ಮೋರ್ಚಾಗಳ ಸಮಾವೇಶ
ಉಡುಪಿ: ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬಿಜೆಪಿ ವಿವಿಧ ಮೋರ್ಚಾಗಳ ಸಮಾವೇಶದ ಸಂಚಾಲಕ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಜಿ.ವಿ. ನೇತೃತ್ವದಲ್ಲಿ ನಡೆದ ವಿವಿಧ ಮೋರ್ಚಾಗಳ ರಾಜ್ಯ ಪದಾಧಿಕಾರಿಗಳು ಮತ್ತು ಆಹ್ವಾನಿತರ ಸಭೆಯಲ್ಲಿ ಬಿಜೆಪಿ ಮೋರ್ಚಾ ಸಮಾವೇಶಗಳ ಸಹ ಸಂಚಾಲಕ, ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಭಾಗವಹಿಸಿದರು. ಸಭೆಯಲ್ಲಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಶ್ರೀಮತಿ ಗೀತಾ ವಿವೇಕಾನಂದ, ಎಸ್ ಟಿ. […]
ಚಿತ್ರರಂಗದ ದಿಗ್ಗಜ ನಟರಾದ ರಜನಿಕಾಂತ್ ಹಾಗೂ ಶಿವರಾಜ್ ಕುಮಾರ್ ಎ.ಜೆ.ಗ್ರ್ಯಾಂಡ್ ಹೋಟೇಲ್ ನಲ್ಲಿ ವಾಸ್ತವ್ಯ
ಮಂಗಳೂರು: ತಮ್ಮ ಮುಂಬರುವ ಜೈಲರ್ ಚಿತ್ರದ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಆಗಮಿಸಿದ್ದ ಚಿತ್ರರಂಗದ ದಿಗ್ಗಜ ನಟರಾದ ರಜನಿಕಾಂತ್ ಹಾಗೂ ಶಿವರಾಜ್ ಕುಮಾರ್ ನಗರದ ಪ್ರತಿಷ್ಠಿತ ಎ.ಜೆ. ಗ್ರ್ಯಾಂಡ್ ಹೋಟೇಲಿನಲ್ಲಿ ವಾಸ್ತವ್ಯ ಹೂಡಿದ್ದರು. ಹೋಟೇಲಿನ ವ್ಯವಸ್ಥಾಪಕ ನಿರ್ದೇಶಕ ಎ.ಜೆ.ಶೆಟ್ಟಿ ಹಾಗೂ ಉಪನಿರ್ದೇಶಕ ಪ್ರಶಾಂತ್ ಶೆಟ್ಟಿ ನಟರನ್ನು ಬರಮಾಡಿಕೊಂಡರು. ಜೈಲರ್ ಚಿತ್ರದ ಚಿತ್ರೀಕರಣವು ಮಂಗಳೂರಿನ ಪಿಲಿಕುಳದ ಗುತ್ತಿನ ಮನೆಯಲ್ಲಿ ನಡೆಯುತ್ತಿದ್ದು, ಈ ಸಂದರ್ಭ ಸಾಧು ಕೋಕಿಲ, ಯೋಗಿ ಬಾಬು ಮುಂತಾದ ನಟರು ಜಿಲ್ಲೆಗೆ ಆಗಮಿಸಿದ್ದು, ಹೋಟೇಲ್ ನಲ್ಲಿ ತಂಗಿದ್ದಾರೆ ಮತ್ತು ಇಲ್ಲಿನ […]
ಸಂಸ್ಕೃತ ಭಾರತೀ ವತಿಯಿಂದ ಕುಟುಂಬ ಪ್ರಬೋಧನ ಕಾರ್ಯಕ್ರಮ
ಉಡುಪಿ: ಸಂಸ್ಕೃತ ಭಾರತೀ ಉಡುಪಿ ಆಯೋಜಿಸಿದ “ಕುಟುಂಬ ಪ್ರಬೋಧನ” ಕಾರ್ಯಕ್ರಮ ಫೆ. 15 ರಂದು ತೆಂಕುಪೇಟೆಯ ಶ್ರೀ ಲಕ್ಷ್ಮೀವೇಂಕಟೇಶ ದೇವಸ್ಥಾನದ ಶ್ರೀ ಭುವನೇಂದ್ರ ಸಭಾಭವನದಲ್ಲಿ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕರೂ, ಕುಟುಂಬ ಪ್ರಬೋಧನ ಅಖಿಲ ಭಾರತ ಕಾರ್ಯಕಾರಿಣಿ ಸದಸ್ಯರೂ ಹಾಗೂ ನಿವೃತ್ತ ಗಣಿತ ಪ್ರಾಧ್ಯಾಪಕರೂ ಆದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಇವರು ಕುಟುಂಬ ಪ್ರಬೋಧನ ವಿಷಯದಲ್ಲಿ ಮಾರ್ಗದರ್ಶನ ಮಾಡಿದರು. ಭಾರತೀಯ ಸಂಸ್ಕೃತಿಯ ಮಹತ್ವ, ಇದರ ರಕ್ಷಣೆಯಲ್ಲಿ ಕುಟುಂಬಗಳ ಜವಾಬ್ದಾರಿ, ಭಾರತೀಯ ಸಂಸ್ಕೃತಿಯು ಇಂದು ದುರ್ಬಲಗೊಳ್ಳುತ್ತಿರುವ […]
ಯಕ್ಷ ‘ಗಾನ ಗಂಧರ್ವ’ ಬಲಿಪ ನಾರಾಯಣ ಭಾಗವತರ ಅಗಲಿಕೆಯಿಂದ ಬಡವಾಯ್ತು ಯಕ್ಷರಂಗ
ಮಂಗಳೂರು: ಕರಾವಳಿಯ ಗಂಡುಕಲೆ ಯಕ್ಷಗಾನದ ತೆಂಕುತಿಟ್ಟಿನ ಪ್ರಖ್ಯಾತ ಭಾಗವತ ಬಲಿಪ ನಾರಾಯಣ ಭಾಗವತ ಅವರು ಗುರುವಾರದಂದು ಇಹಲೋಕ ತ್ಯಜಿಸಿ ದೇವರ ಪಾದ ಸೇರಿದ್ದಾರೆ. ಯಕ್ಷ ಗಾನದ ಗಂಧರ್ವ ಕಂಚಿನ ಕಂಠದ ಬಲಿಪರ ನಿಧನದಿಂದ ಯಕ್ಷರಂಗ ಬಡವಾಗಿದೆ. ಬಲಿಪರಿಗೆ 84 ವರ್ಷ ವಯಸ್ಸಾಗಿತ್ತು. ಬಲಿಪ ನಾರಾಯಣ ಭಾಗವತರು ಮೂಲತಃ ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದವರು. ಮೂಡಬಿದಿರೆಯ ಸಮೀಪದ ನೂಯಿ ಎಂಬಲ್ಲಿ ವಾಸವಾಗಿದ್ದ ಇವರು, ಕಟೀಲು ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮೇಳದಲ್ಲಿ ಹಲವಾರು ವರ್ಷ ಭಾಗವತರಾಗಿ ಸೇವೆ ಸಲ್ಲಿಸಿದ್ದರು. ಯಕ್ಷಗಾನದ ಹಲವಾರು […]