ಶ್ರೀಮತಿ ಐರಿನ್ ಪಿಂಟೋ ಇವರಿಗೆ ಕೊಂಕಣಿ ಲೇಖಕ ಸಂಘ ಪ್ರಶಸ್ತಿ

ಮಂಗಳೂರು: ಇಲ್ಲಿನ ಬಲ್ಮಠದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಂಕಣಿ ಲೇಖಕರ ಸಂಘವು ಕೊಡಮಾಡುವ ಕೊಂಕಣಿ ಲೇಖಕ ಸಂಘ ಪ್ರಶಸ್ತಿ-2023 ಅನ್ನು ಕೊಂಕಣಿ ಲೇಖಕಿ ಶ್ರೀಮತಿ ಐರಿನ್ ಪಿಂಟೋ ಇವರಿಗೆ ನಂತೂರು ಬಜ್ಜೋಡಿಯಲ್ಲಿರುವ ಸಂದೇಶ ಪ್ರತಿಷ್ಠಾನ ಸಭಾಂಗಣಾದಲ್ಲಿ ಫೆ.25 ರಂದು ಸಂಜೆ 6.30 ಕ್ಕೆ ನೀಡಲಾಗುವುದು ಎಂದು ಕಾರ್ಯಕ್ರಮದ ಸಂಚಾಲಕ ರಿಚರ್ಡ್ ಮೋರಾಸ್ ತಿಳಿಸಿದರು. ಅವರು ಮಂಗಳವಾರದಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪ್ರಶಸ್ತಿಯು 25000 ರೂ ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ತಿಳಿಸಿದರು. […]
ಹಿರಿಯ ಸಿವಿಲ್ ನ್ಯಾಯಧೀಶರಿಂದ ಸ್ಮಶಾನ ಜಾಗ ಒತ್ತುವರಿ ಪರಿಶೀಲನೆ

ಉಡುಪಿ: ಕರ್ನಾಟಕ ಉಚ್ಛ ನ್ಯಾಯಾಲಯ ಮತ್ತು ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಪ್ರಕರಣ ಸಂಖ್ಯೆ CCC 343/2020 C/w WPNo.15165/2018 ಕ್ಕೆ ಸಂಬಂಧಿಸಿದಂತೆ 18-1-2023 ರಲ್ಲಿ ನೀಡಿದ ನಿರ್ದೇಶನದಂತೆ, ರಾಜ್ಯಾದ್ಯಂತ ಸ್ಮಶಾನ ಭೂಮಿಗಳ ಒತ್ತುವರಿ ಬಗ್ಗೆ ಜಿಲ್ಲೆಯ ನ್ಯಾಯಾಧೀಶರಿಂದ ಪರಿಶೀಲನೆ ನಡೆಸಲಾಗುತ್ತಿದೆ. ಅದರಂತೆ ಉಡುಪಿ ಜಿಲ್ಲೆಯಲ್ಲಿನ ಒಟ್ಟು 313 ಸ್ಮಶಾನ ಮತ್ತು ಸ್ಮಶಾನಕ್ಕೆ ಕಾಯ್ದಿರಿಸಿದ ಭೂಮಿಗಳ ಒತ್ತುವರಿ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾಯದರ್ಶಿ ಶರ್ಮಿಳಾ […]
ಭೂಕಂಪ ಸಂತ್ರಸ್ತ ಟರ್ಕಿಗೆ ಭಾರತದ ಸಹಾಯಹಸ್ತ: ಶ್ವಾನದಳದೊಂದಿಗೆ ಎನ್.ಡಿ. ಆರ್.ಎಫ್ ತಂಡದಿಂದ ರಕ್ಷಣಾ ಕಾರ್ಯ

