ಸೂರ್ಯಾಸ್ತದ ನಂತರ ಪಶ್ಚಿಮ ಆಗಸದಲ್ಲಿ ಬೆರಗುಗೊಳಿಸುವ ದೃಶ್ಯ: ಮಾರ್ಚ್ 1 ರಂದು ಗುರು ಮತ್ತು ಶುಕ್ರ ಸಂಯೋಗ!

ಸೂರ್ಯಾಸ್ತದ ನಂತರ ಬೆರಗುಗೊಳಿಸುವ ಶುಕ್ರ ಗ್ರಹ ಮತ್ತು ಪ್ರಕಾಶಮಾನ ಗುರು ಗ್ರಹ ಪರಸ್ಪರ ಹತ್ತಿರ ಬರುವುದನ್ನು ಪಶ್ಚಿಮ ಆಗಸದಲ್ಲಿ ಕಾಣಬಹುದಾಗಿದೆ. ಸೂರ್ಯಾಸ್ತದ ಬಳಿಕ ಗುರು ಮತ್ತು ಶುಕ್ರಗ್ರಹಗಳು ಹತ್ತಿರದಲ್ಲಿರುವಂತೆ ಕಂಡುಬರುತ್ತದೆ ಮತ್ತು ಸುಮಾರು 2 ಗಂಟೆಗಳ ನಂತರ ಗ್ರಹಗಳು ದಿಗಂತದಲ್ಲಿ ಕಣ್ಮರೆಯಾಗುತ್ತವೆ. ಮಾರ್ಚ್ 1 ಶುಕ್ರವು ಗುರುಗ್ರಹದಿಂದ ಆಕಾಶದ ಮೇಲೆ 0.5 ಡಿಗ್ರಿಗಳಷ್ಟು ಹಾದುಹೋಗುತ್ತದೆ. ಎರಡೂ ಪ್ರಕಾಶಮಾನವಾದ ಗ್ರಹಗಳಾದರೂ ಶುಕ್ರವು ಗುರುವಿಗಿಂತ ಹೆಚ್ಚು ಪ್ರಕಾಶಮಾನವಾಗಿರುತ್ತದೆ. ಸೂರ್ಯ ಮತ್ತು ಚಂದ್ರರ ಬಳಿಕ ಆಕಾಶದಲ್ಲಿ ಅತ್ಯಂತ ಪ್ರಕಾಶಮಾನವಾಗಿ ಹೊಳೆಯುವ ಗ್ರಹ […]
ಉಡುಪಿ: ಅಮೆಜಾನ್ ನಲ್ಲಿ ಕ್ಷೇತ್ರ ಮಾರಾಟ ಕಾರ್ಯನಿರ್ವಾಹಕ ಹುದ್ದೆ ಖಾಲಿ

ಉಡುಪಿ ಯಲ್ಲಿ ಅಮೆಜಾನ್ ಸಂಸ್ಥೆಯಲ್ಲಿ ಕ್ಷೇತ್ರ ಮಾರಾಟ ಕಾರ್ಯನಿರ್ವಾಹಕರು ಬೇಕಾಗಿದ್ದಾರೆ. ಪಾತ್ರಗಳು ಮತ್ತು ಜವಾಬ್ದಾರಿಗಳು: • ವ್ಯಾಪಾರಿಗಳು ಅಥವಾ ಅಂಗಡಿಗಳಿಗೆ ಎಫ್.ಎಂ.ಸಿ.ಜಿ ಉತ್ಪನ್ನಗಳನ್ನು ಪರಿಚಯಿಸುವುದು ಮತ್ತು ಪ್ರಚಾರ ಮಾಡುವುದು • ಹೊಸ ಉತ್ಪನ್ನಗಳು ಮತ್ತು ಯಾವುದೇ ವಿಶೇಷ ಡೀಲ್‌ಗಳನ್ನು ಪ್ರಚಾರ ಮಾಡುವುದು. • ವಿತರಣಾ ವೇಳಾಪಟ್ಟಿಗಳು ಮತ್ತು ಮಾರಾಟದ ನಂತರದ ಸೇವೆಯ ಬಗ್ಗೆ ಗ್ರಾಹಕರಿಗೆ ಸಲಹೆ ನೀಡುವುದು. • ಆರ್ಡರ್‌ಗಳನ್ನು ರೆಕಾರ್ಡ್ ಮಾಡುವುದು ಮತ್ತು ಮಾರಾಟ ಕಚೇರಿಗೆ ವಿವರಗಳನ್ನು ಕಳುಹಿಸುವುದು. • ಮಾರಾಟದ ಪ್ರವೃತ್ತಿಗಳ ಬಗ್ಗೆ ಪ್ರತಿಕ್ರಿಯೆ […]
ಫೆ. 9 ರಂದು ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳ

