ಸಿಂಪಲ್ ಸ್ಟಾರ್ ಕೈಯಲ್ಲಿದೆ ನಾಲ್ಕು ಚಿತ್ರಗಳು: ಕಿರಿಕ್ ಪಾರ್ಟಿ 2 ಗೆ ವಿಭಿನ್ನ ಯೋಜನೆ ಇದೆ ಎಂದ ರಕ್ಷಿತ್ ಶೆಟ್ಟಿ
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳ ಮೂಲಕ ತನ್ನದೇ ಆದ ಛಾಪು ಮೂಡಿಸಿರುವ ಕರಾವಳಿಯ ಸಿಂಪಲ್ ಹುಡುಗ ರಕ್ಷಿತ್ ಶೆಟ್ಟಿ ಕೈಯಲ್ಲಿ ಸಾಲು ಸಾಲು ಚಿತ್ರಗಳಿದ್ದು, ಸದ್ಯಕ್ಕಂತೂ ಕಿರಿಕ್ ಪಾರ್ಟಿ-2 ಬರುವ ಯಾವುದೇ ಸೂಚನೆಗಳಿಲ್ಲ. ಈ ಬಗ್ಗೆ ಸ್ವತಃ ರಕ್ಷಿತ್ ಶೆಟ್ಟಿ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. “ಸಪ್ತಸಾಗರದಾಚೆ ಎಲ್ಲೋ ಚಿತ್ರದ ನಂತರ ನನ್ನ ಲೈನ್ ಅಪ್‌ಗಳು ಸಾಕಷ್ಟು ಸ್ಪಷ್ಟವಾಗಿವೆ. ಅಂದರೆ ರಿಚರ್ಡ್ ಆಂಟನಿ, ಪುಣ್ಯಕೋಟಿ 1 ಮತ್ತು 2, ಮಿಡ್ ನೈಟ್ ಟು ಮೋಕ್ಷ… ಇವುಗಳು ನನಗೆ […]
ಮುಂದಿನ ಬಾರಿ ಚುನಾಯಿತನಾದರೆ ರಾಮಸಮುದ್ರ ಪ್ರವಾಸಿತಾಣವಾಗಿ ನಿರ್ಮಾಣ: ವಿ.ಸುನಿಲ್ ಕುಮಾರ್
ಕಾರ್ಕಳ: ಪರಶುರಾಮ ಥೀಂ ಪಾರ್ಕ್ ನಲ್ಲಿ ಭಜನಾ ಮಂದಿರ ನಿರ್ಮಾಣವಾಗುವ ಮೂಲಕ ಆಧ್ಯಾತ್ಮಿಕ ಮತ್ತು ಧಾರ್ಮಿಕ ಭಾವನೆ ಉಂಟಾಗಿದೆ. ಜನರಿಂದ ಆಯ್ಕೆಯಾದ ಬಳಿಕ ಮೂಲಸೌಕರ್ಯಕ್ಕೆ ಸೀಮಿತವಾಗಿ ಕೆಲಸ ಮಾಡಿಲ್ಲ. ಪ್ರವಾಸೋದ್ಯಮವೂ ಸೇರಿದಂತೆ ಎಲ್ಲ ಆಯಾಮಗಳಲ್ಲಿ ಪ್ರಗತಿ ಸಾಧಿಸಲು ಪ್ರಯತ್ನಿಸಿದ್ದು, ಮುಂದಿನ ಬಾರಿ ಚುನಾಯಿತಗೊಂಡರೆ ಮುಂದಿನ ಎರಡು ವರ್ಷಗಳೊಳಗೆ ಕಾರ್ಕಳದ ಐತಿಹಾಸಿಕ ರಾಮಸಮುದ್ರವನ್ನು ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಿ ಮಾಡುತ್ತೇನೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದು ಸಚಿವ ವಿ.ಸುನಿಲ್ ಕುಮಾರ್ ಹೇಳಿದರು. ಅವರು ಶನಿವಾರದಂದು ಕಾರ್ಕಳದ ಪರಶುರಾಮ […]
ಹಿರಿಯಡ್ಕ ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ ಇದರ 31ನೇ ವಾರ್ಷಿಕೋತ್ಸವ ಸಮಾರಂಭ
