ಫೆ. 10 ರಂದು ಪುತ್ತೂರು ತೆಂಕಿಲ ಮೈದಾನದಲ್ಲಿ ಅದ್ದೂರಿ ಯಂತ್ರಮೇಳ ಹಾಗೂ ಕನಸಿನ ಮನೆ ಉದ್ಘಾಟನೆ
ಪುತ್ತೂರು: ಫೆ. 11 ರಂದು ಕ್ಯಾಂಪ್ಕೋದ ಸುವರ್ಣ ಮಹೋತ್ಸವ ಕಾರ್ಯಕ್ರಮ ತೆಂಕಿಲ ಮೈದಾನದಲ್ಲಿ ನಡೆಯಲಿದೆ. ಇದರಲ್ಲಿ ಕೇಂದ್ರ ಸಹಕಾರಿ ಸಚಿವ ಅಮಿತ್ ಷಾ, ರಾಜ್ಯ ಮುಖ್ಯ ಮಂತ್ರಿ ಬಸವ ರಾಜ್ ಬೊಮ್ಮಾಯಿ, ಮುಖಂಡರಾದ ಪ್ರಹ್ಲಾದ ಜೋಷಿ, ಕಲ್ಲಡ್ಕ ಪ್ರಭಾಕರ ಭಟ್, ಗೃಹ ಸಚಿವ ಅರಗ ಜ್ಞಾನೇಂದ್ರ, ಸಹಕಾರಿ ಸಚಿವ ಸೋಮಶೇಖರ್, ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಮೀನುಗಾರಿಕಾ ಸಚಿವ ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಸ್ಥಳೀಯ ಸಂಸದರು ಹಾಗೂ ಶಾಸಕರು ಭಾಗವಹಿಸಲಿದ್ದಾರೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ […]
ಜೆಇಇ ಮೈನ್ಸ್ ಪರೀಕ್ಷೆ: ಕಾರ್ಕಳ ಕ್ರಿಯೇಟಿವ್ ಕಾಲೇಜಿನ 17 ವಿದ್ಯಾರ್ಥಿಗಳಿಗೆ 95 ಕ್ಕಿಂತ ಅಧಿಕ ಪರ್ಸಂಟೈಲ್
ಜನವರಿ ತಿಂಗಳಿನಲ್ಲಿ ನಡೆದ ರಾಷ್ಟ್ರಮಟ್ಟದ ಜೆಇಇ ಪ್ರಥಮ ಹಂತದ ಪರೀಕ್ಷೆಯಲ್ಲಿ ಕ್ರಿಯೇಟಿವ್ ಪದವಿ ಪೂರ್ವಕಾಲೇಜಿನ 17ವಿದ್ಯಾರ್ಥಿಗಳು 95 ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿ ಉತ್ತಮ ಸಾಧನೆಗೈದಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳಾದ ಶ್ರೇಯಸ್ ಎಸ್ ಚಿಕಾಲೆ 97.6936, ಜಾರ್ಜ್ ಜೋಸೆಫ್ 97.6545, ಸಾತ್ವಿಕ್ ಎಸ್ ಶೆಟ್ಟಿ 97.3316 ಪರ್ಸಂಟೈಲ್ ಅಂಕಗಳಿಸಿದ್ದಾರೆ. 43 ವಿದ್ಯಾರ್ಥಿಗಳು 90ಕ್ಕಿಂತ ಅಧಿಕಪರ್ಸಂಟೈಲ್, 66 ವಿದ್ಯಾರ್ಥಿಗಳು 85 ಕ್ಕಿಂತ ಹೆಚ್ಚು ಪರ್ಸಂಟೈಲ್ ಅಂಕ ಗಳಿಸಿದ್ದಾರೆ. ಉದ್ಭವ್ ಎಂಆರ್ 96.6957, ಕಾರ್ತಿಕ್ ಕೃಷ್ಣಮೂರ್ತಿ ಹೆಗಡೆ 96.4800, ಜೀವನ್ ಎ […]
ಫೆ 10 ರಿಂದ 16 ರವರೆಗೆ ಮಂದಾರ್ತಿ ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಮಹೋತ್ಸವ
ಉಡುಪಿ: ಶ್ರೀ ಕ್ಷೇತ್ರ ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಸಕ್ತ ಸಾಲಿನ ವಾರ್ಷಿಕ ಮಹೋತ್ಸವವು ಫೆಬ್ರವರಿ 10 ರಿಂದ 16 ರ ವರೆಗೆ ನಡೆಯಲಿದೆ. ಫೆ. 13 ರಂದು ಕುಂಭ ಸಂಕ್ರಮಣ ಮತ್ತು ರಾತ್ರಿ 9 ಗಂಟೆಯಿಂದ ಕೆಂಡಸೇವೆ, ಫೆ. 14 ರಂದು ಮ. 12.30 ರಿಂದ ಮನ್ಮಹಾರಥಾರೋಹಣ ಮತ್ತು ಫೆ. 15 ರಂದು ರಾತ್ರಿ 8 ರಿಂದ ದೀಪೋತ್ಸವ, ಪಲ್ಲಕ್ಕಿ ಉತ್ಸವ ಹಾಗೂ ಅಷ್ಠಾವಧಾನ ಸೇವೆಗಳ ನಂತರ ಐದೂ ಮೇಳಗಳಿಂದ ಯಕ್ಷಗಾನ ಸೇವೆ ಆಟ ನಡೆಯಲಿದೆ ಎಂದು […]