ಸಿಎ ಫೌಂಡೇಷನ್ ಪರೀಕ್ಷೆ: ದೀಕ್ಷಾ ಎಂ. ಉತ್ತೀರ್ಣ
ಉಡುಪಿ: ಹೊಸದಿಲ್ಲಿಯ ಲೆಕ್ಕ ಪರಿಶೋಧಕರ ಸಂಸ್ಥೆ (ICAI) ಡಿಸೆಂಬರ್ 2022ರಲ್ಲಿ ನಡೆದ ಸಿಎ ಫೌಂಡೇಷನ್ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿಯೇ ದೀಕ್ಷಾ ಎಂ. 332 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ಇವರು ಸಿಎ ಫೌಂಡೇಷನ್ ತರಬೇತಿಯನ್ನು ಉಡುಪಿಯ ತ್ರಿಶಾ ಕ್ಲಾಸಸ್ನಲ್ಲಿ ಹಾಗೂ ತ್ರಿಶಾ ವಿದ್ಯಾ ಕಾಲೇಜ್ ಆಫ್ ಕಾಮರ್ಸ ಆಂಡ್ ಮ್ಯಾನೇಜಮೆಂಟ್ನಲ್ಲಿ ಬಿ.ಕಾಂ ಪದವಿಯ ವ್ಯಾಸಂಗವನ್ನು ನಡೆಸುತ್ತಿದ್ದಾರೆ. ಇವರು ಕಟಪಾಡಿಯ ಮಂಜುನಾಥ ಹೊಳ್ಳ ಮತ್ತು ವಿಜಯಲಕ್ಷ್ಮೀ ದಂಪತಿಯ ಪುತ್ರಿಯಾಗಿರುತ್ತಾರೆ.
ಸಿಎ ಫೌಂಡೇಷನ್ ಪರೀಕ್ಷೆ: ಭೂಮಿಕಾ ಎಂ. ಉತ್ತೀರ್ಣ
ಮಂಗಳೂರು: ಹೊಸದಿಲ್ಲಿಯ ಲೆಕ್ಕ ಪರಿಶೋಧಕರ ಸಂಸ್ಥೆ (ICAI) ಡಿಸೆಂಬರ್ 2022ರಲ್ಲಿ ನಡೆದ ಸಿಎ ಫೌಂಡೇಷನ್ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿಯೇ ಭೂಮಿಕಾ ಎಂ. 344 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ಇವರು ಸಿಎ ಫೌಂಡೇಷನ್ ತರಬೇತಿಯನ್ನು ಮಂಗಳೂರಿನ ತ್ರಿಶಾ ಕ್ಲಾಸಸ್ನಲ್ಲಿ ಹಾಗೂ ತ್ರಿಶಾ ಕಾಲೇಜ್ ಆಫ್ ಕಾಮರ್ಸ ಆಂಡ್ ಮ್ಯಾನೇಜಮೆಂಟ್ನಲ್ಲಿ ಬಿ.ಕಾಂ ಪದವಿಯ ವ್ಯಾಸಂಗವನ್ನು ನಡೆಸುತ್ತಿದ್ದಾರೆ. ಇವರು ಮಂಗಳೂರಿನ ಕೊಡಿಯಾಲ್ ಬೈಲ್ನ ಚಂದ್ರಹಾಸ ಎಂ. ಮತ್ತು ಲತಾ ಚಂದ್ರಹಾಸ ದಂಪತಿಯ ಪುತ್ರಿಯಾಗಿರುತ್ತಾರೆ.
ಸಿಎ ಫೌಂಡೇಶನ್ ಪರೀಕ್ಷೆ ಫಲಿತಾಂಶ: ಶ್ರೀ ವೆಂಕಟರಮಣ ಪದವಿ ಪೂರ್ವಕಾಲೇಜು ವಿದ್ಯಾರ್ಥಿಗಳ ಸಾಧನೆ
ಕುಂದಾಪುರ: 2022ರ ಡಿಸೆಂಬರ್ನಲ್ಲಿ ನಡೆದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ 10 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಗೆ ಅರ್ಹತೆ ಪಡೆದುಕೊಂಡಿದ್ದಾರೆ. ನುರಿತ ಉಪನ್ಯಾಸಕರ ನಿರಂತರ ಬೋಧನೆಯ ಸದುಪಯೋಗವನ್ನು ಪಡೆದುಕೊಂಡು ಶ್ರೇಷ್ಠ ಸಾಧನೆ ಮೆರೆದಿರುವುದು ಶ್ಲಾಘನೀಯ. ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ-ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಪೊಡವಿಗೊಡೆಯನಿಗೆ ಗಜಲಕ್ಷ್ಮೀ ಅಲಂಕಾರ
ಉಡುಪಿ: ಶ್ರೀಕೃಷ್ಣ ಮಠದಲ್ಲಿ ಇಂದು ಶ್ರೀ ಕೃಷ್ಣನಿಗೆ ಗಜಲಕ್ಷ್ಮೀ ಅಲಂಕಾರ ಮಾಡಲಾಯಿತು.
ಸಬ್ಸಿಡಿಯೊಂದಿಗೆ ಲಭ್ಯ ಈಸೀ ಲೈಫ್ ಯಾಂತ್ರೀಕೃತ ಕೈ ಗಾಡಿ-ಮೋಟೋಕಾರ್ಟ್
ರೈತರಿಗೆ ಸಂತೋಷದ ಸುದ್ದಿ.. ಇದೀಗ ಮೋಟೋಕಾರ್ಟ್ ಸಬ್ಸಿಡಿಯೊಂದಿಗೆ ಈಸೀ ಲೈಫ್ ಯಾಂತ್ರೀಕೃತ ಕೈ ಗಾಡಿ ಕೇವಲ ರೂ.42,000 ಕ್ಕೆ ಲಭ್ಯ. ಬೇಕಾಗುವ ದಾಖಲೆಗಳು: • RTC/ಪಾಣೆ (ಬೆಳೆ: ಭತ್ತ ಕಡ್ಡಾಯ) • ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ • 2 ಫೋಟೋ ಹೆಚ್ಚಿನ ಮಾಹಿತಿಗಾಗಿ ಕರೆಮಾಡಿ: 9901876682