ಹಿರಿಯಡ್ಕ: ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ ಹಿರಿಯಡ್ಕ ಇದರ 31ನೇ ವಾರ್ಷಿಕೋತ್ಸವ ಸಮಾರಂಭದ ನಿಮಿತ್ತ ಭೌತಿಕ್ ಕಾರ್ಯಕ್ರಮವು ಜ.26 ರಂದು ಜರುಗಿತು. ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಕೊಡವೂರು ನಗರಸಭೆ ಸದಸ್ಯ ವಿಜಯ್ ಕೊಡವೂರು, ಶ್ರೀರಾಮನಂತ ಮಗ, ಲಕ್ಷ್ಮಣ – ಭರತರಂತ ತಮ್ಮಂದಿರು, ಸೀತೆಯಂತ ಪತ್ನಿ ಇದ್ದಂತಹ ದೆಷ ನಮ್ಮದು. ಅಂಬೇಡ್ಕರ್, ವಿವೇಕಾನಂದ, ನಾರಾಯಣ ಗುರುಗಳಂತಹ ಮಹಾನ್ ವ್ಯಕ್ತಿಗಳನ್ನು ಕಂಡಂತಹ ನಮ್ಮ ದೇಶದಲ್ಲಿ ಇಂದು ಕೋಟ್ಯಂತರ ಜನ ಯಾಕೆ ನಿರ್ಗತಿಕರಾಗಿದ್ದಾರೆ? ಪ್ರತಿವರ್ಷ ಸಾವಿರಾರು ಹೆಣ್ಣು ಮಕ್ಕಳು ಕಾಣೆಯಾಗುತ್ತಿದ್ದರೆ, ಮಕ್ಕಳನ್ನು ಹೆತ್ತ […]
ಶಿವಪಾಡಿ: ಅತಿರುದ್ರ ಮಹಾಯಾಗ ಸಂಕಲ್ಪ ದಿವಸ್
ಶಿವಪಾಡಿ: ಶ್ರೀ ಉಮಾಮಹೇಶ್ವರ ದೇವಸ್ಥಾನ ಶಿವಪಾಡಿ ಸರಳೇಬೆಟ್ಟು ಉಡುಪಿ ಇಲ್ಲಿ ನಡೆಯಲಿರುವ “ಅತಿರುದ್ರ ಮಹಾಯಾಗ”ದ ಅಂಗವಾಗಿ ಜ.29 ರಂದು “ಅತಿರುದ್ರ ಮಹಾಯಾಗ ಸಂಕಲ್ಪ ದಿವಸ್ ಮತ್ತು ಮೃತ್ತಿಕಾ ಪೂಜೆ” ನಡೆಯಿತು. ಈ ಸಂದರ್ಭ ಅತಿರುದ್ರಯಾಗ ಸಮಿತಿ ಕಾರ್ಯಾಧ್ಯಕ್ಷ ಕೆ. ರಘುಪತಿ ಭಟ್ ಉಪಸ್ಥಿತರಿದ್ದರು.
30ನೇ ವರ್ಷದ ಪುತ್ತೂರು “ಕೋಟಿ – ಚೆನ್ನಯ” ಜೋಡುಕರೆ ಕಂಬಳ ಕೂಟದ ಫಲಿತಾಂಶ
ಜ.28 ರಂದು ನಡೆದ 30ನೇ ವರ್ಷದ ಪುತ್ತೂರು “ಕೋಟಿ – ಚೆನ್ನಯ” ಜೋಡುಕರೆ ಕಂಬಳ ಕೂಟದ ಫಲಿತಾಂಶ ಇಂತಿದೆ ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : ಕನೆಹಲಗೆ: 06 ಜೊತೆ ಅಡ್ಡಹಲಗೆ: 07 ಜೊತೆ ಹಗ್ಗ ಹಿರಿಯ: 18 ಜೊತೆ ನೇಗಿಲು ಹಿರಿಯ: 32 ಜೊತೆ ಹಗ್ಗ ಕಿರಿಯ: 20 ಜೊತೆ ನೇಗಿಲು ಕಿರಿಯ: 82 ಜೊತೆ ಒಟ್ಟು ಕೋಣಗಳ ಸಂಖ್ಯೆ: 165 ಜೊತೆ ಕನೆಹಲಗೆ: ( ನೀರು ನೋಡಿ ಬಹುಮಾನ ) ಪ್ರಥಮ: ಕಾಂತಾವರ ಬೇಲಾಡಿ […]