ದ.ಕ ಜಿಲ್ಲೆಯಲ್ಲಿ 2,86,576 ಲೀ; ಉಡುಪಿಯಲ್ಲಿ 1,89,806 ಲೀ. ಹಾಲು ಸಂಗ್ರಹಣೆ
ಉಡುಪಿ: ದಕ್ಷಿಣ ಕನ್ನಡ ಹಾಲು ಒಕ್ಕೂಟದ ವ್ಯಾಪ್ತಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ 396 ಸಂಘಗಳ 35707 ಸದಸ್ಯರಿಂದ 2,86,576 ಲೀ. ಹಾಗೂ ಉಡುಪಿ ಜಿಲ್ಲೆಯಲ್ಲಿ 338 ಸಂಘಗಳ 29396 ಸದಸ್ಯರಿಂದ 1,89,806 ಲೀ. ಹಾಲು ಸಂಗ್ರಹಣೆಯಾಗುತ್ತಿದೆ. ಡಿಸೆಂಬರ್ 2021ರ ಮಾಹೆಯಲ್ಲಿ ದ.ಕ ಜಿಲ್ಲೆಯಲ್ಲಿ 392 ಸಂಘಗಳ 36943 ಸದಸ್ಯರಿಂದ 3,09,872 ಲೀ. ಹಾಗೂ ಉಡುಪಿ ಜಿಲ್ಲೆಯಲ್ಲಿ 338 ಸಂಘಗಳ 30553 ಸದಸ್ಯರಿಂದ ಒಟ್ಟು 2,09,532 ಲೀ. ಹಾಲು ಸಂಗ್ರಹಣೆಯಾಗುತ್ತಿದೆ. ಇದನ್ನು ಗಮನಿಸಿದಾಗ ದ.ಕ ಜಿಲ್ಲೆಯಲ್ಲಿ 1236 […]
ಲಾಸ್ ಏಂಜಲೀಸ್ ನಲ್ಲಿ ಚೀನೀ ನಾಗರಿಕರನ್ನು ಗುರಿಯಾಗಿಸಿ ಗುಂಡಿನ ದಾಳಿ: 10 ಜನರ ಸಾವು; ಹಲವರಿಗೆ ಗಾಯ
ಮಾಂಟೆರೆ ಪಾರ್ಕ್: ಟೆಕ್ಸಾಸ್ನ ಪ್ರಾಥಮಿಕ ಶಾಲೆಯಲ್ಲಿ 19 ಮಕ್ಕಳು ಮತ್ತು ಇಬ್ಬರು ಶಿಕ್ಷಕರನ್ನು ಕೊಂದ ಉವಾಲ್ಡೆ ಹತ್ಯಾಕಾಂಡದ ನಂತರದ ಅತಿ ದೊಡ್ಡ ಸಾಮೂಹಿಕ ಹತ್ಯೆ ಲಾಸ್ ಏಂಜಲೀಸ್ ಅನ್ನು ಬೆಚ್ಚಿ ಬೀಳಿಸಿದೆ. ಲಾಸ್ ಏಂಜಲೀಸ್ನ ಏಷ್ಯಾದ ಅಮೆರಿಕದ ಉಪನಗರವಾದ ಮಾಂಟೆರಿ ಪಾರ್ಕ್ನ ನಿವಾಸಿಗಳಿಗೆ “ಇಯರ್ ಆಫ್ ರ ರಾಬಿಟ್” ಭಾನುವಾರದಂದು ಭಯಾನಕವಾಗಿ ಆರಂಭವಾಗಿದೆ. ಇಲ್ಲಿನ ಸಾಮೂಹಿಕ ಗುಂಡಿನ ದಾಳಿಯಲ್ಲಿ 10 ಜನರು ಸಾವನ್ನಪ್ಪಿ, ಇನ್ನುಳಿದ ಹಲವರು ಗಾಯಗೊಂಡಿದ್ದಾರೆ. 60,000 ಜನರಿರುವ ಈ ನಗರದಲ್ಲಿ, ಚಾಂದ್ರಮನ ಹೊಸ ವರ್ಷವನ್ನು […]
ನಾಳೆ ನಗರಸಭೆ ಬಜೆಟ್ ತಯಾರಿ ಬಗ್ಗೆ ಪೂರ್ವಭಾವಿ ಸಭೆ
ಉಡುಪಿ: ಉಡುಪಿ ನಗರಸಭೆಯ 2023-24 ನೇ ಸಾಲಿನ ಬಜೆಟ್ ತಯಾರಿಯ ಬಗ್ಗೆ ನಗರಸಭಾ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಅವಶ್ಯಕ ಅಭಿವೃದ್ಧಿ ಕೆಲಸ ಕಾರ್ಯಗಳ ವಿಚಾರ ವಿನಿಮಯಗಳ ಕುರಿತು ಪೂರ್ವಭಾವಿ ಸಾರ್ವಜನಿಕ ಸಮಾಲೋಚನಾ ಸಭೆಯು ಜನವರಿ 24 ರಂದು ಮಧ್ಯಾಹ್ನ 3.30 ಕ್ಕೆ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.
ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಉತ್ತಮ ಜನಸ್ಪಂದನೆ
ಕುಂದಾಪುರ: ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಅವರ ಗ್ರಾಮಗಳಿಗೆ ತೆರಳಿ, ಅರಿತು ಅವುಗಳಿಗೆ ಸೂಕ್ತ ಪರಿಹಾರ ಒದಗಿಸುವ ಮತ್ತು ಸರಕಾರದ ವಿವಿಧ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಜ.21 ರಂದು ನಾಗೂರಿನಶ್ರೀ ಲಲಿತ ಕೃಷ್ಣ ಕಲಾಮಂದಿರದಲ್ಲಿ ನಡೆದ ಕಿರಿಮಂಜೇಶ್ವರ ಗ್ರಾಮ ವ್ಯಾಪ್ತಿಯ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾಧಿಕಾರಿಗಳ […]
ಮೂರು ದಿನಗಳ ಬೀಚ್ ಉತ್ಸವಕ್ಕೆ ಸಂಭ್ರಮದ ತೆರೆ
ಮಲ್ಪೆ: ಭಾನುವಾರ ಮಲ್ಪೆ ಕಡಲತೀರದಲ್ಲಿ ಮುಕ್ತಾಯಗೊಂಡ ಎರಡು ದಿನಗಳ ಬೀಚ್ ಉತ್ಸವದಲ್ಲಿ ಉಡುಪಿ ಮತ್ತು ಸುತ್ತಮುತ್ತಲಿನ ಸ್ಥಳೀಯರು ಮತ್ತು ಪ್ರಯಾಣಿಕರು ಭರ್ಜರಿಯಾಗಿಯೆ ಪಾಲ್ಗೊಂಡರು. ಉತ್ಸವ ಪ್ರಯುಕ್ತ ಶ್ವಾನ ಪ್ರದರ್ಶನದಲ್ಲಿ ವಿವಿಧ ತಳಿಯ ತಳಿಗಳು ನೋಡುಗರನ್ನು ಆಕರ್ಷಿಸಿದವು. ಡ್ಯಾಷ್ಹಂಡ್ನಿಂದ ಹಿಡಿದು ಬಾರ್ನ್ಯಾರ್ಡ್, ಗೋಲ್ಡನ್ ರಿಟ್ರೈವರ್, ಡಾಲ್ಮೇಷಿಯನ್, ಡೋಬರ್ಮ್ಯಾನ್, ಲ್ಯಾಬ್ರಡಾರ್, ಗ್ರೇಟ್ ಡೇನ್, ಜರ್ಮನ್ ಶೆಫರ್ಡ್ ಮತ್ತು ಇತರ ವಿವಿಧ ತಳಿಗಳು ನೋಡುಗರನ್ನು ಮಂತ್ರಮುಗ್ಧಗೊಳಿಸಿದವು. ಉತ್ಸವದಲ್ಲಿ ಗಾಳಿಪಟ ಹಾರಿಸುವುದು ಮತ್ತೊಂದು ಪ್ರಮುಖ ಆಕರ್ಷಣೆಯಾಗಿತ್ತು. ತುಳುನಾಡಿನ ಸಂಪ್ರದಾಯ, ಸಂಸ್ಕೃತಿಯನ್ನು ಬಿಂಬಿಸುವ ವಿವಿಧ […]