ಶ್ರೀ ಮುದ್ರಾಡಿ ಅವರಿಗೆ 2022 ನೇ ಸಾಲಿನ “ಸಾರಾ ದತ್ತಿ ಪ್ರಶಸ್ತಿ”

ನಿಟ್ಟೆ: ಲೇಖಕಿ, ಕವಯಿತ್ರಿ ಶ್ರೀ ಮುದ್ರಾಡಿಯವರ ಚೊಚ್ಚಲ ಕವನ ಸಂಕಲನ ‘ಇಲ್ಲಗಳ ನಡುವೆ’ 2022 ನೇ ಸಾಲಿನ ರಾಜ್ಯಮಟ್ಟದ “ಸಾರಾ ದತ್ತಿ ಪ್ರಶಸ್ತಿ”ಯನ್ನು ಪಡೆದುಕೊಂಡಿದೆ. ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಕರಾವಳಿ ಲೇಖಕಿಯರ ವಾಚಕಿಯರ ಸಂಘದಿಂದ ಸಾರಾ ಅಬೂಬಕ್ಕರ್ ಅವರ ಹೆಸರಿನಲ್ಲಿ ಕೊಡಮಾಡುವ ಈ ಪ್ರಶಸ್ತಿಯನ್ನು ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.

ಬೆಳ್ಳಂಪಳ್ಳಿ: ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘದ ವತಿಯಿಂದ ಸಾರ್ವಜನಿಕ ಶನೈಶ್ಚರ ಪೂಜೆ

ಬೆಳ್ಳಂಪಳ್ಳಿ: ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ ಮತ್ತು ಶ್ರೀ ಕಾಳಿಕಾಂಬಾ ಮಹಿಳಾ ಭಜನಾ ಮಂಡಳಿ ಹಾವಂಜೆ – ಬೆಳ್ಳಂಪಳ್ಳಿ – ಕುಕ್ಕೆಹಳ್ಳಿ ವತಿಯಿಂದ 13ನೇ ವರ್ಷದ ಸಾರ್ವಜನಿಕ ಸಾಮೂಹಿಕ ಶನೈಶ್ಚರ ಪೂಜೆ ಮತ್ತು ಎಳ್ಳು ಗಂಟು ದೀಪ ಬೆಳಗುವಿಕೆ ಕಾರ್ಯಕ್ರಮವು ಫೆ. 11 ಶನಿವಾರದಂದು ಸಂಜೆ 3.00 ಗಂಟೆಯಿಂದ ವಿಶ್ವಕರ್ಮ ಸಮುದಾಯ ಭವನ, ಬೆಳ್ಳಂಪಳ್ಳಿ ಇಲ್ಲಿ ಜರುಗಲಿರುವುದು. ರಾಘವೇಂದ್ರ ಪುರೋಹಿತ್, ಕೀಳಿಂಜೆ ಅವರ ಪೌರೋಹಿತ್ಯದಲ್ಲಿ ಜರುಗಲಿರುವ ಪ್ರಕೃತ ಮಿಥುನ ರಾಶಿಯವರಿಗೆ ಅಷ್ಟಮದ ಶನಿ, ಕನ್ಯಾ ರಾಶಿಯವರಿಗೆ ಪಂಚಮದ […]

 ತ್ಯಾಜ್ಯ ನೀರನ್ನು ಮಳೆ ನೀರಿನ ಚರಂಡಿಗೆ ಬಿಡುವುದು ನಿಷೇಧ: ಸಾಲಿಗ್ರಾಮ ಪಟ್ಟಣ ಪಂಚಾಯತ್

ಕುಂದಾಪುರ: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕರು ಮನೆ, ಉದ್ಯಮ ಅಥವಾ ಕೈಗಾರಿಕೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಮಳೆ ನೀರಿನ ಚರಂಡಿಗೆ ಹರಿಯಬಿಡುವುದನ್ನು ನಿಷೇಧಿಸಲಾಗಿದೆ. ಪ್ರಕಟಣೆಯ 7 ದಿನಗಳ ಒಳಗಾಗಿ ತ್ಯಾಜ್ಯ ನೀರು ಮಳೆ ನೀರು ಚರಂಡಿಗೆ ಹರಿಯಬಿಡುತ್ತಿರುವುದನ್ನು ತಕ್ಷಣ ಸ್ಥಗಿತಗೊಳಿಸಿ, ತಮ್ಮ ಸ್ವಂತ ಜಾಗದಲ್ಲಿ ಸೆಪ್ಟಿಕ್ ಟ್ಯಾಂಕ್ ಅಥವಾ ಇಂಗು ಗುಂಡಿ ಮೂಲಕ ವಿಲೇ ಮಾಡಬೇಕು. ತಪ್ಪಿದ್ದಲ್ಲಿ ಪುರಸಭಾ ಅಧಿನಿಯಮದ ಪ್ರಕಾರ ಪ್ರಕರಣ ದಾಖಲಿಸಿ, ದಂಡ ವಸೂಲಿ ಮಾಡಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು […]

