14 ವರ್ಷಗಳ ಹಿಂದೆ ಪನ್ನಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ತಂದ ಮೊದಲ ಹುಲಿ ‘ಟಿ-1’ ಇನ್ನಿಲ್ಲ

ಪನ್ನಾ: 14 ವರ್ಷಗಳ ಹಿಂದೆ ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ತಂದ ಮೊದಲ ಹುಲಿ ‘ಟಿ-1’ ತನ್ನ ಸುದೀರ್ಘ ಪಯಣವನ್ನು ಮುಗಿಸಿ, ಕೊನೆಯುಸಿರೆಳೆದಿದೆ. 2009 ರಲ್ಲಿ ವಿಶೇಷ ಯೋಜನೆಯಡಿ ಪನ್ನಾ ಹುಲಿ ಸಂರಕ್ಷಿತ ಪ್ರದೇಶಕ್ಕೆ (ಪಿಟಿಆರ್) ತರಲಾದ ಮೊದಲ ಹುಲಿ ಟಿ-1 ಒಟ್ಟು 13 ಮರಿಗಳಿಗೆ ಜನ್ಮ ನೀಡಿತ್ತು. ಮಧ್ಯಪ್ರದೇಶದಲ್ಲಿ ಹುಲಿಗಳ ಮರುಪರಿಚಯ ಯೋಜನೆಯಡಿ 14 ವರ್ಷಗಳ ಹಿಂದೆ ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದಿಂದ ಈಕೆಯನ್ನು ಇಲ್ಲಿಗೆ ಕರೆತರಲಾಗಿತ್ತು. ಆಕೆ 13 ಮರಿಗಳಿಗೆ ಜನ್ಮ ನೀಡಿದ್ದು, […]
ಫೆ.5 ರಂದು ಶಿವಪಾಡಿಯಲ್ಲಿ ಶಾಲಾ ಮಕ್ಕಳಿಗಾಗಿ ಶಿವ ಚಿತ್ತಾರ

ಮಣಿಪಾಲ: ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ದಿ ಟ್ರಸ್ಟ್ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ‘ಶಿವಚಿತ್ತಾರ’ ವನ್ನು ಫೆ.5 ರಂದು ಬೆಳಿಗ್ಗೆ 9 ರಿಂದ 12 ಗಂಟೆವರೆಗೆ ಶ್ರೀ ಉಮಾಮಹೇಶ್ವರ ದೇವಸ್ಥಾನಲ್ಲಿ ಆಯೋಜಿಸಲಾಗಿದೆ. ಸ್ಪರ್ಧಾ ನಿಯಮ: 1 ಮತ್ತು 5 ನೇ ತರಗತಿಗೆ ಐಛ್ಛಿಕ ವಿಷಯ 7 ಮತ್ತು 8 ನೇ ತರಗತಿಗೆ ಐಛ್ಛಿಕ ವಿಷಯ 9 ಮತ್ತು 10 ನೇ ತರಗತಿಗೆ ತಾಂಡವ ಶಿವ, ಶಾಂತ ಶಿವ ರುದ್ರ ಶಿವ ವಿಷಯ […]
ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ರಾಜ್ಯ ಸಮಿತಿ ಕಾರ್ಯಕಾರಿಣಿ ಸಭೆ

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ರಾಜ್ಯ ಸಮಿತಿಯ ಕಾರ್ಯಕಾರಿಣಿ ಸಭೆಯು ಕೆ.ಪಿ.ಸಿ.ಸಿ ಕಛೇರಿ ರೇಸ್ ಕೋರ್ಸ್ ಬೆಂಗಳೂರು ಇಲ್ಲಿ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಅಬ್ದುಲ್ ಜಬ್ಬಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತ ರಾಜ್ಯ ಕಾರ್ಯದರ್ಶಿ ಫಾರೂಕ್ ಚಂದ್ರನಗರ ಮಾತನಾಡಿ, ರಾಜ್ಯದಲ್ಲಿ ಮುಂಬರುವ ಚುನಾವಣೆ ಬಗ್ಗೆ ಚರ್ಚೆ ನಡೆಸಿದರು. ಈಗಾಗಲೇ ಪ್ರತಿ ಕುಟುಂಬಕ್ಕೂ ಮಾಸಿಕ ಕರೆಂಟ್ 200 ಯುನಿಟ್ ಉಚಿತವಾಗಿ ನೀಡುವುದು ಹಾಗೂ ಪ್ರತಿ ತಿಂಗಳು ಮನೆಯ ಹೆಣ್ಣು ಮಕ್ಕಳಿಗೆ ಸಂಸಾರ ನಡೆಸಲು 2000 […]
ಕಾರ್ಕಳದಲ್ಲಿ ಮುತಾಲಿಕ್ ಸ್ಪರ್ಧೆ: ಬಿಜೆಪಿಯಿಂದ ಬೆಂಬಲದ ನಿರೀಕ್ಷೆ

ಕಾರ್ಕಳ: ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್, ಹಿಂದೂ ಸಮಾಜದ ಶ್ರೇಯಸ್ಸಿಗಾಗಿ ಬಿಜೆಪಿಯು ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೆ ತನ್ನನ್ನು ಬೆಂಬಲಿಸಬೇಕು ಎಂದು ಹೇಳಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದ ಶ್ರೀರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್, ಮುತಾಲಿಕ್ ರವರು 47 ವರ್ಷಗಳಿಂದ ಮನೆ ಮಠ ಕುಟುಂಬವನ್ನು ತ್ಯಜಿಸಿ ದೇಶ ಮತ್ತು ಧರ್ಮ ರಕ್ಷಣೆಗಾಗಿ ಹೋರಾಡುತ್ತಿದ್ದಾರೆ. ಈ ಹಿಂದೆ ರಾಜಕೀಯ ಅವಕಾಶಗಳಿದ್ದಾಗಲೂ ತಿರಸ್ಕರಿಸಿ ಸಂಘಟನೆಯಲ್ಲಿ ತೊಡಗಿಸಿಕೊಂಡು ದೇಶ […]
ಕಾರಿನಲ್ಲಿ ಆಕಸ್ಮಿಕ ಬೆಂಕಿ: ಗರ್ಭಿಣಿ ಮಹಿಳೆ ಮತ್ತು ಪತಿ ಸಜೀವ ದಹನ

ಕುಟ್ಟಿಯತ್ತೂರು: ಕೇರಳದ ಕುಟ್ಟಿಯತ್ತೂರು ಜಿಲ್ಲಾ ಸರ್ಕಾರಿ ಆಸ್ಪತ್ರೆ ಬಳಿ ಗುರುವಾರ ಸಂಭವಿಸಿದ ಭೀಕರ ದುರ್ಘಟನೆಯೊಂದರಲ್ಲಿ ಗರ್ಭಿಣಿ ಮಹಿಳೆ ಹಾಗೂ ಆಕೆಯ ಪತಿ ಪ್ರಯಾಣಿಸುತ್ತಿದ್ದ ಕಾರಿಗೆ ಬೆಂಕಿ ತಗುಲಿ ಸಜೀವ ದಹನರಾದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಲಿಯಾದವರನ್ನು ಜಿಲ್ಲೆಯ ಕುಟ್ಟಿಯತ್ತೂರು ಮೂಲದ ಪ್ರಿಜಿತ್ (35) ಮತ್ತು ಅವರ ಪತ್ನಿ ರೀಷಾ (26) ಎಂದು ಗುರುತಿಸಲಾಗಿದೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ರೀಷಾಳು ಇನ್ನಿತರರೊಂದಿಗೆ ಕಾರಿನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಕ್ಷಣ […]