ಈ ವರ್ಷದ ಪವರ್ ಪರ್ಬಕ್ಕೆ ಸಂಭ್ರಮದ ತೆರೆ

ಉಡುಪಿ: ಕಳೆದ ಮೂರು ದಿನಗಳಿಂದ ಕಳೆಗಟ್ಟಿದ್ದ ಬೀಡಿನಗುಡ್ಡೆ ಬಯಲು ರಂಗ ಮಂದಿರದಲ್ಲಿ ಆಯೋಜಿಸಲಾಗಿದ್ದ ಪವರ್ ಪರ್ಬದ ಸಮಾರೋಪ ಸಮಾರಂಭವು ಭಾನುವಾರದಂದು ಜರುಗಿತು. ಸಮಾರೋಪ ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ವೀಣಾ ಬಿ ಎನ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕನ್ನಡ ಚಿತ್ರನಟ ಶೈನ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಸಂಚಾಲಕಿ ಶಿಲ್ಪಾ ಶೆಟ್ಟಿ ವರದಿ ವಾಚಿಸಿದರು. ಪೂರ್ಣಿಮಾ ಶೆಟ್ಟಿ ಪ್ರಾರ್ಥಿಸಿದರು. ಪವರ್ ಸಂಸ್ಥೆಯ ಅಧ್ಯಕ್ಷೆ ಪೂನಂ ಶೆಟ್ಟಿ ಸ್ವಾಗತಿಸಿದರು. ತನುಜಾ ಮಾಬೆನ್ ಹಾಗೂ ಸಾಧನಾ ಕಿಣಿ ನಿರೂಪಿಸಿದರು. […]