ವಾಮಂಜೂರು ತಿರುವೈಲುಗುತ್ತು “ಸಂಕುಪೂಂಜ – ದೇವುಪೂಂಜ” ಜೋಡುಕರೆ ಕಂಬಳ ಕೂಟದ ಫಲಿತಾಂಶ

ಫೆ. 11 ರಂದು ನಡೆದ ವಾಮಂಜೂರು ತಿರುವೈಲುಗುತ್ತು “ಸಂಕುಪೂಂಜ – ದೇವುಪೂಂಜ” ಜೋಡುಕರೆ ಕಂಬಳ ಕೂಟದ ಫಲಿತಾಂಶ ಇಂತಿದೆ ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : ಕನೆಹಲಗೆ: 05 ಜೊತೆ ಅಡ್ಡಹಲಗೆ: 06 ಜೊತೆ ಹಗ್ಗ ಹಿರಿಯ: 15 ಜೊತೆ ನೇಗಿಲು ಹಿರಿಯ: 28 ಜೊತೆ ಹಗ್ಗ ಕಿರಿಯ: 24 ಜೊತೆ ನೇಗಿಲು ಕಿರಿಯ: 72 ಜೊತೆ ಒಟ್ಟು ಕೋಣಗಳ ಸಂಖ್ಯೆ: 150 ಜೊತೆ ಕನೆಹಲಗೆ: ( ನೀರು ನೋಡಿ ಬಹುಮಾನ ) ಪ್ರಥಮ: ಬೇಲಾಡಿ ಬಾವ […]

ಸಾಮಾಜಿಕ ಅಧಿಕಾರಿತ ಶಿಬಿರ ಉದ್ಘಾಟನೆ: ವಿಕಲಚೇತನರಿಗೆ ಸಲಕರಣೆ ವಿತರಣೆ

ಉಡುಪಿ: ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ದಿವ್ಯಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆಯ, ಆರ್ಟಿಫಿಷಿಯಲ್ ಲಿಂಬ್ಸ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾದ ವತಿಯಿಂದ ಉಡುಪಿಯಲ್ಲಿ ನಡೆದ ಸಾಮಾಜಿಕ ಅಧಿಕಾರಿತ ಶಿಬಿರವನ್ನು ಶನಿವಾರದಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿಶೇಷ ಯೋಜನೆಯಡಿಯಲ್ಲಿ, ಜಿಲ್ಲೆಯ ವಿಕಲಚೇತನರಿಗೆ ಉಚಿತ ಸಾಧನ, ಸಲಕರಣೆಗಳನ್ನು ವಿತರಿಸಿದರು. ಉಡುಪಿ ಜಿಲ್ಲೆಯಾದ್ಯಂತ ನಡೆಸಿದ ವೈದ್ಯಕೀಯ ತಪಾಸಣಾ ಶಿಬಿರಗಳ ಒಟ್ಟು 1390 […]

ಆಂಧ್ರಪ್ರದೇಶದ ರಾಜ್ಯಪಾಲರಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಎಸ್. ಅಬ್ದುಲ್ ನಜೀರ್ ನೇಮಕ

ನವದೆಹಲಿ: ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಎಸ್ ಅಬ್ದುಲ್ ನಜೀರ್ ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ನೇಮಿಸಿದ್ದಾರೆ. ನ್ಯಾಯಮೂರ್ತಿ ನಜೀರ್ ಜನವರಿ 4 ರಂದು ನಿವೃತ್ತರಾದರು. ಅವರು ಐತಿಹಾಸಿಕ ಅಯೋಧ್ಯೆ ರಾಮ ಜನ್ಮಭೂಮಿ ತೀರ್ಪಿನ ಭಾಗವಾಗಿದ್ದರು. ಆಂಧ್ರಪ್ರದೇಶದ ಹಾಲಿ ರಾಜ್ಯಪಾಲ ಬಿಸ್ವ ಭೂಷಣ ಹರಿಚಂದನ್ ಅವರನ್ನು ಛತ್ತೀಸ್‌ಗಢದ ರಾಜ್ಯಪಾಲರನ್ನಾಗಿ ವರ್ಗಾವಣೆ ಮಾಡಲಾಗಿದೆ. ಅವಿಭಜಿತ ದ.ಕ ಜಿಲ್ಲೆಯ ಮೂಡಬಿದ್ರೆಯ ಬೆಳುವಾಯಿಯಲ್ಲಿ ಜಸ್ಟಿಸ್ ನಜೀರ್ ಅವರು ಜನವರಿ 5, 1958 ರಂದು ಜನಿಸಿದರು ಮತ್ತು […]

ಕೆಲಸ ಕಳೆದುಕೊಂಡಿದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾದ ಕಂಬಳದ ಯುವ ಓಟಗಾರ

ಉಡುಪಿ: ಕಂಬಳ ಒಟಗಾರ ಸುರೇಶ್ ಕಡಿನತಾರು (37)ಫೆ.9 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋರ್ಟ್ ಪ್ರೋಸೆಸ್ ಹುದ್ದೆಯಲ್ಲಿದ್ದ ಅವರು ಪ್ರಸ್ತುತ ಅಮಾನುತುಗೊಂಡಿದ್ದರು. ಇದರಿಂದ ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಶಿರೂರು ಟೋಲ್‌ಗೇಟ್ ಬಳಿ ನಿವಾಸಿಯಾಗಿದ್ದ ಸುರೇಶ್ ಶಿರೂರಿನ ತನ್ನ ಪತ್ನಿ ಮನೆಯಲ್ಲಿ ಫೆ.9ರಂದು ಮಧ್ಯಾಹ್ನ ಊಟ ಮುಗಿಸಿ ಮಲಗಿದ್ದು ಸಂಜೆ ಮನೆಯಿಂದ ಹೊರಬಂದಿದ್ದು ಆ ಬಳಿಕ ಪತ್ನಿ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದಾರೆ. ಅದರಲ್ಲಿ ‘ಸಾರಿ ಸಾರಿ ಸಾರಿ, ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಮನೆಯವರು […]