ಒಂದು ಸಾವಿರ ಗೋವುಗಳ ದತ್ತು ಸ್ವೀಕಾರ ಸಂಕಲ್ಪ
ಉಡುಪಿ ಜಿಲ್ಲೆಯ ವಿವಿಧ ಗೋಶಾಲೆಗಳ ಸುಮಾರು ಒಂದು ಸಾವಿರ ಗೋವುಗಳನ್ನು ದತ್ತು ಸ್ವೀಕಾರ ನಡೆಸಲು ಉದ್ದೇಶಿಸಿರುವ ವಂದೇ ಗೋಮಾತರಂ ಕಾರ್ಯಕ್ರಮದ ಸಭೆ ಬಹ್ಮಾವರದ ಬಂಟರ ಭವನದಲ್ಲಿ ನಡೆಯಿತು. ಸಭೆಯಲ್ಲಿ ಉಡುಪಿ ಜಿಲ್ಲೆಯ ವಿವಿಧ ಗೋಶಾಲೆಗಳಲ್ಲಿ ಗೋವುಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಈ ಎಲ್ಲಾ ಗೋಶಾಲೆಗಳಲ್ಲಿರುವ ಒಂದು ಸಾವಿರ ಹಸುಗಳನ್ನು ವಿವಿಧ ಸಂಘಸಂಸ್ಥೆಗಳು ಸಹಿತ ಗೋಪ್ರೇಮಿಗಳು ದತ್ತು ಸ್ವೀಕಾರ ಮಾಡುವ ರೂಪುರೇಷೆಗಳ ಕುರಿತಾಗಿ ಚರ್ಚೆ ನಡೆಯಿತು. ವಂದೇ ಗೋಮಾತರಂ ಸಾವಿರ ಗೋವುಗಳ ದತ್ತು ಸ್ವೀಕಾರ ಸಂಕಲ್ಪದ ರುವಾರಿ, […]
ಕರಾವಳಿ ಯೂತ್ ಕ್ಲಬ್ ತಂಡದಿಂದ ಫೆ.14ರ ದಿನವನ್ನು ದೇಶ ಪ್ರೇಮಿಗಳ ದಿನಾಚರಣೆಯನ್ನಾಗಿ ವಿಶೇಷವಾಗಿ ಆಚರಣೆ
ಉಡುಪಿ: ಕರಾವಳಿ ಯೂತ್ ಕ್ಲಬ್ ತಂಡದಿಂದ ಫೆಬ್ರವರಿ 14ರ ದಿನವನ್ನು ದೇಶ ಪ್ರೇಮಿಗಳ ದಿನಾಚರಣೆಯನ್ನಾಗಿ ವಿಶೇಷವಾಗಿ ಆಚರಿಸಲಾಯಿತು. ಉಡುಪಿಯ ಅಜ್ಜರಕಾಡಿನಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಿ ಫುಲ್ವಾಮಾ ದಾಳಿಯಲ್ಲಿ ಮೃತಪಟ್ಟ ವೀರ ಹುತಾತ್ಮ ಸೈನಿಕರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವುದರ ಮೂಲಕ ಹಾಗೂ ದೇಶಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿರುವ ನಿವೃತ್ತ ಸೈನಿಕರಾದ ಸಂಜಯ್ ಗುಡುಪ್ಕರ್ ಮತ್ತು ಪ್ರಕಾಶ್ ಇಂಗಲ್ಗೆ ಇವರಿಗೆ ಹೂಗುಚ್ಛ ನೀಡಿ ಗೌರವ ವಂದನೆಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕರಾವಳಿ ಯೂತ್ ಕ್ಲಬ್ ನ ಸದಸ್ಯರು ಉಪಸಿದ್ಧರಿದ್ದರು.
ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ತುಳು ಭಾಷಣ ಸ್ಪರ್ಧೆ: ಕುಮಾರಿ ರಶ್ಮಿತಾ ಪ್ರಥಮ
ಉಡುಪಿ: ಕರ್ನಾಟಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆಸಿದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ತುಳು ಭಾಷಣ ವಿಭಾಗದಲ್ಲಿ ಉಡುಪಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹತ್ತನೇ ತರಗತಿಯಲ್ಲಿ ಓದುತ್ತಿರುವ ಕುಮಾರಿ ರಶ್ಮಿತಾ ಪ್ರಥಮ ಸ್ಥಾನವನ್ನು ಪಡೆದು ನಾಲ್ಕು ಸಾವಿರ ರೂಪಾಯಿ ನಗದು ಮತ್ತು ಶಾಶ್ವತ ಫಲಕವನ್ನು ತನ್ನದಾಗಿಸಿಕೊಂಡಿದ್ದಾರೆ. ಈಕೆ ಕಾಪು ಚಂದ್ರನಗರ ನಿವಾಸಿಗಳಾದ ಕಾಂತಿ ರಮೇಶ ಮೂಲ್ಯ ದಂಪತಿಗಳ ಪುತ್ರಿ.
ಕಾರ್ಕಳ ತಾಲೂಕು 18ನೇ ಸಾಹಿತ್ಯ ಸಮ್ಮೇಳನ
ಕಾರ್ಕಳ: ಕನ್ನಡ ಸಾಹಿತ್ಯ ಪರಿಷತ್ ಇದರ ಆಶಯದಲ್ಲಿ ಕಾರ್ಕಳ ತಾಲೂಕು 18ನೇ ಸಾಹಿತ್ಯ ಸಮ್ಮೇಳನವು ಎಸ್. ವಿ. ಟಿ ವಿದ್ಯಾಸಂಸ್ಥೆಯಲ್ಲಿ ಜರಗಿದ್ದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಕಾರ್ಕಳ ಸೇವಾಕೇಂದ್ರದಿಂದ ಪುಸ್ತಕ ಮಳಿಗೆಯನ್ನು ಆಯೋಜಿಸಿದ್ದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ರವರು ಬೇಟಿ ನೀಡಿ ಶುಭ ಹಾರೈಸಿದರು. ಕಾರ್ಕಳ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಕಾರ್ಕಳ ಸೇವಾಕೇಂದ್ರದ ಸಂಚಾಲಕಿ ಬಿ.ಕೆ. ವಿಜಯಲಕ್ಷ್ಮಿಯವರು ಈಶ್ವರೀಯ ಸಾಹಿತ್ಯ ನೀಡಿ ಗೌರವಿಸಿದರು. […]
ಗಿರಿಜನ ಉಪಯೋಜನೆ ಹಾಗೂ ವಿಶೇಷ ಘಟಕ ಯೋಜನೆಯಡಿ ಗುರು ಶಿಷ್ಯ ಪರಂಪರೆ ತರಬೇತಿ
ಉಡುಪಿ: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಗಿರಿಜನ ಉಪಯೋಜನೆ ಹಾಗೂ ವಿಶೇಷ ಘಟಕ ಯೋಜನೆಯಡಿ ಗುರುಶಿಷ್ಯ ಪರಂಪರೆಯಲ್ಲಿ ಅಕಾಡೆಮಿ ವ್ಯಾಪ್ತಿಯೊಳಗೆ ಬರುವ ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ನೃತ್ಯ (ಭರತನಾಟ್ಯ, ಕಥಕ್, ಕೂಚಿಪುಡಿ), ಕಥಾಕೀರ್ತನ ಮತ್ತು ಗಮಕ ಕ್ಷೇತ್ರಗಳಲ್ಲಿ ಯುವ ಕಲಾವಿದರಲ್ಲಿ ಕಲಾ ನೈಪುಣ್ಯತೆಯನ್ನು ಹೆಚ್ಚಿಸುವ ಸಲುವಾಗಿ ಪ್ರತಿಷ್ಠಿತ ಸಂಸ್ಥೆಯ ಗುರಗಳ ಮೂಲಕ 5 ತಿಂಗಳ ಸಂಗೀತ ನೃತ್ಯ ತರಬೇತಿ ಶಿಬಿರ ಹಮ್ಮಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಗುರುಶಿಷ್ಯ […]