ಡಾ.ರಾಘವ ನಂಬಿಯಾರ್ ಅವರಿಗೆ ನಿಟ್ಟೂರು ಭೋಜಪ್ಪ ಸುವರ್ಣ ಸ್ಮಾರಕ ಪ್ರಶಸ್ತಿ ಪ್ರದಾನ
ಉಡುಪಿ: ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧಿ ಪಡೆದಿರುವ ಯಕ್ಷಗಾನದ ಉಳಿವಿಗೆ ಕಲಾವಿದರು, ಆ ರಂಗದಲ್ಲಿ ಸಾಧನೆ ಮಾಡಿದ ವಿದ್ವಾಂಸರು ಹಾಗೂ ಕಲಾ ಸಂಸ್ಥೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವುದು ಅತ್ಯಗತ ಎಂದು ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ, ಕರ್ನಾಟಕ ಜಾನಪದ ಪರಿಷತ್‌ನ ಉಡುಪಿ ಜಿಲ್ಲಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಯಕ್ಷಗಾನ ಕಲಾಕ್ಷೇತ್ರ ಉಡುಪಿ ಗುಂಡಿಬೈಲು ಇದರ ವತಿಯಿಂದ ಗುಂಡಿಬೈಲಿನ ತಲ್ಲೂರು ಗಾರ್ಡನ್ ರಂಗ ಮಂಟಪದಲ್ಲಿ ಭಾನುವಾರ ನಡೆದ ನಿಟ್ಟೂರು ಭೋಜಪ್ಪ ಸುವರ್ಣ ಸ್ಮಾರಕ ಪ್ರಶಸ್ತಿ ಪ್ರದಾನ ಹಾಗೂ […]
ಗೋಸಾಕಣೆ ಹಾಗೂ ಕೃಷಿ ಕ್ಷೇತ್ರ ಲಾಭದಾಯಕ ಎನ್ನುವುದಕ್ಕೆ ಮುನಿಯಾಲು ಗೋಧಾಮ ಸಾಕ್ಷಿ: ಡಾ. ಎಚ್. ಎಲ್ ಮಂಜುನಾಥ್
ಕಾರ್ಕಳ: ಮುನಿಯಾಲು ಗೋಧಾಮಕ್ಕೆ ಭೇಟಿ ನೀಡಿರುವುದು ಅಮೂಲ್ಯ ಕ್ಷಣ. ಒಬ್ಬ ಕೈಗಾರಿಕೋದ್ಯಮಿ ಪರಿಸರ ಪ್ರೇಮಿಯಾಗಿ ದೇಶೀಯ ಗೋವುಗಳ ಜೊತೆ ಕೃಷಿಯನ್ನು ಕೂಡಾ ಹೇಗೆ ಮಾಡಬಹುದೆಂದು ತೋರಿಸಿಕೊಟ್ಟಿರುವ ರೀತಿ ಎಲ್ಲರಿಗೂ ಮಾದರಿ. ಕೃಷಿಕರು ಸರಿಯಾದ ನಿಟ್ಟಿನಲ್ಲಿ ಯೋಚಿಸಿ ಕೃಷಿ ಮಾಡಿದಲ್ಲಿ ಈ ಕ್ಷೇತ್ರವೂ ಲಾಭಾದಾಯಕವಾಗಲಿದೆ ಎನ್ನುವುದಕ್ಕೆ ಮುನಿಯಾಲು ಗೋಧಾಮ ಸಾಕ್ಷಿಯಾಗಿ ನಿಂತಿದೆ. ಇಲ್ಲಿನ ಗೋಧಾಮ ಗೋಲೋಕವನ್ನೇ ಸೃಷ್ಟಿಸಿದ್ದು, ದೇಶಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಚ್. ಎಲ್ […]