ಸೈಪ್ರಸ್: ಟರ್ಕಿಯಲ್ಲಿ ನಿನ್ನೆ 7.8, 7.6 ಮತ್ತು 6.0 ತೀವ್ರತೆಯ ಸತತ ಮೂರು ವಿನಾಶಕಾರಿ ಭೂಕಂಪಗಳಿಂದ 3,400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿವೆ. ಕಟ್ಟಡಗಳು ತರಗೆಲೆಗಳಂತೆ ಉದುರಿದ್ದು, ಈ ಕಟ್ಟಡಗಳ ಅವಶೇಷಗಳಡಿಯಲ್ಲಿ ಅದೆಷ್ಟು ಜನ ರಕ್ಷಣೆಗಾಗಿ ಕಾಯುತ್ತಿದ್ದಾರೆ ಎನ್ನುವ ಲೆಕ್ಕವೇ ಇಲ್ಲ. ಇದೀಗ, ವಿಶೇಷ ತರಬೇತಿ ಪಡೆದ ಶ್ವಾನದಳದೊಂದಿಗೆ ಭಾರತದ ಎನ್.ಡಿ.ಆರ್.ಎಫ್ ಸಿಬ್ಬಂದಿಗಳ ತಂಡವು ಅಗತ್ಯ ಸಲಕರಣೆಗಳೊಂದಿಗೆ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗಾಗಿ ಟರ್ಕಿಗೆ ತೆರಳಿದೆ. ಟರ್ಕಿಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು […]
ಸಿ.ಎ ಫೌಂಡೇಶನ್ ಪರೀಕ್ಷೆ: ಕ್ರಿಯೇಟಿವ್ ಕಾಲೇಜಿನ ದೀಕ್ಷಾಆಚಾರ್ಯ ಹಾಗೂ ಶ್ರಾವ್ಯಾ ಸಿ.ಎಸ್ ಉತ್ತೀರ್ಣ

ಕಾರ್ಕಳ: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ(ICAI) ಡಿಸೆಂಬರ್ ತಿಂಗಳಿನಲ್ಲಿ ನಡೆಸಿದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪಿ.ಯು ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ದೀಕ್ಷಾ ಆಚಾರ್ಯ ಮತ್ತು ಶ್ರಾವ್ಯಾ ಸಿ.ಎಸ್ ಉತ್ತಮ ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ. ಕ್ರಿಯೇಟಿವ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಥಮ ಪಿ.ಯು.ಸಿ ಯಿಂದಲೇ ಸಿ.ಎ ಮತ್ತು ಸಿ.ಎಸ್.ಇ.ಇ. ಟಿ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಈ ಹಿಂದೆ ಜೂನ್ ತಿಂಗಳಲ್ಲಿ ನಡೆಸಿದ ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ಕ್ರಿಯೇಟಿವ್ ಪಿಯು ಕಾಲೇಜಿನ […]
ಚಿತ್ರಗಳಲ್ಲಡಗಿದೆ ಕನ್ನಡದ ಅಕ್ಷರಮಾಲೆ: ಸೃಜನಶೀಲ ಕಲಿಕಾ ವಿಧಾನ ಎಂದ ಪ್ರಧಾನಿ ಮೋದಿ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕನ್ನಡ ಕಲಿಕೆಯ ಬಗ್ಗೆ ಕನ್ನಡಿಗರಲ್ಲೇ ನಿರುತ್ಸಾಹ ಕಂಡುಬರುತ್ತಿದೆ. ಚಿಕ್ಕ ಮಕ್ಕಳಿಗಂತೂ ಇವತ್ತು ಕನ್ನಡವೆಂದರೆ ಕಬ್ಬಿಣದ ಕಡಲೆಯಂತಾಗಿದೆ. ಇಂಗ್ಲೀಷ್ ಭಾಷಾ ವ್ಯಾಮೋಹದಿಂದಾಗಿ ಕನ್ನಡ ನಿರಂತರ ಸೊರಗುತ್ತಿದೆ. ಈ ಮಧ್ಯೆ ಟ್ವಿಟರ್ ನಲ್ಲಿ ಬಳಕೆದಾರರೊಬ್ಬರು ವಿನೂತನ ವಿಧಾನದಲ್ಲಿ ಕನ್ನಡದ ಅಕ್ಷರಮಾಲೆಯನ್ನು ಕಲಿಸಬಹುದಾದ ಚಿತ್ರವನ್ನು ಹಂಚಿಕೊಂಡಿದ್ದಾರೆ. ” 49 ರಲ್ಲಿ 46 ಅಕ್ಷರಗಳು ಚಿತ್ರಗಳ ಸುಳಿವುಗಳನ್ನು ಹೊಂದಿವೆ. ಮಕ್ಕಳಿಗೆ ಕನ್ನಡ ವರ್ಣಮಾಲೆಗಳನ್ನು ಕಲಿಸುವ ಅದ್ಭುತ ವಿಧಾನ. (ಆದರೂ ನನಗೆ ಇದರ ರಚನಕಾರರು ಗೊತ್ತಿಲ್ಲ) ನೀವು ಎಷ್ಟನ್ನು ಊಹಿಸಬಹುದು? […]