ಉಡುಪಿ: ಜಿಲ್ಲಾ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಫೆಬ್ರವರಿ 9 ರಂದು ಬೆಳಗ್ಗೆ 10.30 ಕ್ಕೆ ನಗರದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಬಿ.ಕಾಂ, ಬಿ.ಇ ಇಂಜಿನಿಯರಿಂಗ್, ಡಿಪ್ಲೋಮಾ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ಅಂಕಪಟ್ಟಿ, ಸ್ವ-ವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್‌ಕಾರ್ಡ್ ಪ್ರತಿಯೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಧಿಕಾರಿ […]
ಹಿಂಡನ್ ಬರ್ಗ್ ವರದಿಯ ಸಮಗ್ರ ತನಿಖೆಗೆ ಆಗ್ರಹಿಸಿ ಕಾಂಗ್ರೆಸ್ ಧರಣಿ

ಉಡುಪಿ: ಸೋಮವಾರದಂದು ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಅದಾನಿ ವ್ಯವಹಾರದ ವಿರುದ್ಧ ಹಿಂಡನ್ ಬರ್ಗ್ ವರದಿಯ ಸಮಗ್ರ ತನಿಖೆಗೆ ಆಗ್ರಹಿಸಿ ಇಂದು ಉಡುಪಿ ಅಜ್ಜರಕಾಡುವಿನಲ್ಲಿರುವ ಎಲ್.ಐ.ಸಿ ಕಚೇರಿ ಎದುರು ಧರಣಿ ನಡೆಯಿತು. ಈ ವೇಳೆ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್ , ನಮ್ಮ ಹೋರಾಟ ಎಲ್‌ಐಸಿ ವಿರುದ್ಧ ಅಲ್ಲ. ಎಲ್.ಐ.ಸಿ ಗೆ ಆಗಿರುವ ಅನ್ಯಾಯಕ್ಕಾಗಿ ಸರಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ. ಕೆಲವು ಮಂದಿ ಸೇರಿ ದೇಶದ ಬ್ಯಾಂಕ್ ಗಳನ್ನು ಲೂಟಿ ಮಾಡುತ್ತಿದ್ದಾರೆ. ದೇಶದ 12 ಕೋಟಿ […]
ಫೆಬ್ರವರಿ 9 ರಂದು ಉಚಿತ ಮಾಸಿಕ ಉನ್ನತಿ ಉದ್ಯೋಗ ಮೇಳ

ಉಡುಪಿ: ಕೌಶಲ್ಯ ಶಿಕ್ಷಣಕ್ಕೆ ಸುಪ್ರಸಿದ್ಧ ಸಂಸ್ಥೆಯಾಗಿರುವ ಹಾಗೂ ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಪಾಲುದಾರ ಸಂಸ್ಥೆಯಾಗಿರುವ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಯಲ್ಲಿ ಜನವರಿ 12ರಂದು ‘ರಾಷ್ಟ್ರೀಯ ಯುವ ದಿನಾಚರಣೆ’ ಪ್ರಯುಕ್ತ ಪ್ರಾರಂಭಿಸಿರುವ ಉಚಿತ ಮಾಸಿಕ “ಉನ್ನತಿ ಉದ್ಯೋಗ ಮೇಳ”ದ ಎರಡನೇ ಮೇಳವು ಇದೇ ಫೆಬ್ರವರಿ 9, ಗುರುವಾರದಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1.30ರ ತನಕ ನಡೆಯಲಿದೆ. ಈಗಾಗಲೇ ಈ ಮೇಳದಲ್ಲಿ ಭಾಗವಹಿಸಲು 20ಕ್ಕೂ ಹೆಚ್ಚಿನ ಕಂಪನಿಗಳು, ಸಾವಿರಕ್ಕೂ ಹೆಚ್ಚಿನ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಬ್ಯಾಂಕಿಂಗ್, ಐಟಿ, ಐಟಿಇಎಸ್, […]