ಜೆಇಇ ಮೈನ್ ಪ್ರಥಮ ಹಂತದ ಪರೀಕ್ಷೆಯಲ್ಲಿ ಜ್ಞಾನಸುಧಾ ವಿದ್ಯಾರ್ಥಿಗಳ ಸಾಧನೆ
ಕಾರ್ಕಳ: ರಾಷ್ಟ್ರಮಟ್ಟದ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ಎನ್.ಟಿ.ಎ ನಡೆಸಿದ ಜೆಇಇ ಮೈನ್ ನ ಪ್ರಥಮ ಹಂತದ ಪರೀಕ್ಷೆಯ ಫಲಿತಾಂಶವು ಪ್ರಕಟವಾಗಿದ್ದು ಜ್ಞಾನಸುಧಾದ 6 ವಿದ್ಯಾರ್ಥಿಗಳು 98 ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ್ದಾರೆ. ಸಮೃದ್ಧ್ ನೆಲ್ಲಿ 98.84, ಪ್ರಣವ್ ಗುಜ್ಜರ್ 98.76, ಅರ್ಹನ್ ಎ ಕೆ.98.60, ಧ್ರುವ ಪಿ ಬಂದ್ರಕಲ್ಲಿ 98.3, ಧನ್ವಿತ್ ನಾಯಕ್ 98.37, ರೋಹಿತ್ ಹೆಗ್ಡೆ 98.18 ಪರ್ಸಂಟೈಲ್ ಪಡೆದಿದ್ದಾರೆ. ಭೌತ ಶಾಸ್ತ್ರದಲ್ಲಿ ಧನ್ವಿತ್ ನಾಯಕ್ (99.91) ರಸಾಯನ ಶಾಸ್ತ್ರದಲ್ಲಿ ಸಮ್ಯಕ್ ರಾವ್ (99.86), ಗಣಿತಶಾಸ್ತ್ರದಲ್ಲಿ ಶ್ರೇಯಸ್.ಆರ್.ಗೌಡ […]
ಜೆಇಇ ಮೈನ್ಸ್ ನಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಧನೆ
ಕುಂದಾಪುರ : ರಾಷ್ಟ್ರ ಮಟ್ಟದಲ್ಲಿ ಜರುಗಿದ 2023ನೇ ಸಾಲಿನ ಜೆಇಇ ಮೈನ್ಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ 5 ವಿದ್ಯಾರ್ಥಿಗಳು 85 ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ್ದಾರೆ. ಆಧುನಿಕ ಶಿಕ್ಷಣ ಪದ್ಧತಿಗೆ ಪೂರಕವಾಗುವಂತೆ ವಿದ್ಯಾರ್ಥಿಗಳಿಗೆ ಪ್ರಥಮ ಪಿಯುಸಿಯಿಂದಲೇ CET NEET JEE ಪರೀಕ್ಷೆಗೆ ತರಬೇತಿಯನ್ನು ನೀಡಿ ವಿದ್ಯಾರ್ಥಿಗಳನ್ನು ಕಾಲೇಜಿನಲ್ಲಿ ಸಜ್ಜುಗೊಳಿಸಲಾಗುತ್ತದೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದು, ತಮ್ಮ ಕಠಿಣ ಪರಿಶ್ರಮದೊಂದಿಗೆ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ನಿತೇಶ್ (94.58 ಪರ್ಸಂಟೈಲ್ ) […]
ಮಲ್ಪೆ: ಶ್ರೀ ರಾಮ ಮಂದಿರ ಅರ್ಚಕರ ವಸತಿ ಗೃಹ ಹಾಗೂ ಅತಿಥಿ ಗೃಹದ ಶಂಕುಸ್ಥಾಪನೆ
