ವಿವೇಕ್ ಅಗ್ನಿಹೋತ್ರಿಯ ‘ದ ವ್ಯಾಕ್ಸೀನ್ ವಾರ್’ ನಲ್ಲಿ ಕಾಂತಾರ ಬೆಡಗಿ ಸಪ್ತಮಿಗೌಡ
ಮುಂಬಯಿ: ಕನ್ನಡ ಚಿತ್ರನಟಿ ಕಾಂತಾರ ಬೆಡಗಿ ಸಪ್ತಮಿಗೌಡ ಹಿಂದಿ ಚಿತ್ರಲೋಕದತ್ತ ಪಯಣ ಬೆಳೆಸಿದ್ದಾರೆ. ಕಾಶ್ಮೀರ್ ಫೈಲ್ಸ್ ಚಿತ್ರ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿಯ ಮುಂಬರುವ ಚಿತ್ರ “ವ್ಯಾಕ್ಸೀನ್ ವಾರ್” ನಲ್ಲಿ ಪ್ರಮುಖ ಪಾತ್ರದಲ್ಲಿ ಸಪ್ತಮಿ ನಟಿಸಲಿದ್ದಾರೆ. ಈ ಬಗ್ಗೆ ನಿರ್ದೇಶಕ ವಿವೇಕ್ ರಂಜನ್ ಟ್ವೀಟ್ ಮಾಡಿದ್ದು, “ಸುಸ್ವಾಗತ ಸಪ್ತಮಿ ಗೌಡ, ದ ವ್ಯಾಕ್ಸೀನ್ ವಾರ್ ನ ನಿಮ್ಮ ಪಾತ್ರವು ಎಲ್ಲರ ಹೃದಯಗಳನ್ನು ಗೆಲ್ಲಲಿದೆ” ಎಂದಿದ್ದಾರೆ. ಚಿತ್ರದ ಬಗ್ಗೆ ಹರ್ಷಾತುರರಾಗಿರುವ ಸಪ್ತಮಿ ಚಿತ್ರದಲ್ಲಿ ನೀಡಿರುವ ಅವಕಾಶಕ್ಕಾಗಿ ಧನ್ಯವಾದ ಸಲ್ಲಿಸಿದ್ದಾರೆ. […]
ಮಣಿಪಾಲ: ಡ್ರಗ್ಸ್ ಸೇವಿಸಿ ದರೋಡೆಗೆ ಸಂಚು ರೂಪಿಸುತ್ತಿದ್ದ ಆರೋಪಿಗಳ ಬಂಧನ
ಮಣಿಪಾಲ: ಜಿಲ್ಲೆಯಲ್ಲಿ ಡ್ರಗ್ಸ್ ವಿರುದ್ಧ ಸಮರವನ್ನು ಮುಂದುವರೆಸಿರುವ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯು ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದು, ದರೋಡೆಗೆ ಸಂಚು ರೂಪಿಸುತ್ತಿದ್ದ ಆರೋಪಿಗಳನ್ನು ಬಂಧಿಸಿ ಸಂಭಾವ್ಯ ಅನಾಹುತ ಒಂದನ್ನು ತಪ್ಪಿಸಿದ್ದಾರೆ. ಮಣಿಪಾಲ ಪಿ.ವಿ ನಗರದ ಅನಂತ ರೆಸಿಡೆನ್ಸಿಯಲ್ಲಿ 5 ಜನರು ಗುಂಪುಗೂಡಿ ಅಕ್ರಮವಾಗಿ ಮಾದಕ ದ್ರವ್ಯ ಹಾಗೂ ಗಾಂಜಾವನ್ನು ಮನೆಯಲ್ಲಿ ಇಟ್ಟುಕೊಂಡು ಅದನ್ನು ಸೇವಿಸಿ ದರೋಡೆಗೆ ಸಂಚು ರೂಪಿಸುತ್ತಿದ್ದರು ಎನ್ನಲಾಗಿದ್ದು ಈ ಆರೋಪಿಗಳನ್ನು ಮಣಿಪಾಲ ಪಿ.ಐ ಮತ್ತು ತಂಡದವರು ಬಂಧಿಸಿದ್ದಾರೆ. ಆರೋಪಿಗಳಿಂದ 6 ಗ್ರಾಂ […]
ಶ್ರೀಕೃಷ್ಣ ಮಠದಲ್ಲಿ ಸಪ್ತೋತ್ಸವದ ಸಂಭ್ರಮ
ಉಡುಪಿ: ಶ್ರೀಕೃಷ್ಣಮಠದಲ್ಲಿ ಸಪ್ತೋತ್ಸವದ ಪರ್ವಕಾಲದಲ್ಲಿ ತೆಪ್ಪೋತ್ಸವ ಸಹಿತ ಮಕರಸಂಕ್ರಾಂತಿಯ ಮೂರು ರಥೋತ್ಸವದಲ್ಲಿ ಅಷ್ಟಮಠದ ಎಲ್ಲ ಯತಿಗಳು ಪಾಲ್ಗೊಂಡಿದ್ದರು.
ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಮಂದಿ ಶ್ರೇಷ್ಠ ಸಾಧಕರಿಗೆ ಹೊಸವರ್ಷ ಪ್ರಶಸ್ತಿ-2023 ಪ್ರದಾನ
ಮಣಿಪಾಲ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಆರೋಗ್ಯ ವಿಜ್ಞಾನ, ಬ್ಯಾಂಕಿಂಗ್ ಮತ್ತು ಕೃಷಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಾಲ್ಕು ಮಂದಿ ಸಾಧಕರಿಗೆ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ್ ಎಜುಕೇಶನ್ ಆ್ಯಂಡ್ ಮಣಿಪಾಲ್ ಗ್ರೂಪ್ ಇಂಡಿಯ, ಪ್ರೈ. ಲಿ., ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿ. ಮತ್ತು ಡಾ. ಟಿಎಂಎ ಪೈ ಫೌಂಡೇಶನ್ ಸಂಸ್ಥೆಗಳ ವತಿಯಿಂದ ಮಣಿಪಾಲದ ಫಾರ್ಚೂನ್ ಇನ್ ವ್ಯಾಲಿವ್ಯೂನಲ್ಲಿ ಜ. 14 ರಂದು ‘ಹೊಸವರ್ಷದ ಪ್ರಶಸ್ತಿ-2023’ ಪ್ರದಾನ ಮಾಡಿ […]
ಬೈಂದೂರು: ಅಡಕೆ ಕಳ್ಳರ ಬಂಧನ; 2 ಲಕ್ಷ ಮೌಲ್ಯದ ಅಡಕೆ ವಶ
ಬೈಂದೂರು: ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ನಡೆದ ಅಡಿಕೆ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಬೈಂದೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬೈಂದೂರು ಠಾಣಾ ವ್ಯಾಪ್ತಿಯ ನಾವುಂದ ಗ್ರಾಮದ ಕೋಡಿಯಾಡಿ ಫಾರ್ಮ್ ಹೌಸ್ ಅಂಗಳದಲ್ಲಿ ಒಣಗಿಸಿದ ಅಡಿಕೆಯನ್ನು ಕಳವು ಮಾಡಿಕೊಂಡು ಹೋಗಿದ್ದ ಆರೋಪಿಗಳನ್ನು ಬೈಂದೂರು ಪಿಎಸ್ಐ ಮತ್ತು ತಂಡ ಬಂಧಿಸಿದ್ದು, ಆರೋಪಿಗಳಿಂದ 2,00,000/-ಮೌಲ್ಯದ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.