ಮತದಾನ ಜಾಗೃತಿ ಕುರಿತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಕಿರುಚಿತ್ರ ನಿರ್ಮಾಣ ಸ್ಪರ್ಧೆ

ಉಡುಪಿ: ಕರ್ನಾಟಕ ವಿಧಾನಸಭಾ ಚುನಾವಣೆಯ ಅಂಗವಾಗಿ ಉಡುಪಿ ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಮತದಾನ ಜಾಗೃತಿಯ ಕುರಿತ ಕಿರುಚಿತ್ರ ನಿರ್ಮಾಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕಿರುಚಿತ್ರದ ಅವಧಿಯು 30 ಸೆಕೆಂಡ್‌ಗಳಿಂದ ಗರಿಷ್ಠ 1 ನಿಮಿಷದ ಒಳಗಿರಬೇಕು. ವಿಷಯವು ಮತದಾರರಿಗೆ ತಮ್ಮ ಮತದ ಬಗ್ಗೆ ಹಾಗೂ ಮತದಾನ ಮಾಡಲು ಅರಿವು ಮೂಡಿಸುವಂತಿರಬೇಕು. ವೀಡಿಯೋ ಹಾಗೂ ಧ್ವನಿ ಉತ್ತಮವಾಗಿರಬೇಕು ಹಾಗೂ ವಿಷಯಕ್ಕೆ ತಕ್ಕಂತೆ ವೇಷಭೂಷಣವಿರಬೇಕು. ಕಿರುಚಿತ್ರವು ರಾಜಕೀಯ ವ್ಯಕ್ತಿ, ಪಕ್ಷ, ಚಿಹ್ನೆ, ಅಭ್ಯರ್ಥಿಯ ಕುರಿತು ವಿಷಯ ಹಾಗೂ ದೃಶ್ಯವನ್ನು ಒಳಗೊಂಡಿರಬಾರದು. ಯಾವುದೇ […]

ಕಾಪು: ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ಕಾರ್ಯದರ್ಶಿಯಾಗಿ ಬಡ್ತಿ ಹೊಂದಿದ ಫಾರೂಕ್ ಚಂದ್ರನಗರ ಇವರಿಗೆ ಸನ್ಮಾನ

ಕಾಪು: ಕಾಪು ತಾಲೂಕು ಮುಸ್ಲಿಂ ಮುಖಂಡರಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಕ್ಕೆ ರಾಜ್ಯ ಕಾರ್ಯದರ್ಶಿಯಾಗಿ ಬಡ್ತಿ ಹೊಂದಿದ ಫಾರೂಕ್ ಚಂದ್ರನಗರ ಇವರ ಸನ್ಮಾನ ಕಾರ್ಯಕ್ರಮವನ್ನು ಬಟರ್ ಫ್ಲೈ ಗೆಸ್ಟ್ ಹೌಸ್ ನಲ್ಲಿ ನೂರಾರು ಗಣ್ಯರ ಸಮ್ಮುಖದಲ್ಲಿ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೆ.ಪಿ.ಸಿ.ಸಿ ವಕ್ತಾರ ಅಬ್ದುಲ್ ಮುನೀರ್, ಫಾರೂಕ್ ಚಂದ್ರನಗರ ಇವರು ಕಾಂಗ್ರೆಸ್ ಪಕ್ಷದಲ್ಲಿ 18 ವರ್ಷದಿಂದ ಸಾಮಾನ್ಯ ಕಾರ್ಯಕರ್ತರಾಗಿ, ಬೂತ್ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಹಲವಾರು ಹುದ್ದೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಈ ಮೊದಲು 2 […]