ಮಲ್ಪೆ: ಶ್ರೀರಾಮಮಂದಿರದಲ್ಲಿ ಇತ್ತೀಚಿಗೆ ಜರುಗಿದ ರಜತ ಸಂಭ್ರಮಕ್ಕೆ ಪೂರಕವಾಗಿ ನಡೆಯುವ ದ್ವಿತೀಯ ಹಂತದ ಅಭಿವೃದ್ಧಿ ಕಾರ್ಯಕ್ರಮದ ಅಂಗವಾಗಿ ಅರ್ಚಕರ ನೂತನ ವಸತಿ ಗೃಹ ಹಾಗೂ ಅತಿಥಿ ಗೃಹದ ಶಂಕು ಸ್ಥಾಪನೆ ಕಾರ್ಯಕ್ರಮವು ಇತ್ತೀಚಿಗೆ ನಡೆಯಿತು. ವೇದಮೂರ್ತಿ ಜಯದೇವ ಭಟ್ ಮತ್ತು ವಿಗ್ನೇಶ್ ಭಟ್ ಅವರ ನೇತೃತ್ವದಲ್ಲಿ ದಿ.ಟಿ.ಎಂ.ಎ . ಪೈಯವರ ಪುತ್ರ ಟಿ. ನಾರಾಯಣ ಪೈ ಮತ್ತು ಅವರ ಧರ್ಮಪತ್ನಿ ಶ್ರೀಮತಿ ವಿಜಯಲಕ್ಷ್ಮಿ ಪೈ ಇವರ ಹಸ್ತದಿಂದ, ಸಮಾಜದ ಹಿರಿಯರ ಉಪಸ್ಥಿತಿಯಲ್ಲಿ ಶಂಕುಸ್ಥಾಪನೆ ನೆರವೇರಿತು. ಈ ಸಂಧರ್ಭದಲ್ಲಿ […]
ಪ್ರಥಮ ಯಕ್ಷಗಾನ ಸಮ್ಮೇಳನಕ್ಕೆ ಭರದ ಸಿದ್ದತೆ: ರಘುಪತಿ ಭಟ್
ಉಡುಪಿ: ಫೆಬ್ರವರಿ 11 ಮತ್ತು 12ರಂದು ಉಡುಪಿಯಲ್ಲಿ ನಡೆಯುವ ಪ್ರಥಮ ಯಕ್ಷಗಾನ ಸಮ್ಮೇಳನಕ್ಕೆ ಸಿದ್ಧತೆಗಳು ಭರದಿಂದ ನಡೆಯುತ್ತಿವೆ ಎಂದು ಶಾಸಕ ರಘುಪತಿ ಭಟ್ ಹೇಳಿದರು. ಅವರು ಇಂದು ಎಂಜಿಎಂ ಮೈದಾನದಲ್ಲಿ ನಡೆದ ಯಕ್ಷಗಾನ ಸಮ್ಮೇಳನದ ಚಪ್ಪರ ಮಹೂರ್ತ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಮ್ಮೇಳನಕ್ಕೆ ಉಡುಪಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಭೆಗಳನ್ನು ನಡೆಸಲಾಗಿದ್ದು, ಯಕ್ಷಗಾನ ಕಲಾವಿದರು ಮತ್ತು ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದರು. ಎರಡು ದಿನ ನಡೆಯುವ ಈ ಸಮ್ಮೇಳನಕ್ಕೆ […]
2024 ರಲ್ಲಿ ಬರಲಿದೆ ಕಾಂತಾರ ಭಾಗ-1: ಪ್ರೀಕ್ವೆಲ್ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ರಿಷಬ್ ಶೆಟ್ಟಿ
ಬಹುಚರ್ಚಿತ ಮತ್ತು ವಿಶ್ವದಾದ್ಯಂತ ಜನಮನ್ನಣೆ ಗಳಿಸಿದ ಕಾಂತಾರ ಚಿತ್ರವು ಯಶಸ್ವಿ ನೂರು ದಿನಗಳನ್ನು ಪೂರೈಸಿದ್ದು, ಈ ಸಂದರ್ಭದಲ್ಲಿ ಕಾಂತಾರದ ಪೂರ್ವಾಭಾವಿ ಕಥೆಯನ್ನೊಳಗೊಂಡ ಕಾಂತಾರ ಪ್ರೀಕ್ವಲ್ ಅನ್ನು 2024ರಲ್ಲಿ ತೆರೆಗೆ ತರಲಿರುವುದಾಗಿ ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ. ಥಿಯೇಟರ್ಗಳಲ್ಲಿ “ಕಾಂತಾರ”ದ ಶತದಿನೋತ್ಸವವನ್ನು ಆಚರಿಸಲು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಿಷಬ್ ಬಹು ನಿರೀಕ್ಷಿತ ಚಿತ್ರದ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದಾರೆ. ಕಾಂತಾರ ಚಿತ್ರಕ್ಕೆ ಅಪಾರ ಪ್ರೀತಿ ಮತ್ತು ಬೆಂಬಲವನ್ನು ತೋರಿಸಿದ ಪ್ರೇಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ನಾವು ತುಂಬಾ ಸಂತೋಷದಲ್ಲಿದ್ದೇವೆ. ದೈವದ ಆಶೀರ್ವಾದದಿಂದ […]