ಉಚ್ಚಿಲ: ನಾಳೆ (ಫೆ.೧) ಸಹಕಾರ ರತ್ನ ಯಶ್‌ಪಾಲ್ ಸುವರ್ಣ ಅವರಿಗೆ ಸಾರ್ವಜನಿಕ ಅಭಿನಂದನೆ

ಉಚ್ಚಿಲ: ಸಹಕಾರ ರತ್ನ ಯಶ್‌ಪಾಲ್ ಎ. ಸುವರ್ಣ ಅಭಿನಂದನಾ ಸಮಿತಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ನಿ. ಮಂಗಳೂರು ವತಿಯಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸಹಕಾರಿ ಸಂಘಗಳ ಸಹಯೋಗದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಯಶ್‌ಪಾಲ್ ಎ. ಸುವರ್ಣ ಅವರಿಗೆ ಫೆ. 1ರಂದು ಅಪರಾಹ್ನ 3ಗಂಟೆಗೆ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಶಾಲಿನಿ ಡಾ| ಜಿ. ಶಂಕರ್ ತೆರೆದ ಸಭಾಂಗಣದಲ್ಲಿ ಸಾರ್ವಜನಿಕ ಅಭಿನಂದನಾ ಸಮಾರಂಭ ‘ಯಶೋಭಿನಂದನ’ ಕಾರ್ಯಕ್ರಮ […]
ಕಟಪಾಡಿ: ಫೆ.4-5 ರಂದು ನಂದಿಗೋಣ ಬೊಬ್ಬರ್ಯ ಮತ್ತು ನೀಚ ದೇವಸ್ಥಾನ ಇದರ ವಾರ್ಷಿಕ ನೇಮೋತ್ಸವ

ಕಟಪಾಡಿ ಇಲ್ಲಿನ ಪೊಸಾರುವಿನ ನಂದಿಗೋಣ ಬೊಬ್ಬರ್ಯ ಮತ್ತು ನೀಚ ದೇವಸ್ಥಾನ ಇದರ ವಾರ್ಷಿಕ ನೇಮೋತ್ಸವವು ಮತ್ತು ಮಹಾ ಅನ್ನಸಂತರ್ಪಣೆಯು ಫೆ.4 ಮತ್ತು 5 ರಂದು ನಡೆಯಲಿದೆ. ಫೆ.4 ಶನಿವಾರದಂದು ರಾತ್ರಿ 8.00 ರಿಂದ ನಂದಿಗೋಣ, ಬೊಬ್ಬರ್ಯ ಮತ್ತು ನೀಚ ದೈವಗಳ ನೇಮೋತ್ಸವವು ಕೇಂಜ ಶ್ರೀಧರ ತಂತ್ರಿಯವರ ಉಪಸ್ಥಿತಿಯಲ್ಲಿ ಜರುಗಲಿರುವುದು. ಬೆಳಿಗ್ಗೆ 10.00ಕ್ಕೆ ನವಕ ಕಲಶಾಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾಅನ್ನಸಂತರ್ಪಣೆ , ರಾತ್ರಿ 9.00ಕ್ಕೆ ನಂದಿಗೋಣ ಹಾಗೂ ಬೊಬ್ಬರ್ಯ ದೈವದ ನೇಮೋತ್ಸವ ಜರುಗಲಿರುವುದು. ಫೆ.5 ಬೆಳಿಗ್ಗೆ 04.00 ಗಂಟೆಗೆ ನೀಚ […]