ಸಿಎ ಅಂತಿಮ ಪರೀಕ್ಷೆಯಲ್ಲಿ ಪೈ ನಾಯಕ್ ಅಸೋಸೊಯೇಟ್ಸ್ ಸಂಸ್ಥೆಯ ಸಾಧನೆ

ಉಡುಪಿ: ಸಿಎ ಅಂತಿಮ ಪರೀಕ್ಷೆಯಲ್ಲಿ ಪೈ ನಾಯಕ್ ಅಸೋಸೊಯೇಟ್ಸ್ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ರಕ್ಷಾ ಶೈಣೈ, ಕಾರ್ಕಳದ ಕೃಷ್ಣ ಶೆಣೈ ಮತ್ತು ಮುಂಜುಳಾ ಶೆಣೈ ದಂಪತಿಯ ಪುತ್ರಿ, ಅನುಷಾ ರಾವ್, ಗುಂಡಿಬೈಲು ಬಿ.ಜಗದೀಶ್ ರಾವ್ ಮತ್ತು ಗಾಯತ್ರಿ ರಾವ್ ದಂಪತಿಯ ಪುತ್ರಿ ಹಾದೂ ಉತ್ಪಲಾ ಶೆಣೈ, ಉಡುಪಿಯ ಕೆ.ಉಮೇಶ್ ಶೆಣೈ ಮತ್ತು ಅರುಣಾ ಶೆಣೈ ದಂಪತಿಯ ಪುತ್ರಿ ತೇರ್ಗಡೆ ಹೊಂದಿದ್ದಾರೆ.

ಸಿಎ ಅಂತಿಮ ಪರೀಕ್ಷೆಯಲ್ಲಿ ತ್ರಿಶಾ ವಿದ್ಯಾರ್ಥಿಗಳ ಅಮೋಘ ಸಾಧನೆ

ಮಂಗಳೂರು,ಜ.12: ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ನವೆಂಬರ್ 2022ರಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾದವರ ವಿವರ ಇಂತಿದೆ. ಮಂಗಳೂರಿನ ಕೃಪಾ ಪ್ರಭು. ಇವರು ಮಂಗಳೂರಿನ ಕಾಮತ್ ಅಂಡ್ ರಾವ್ ಕಂಪೆನಿಯಲ್ಲಿ ಆರ್ಟಿಕಲ್ಶಿಪ್ ನಡೆಸಿದ್ದು, ಸಿಎಯ ಎರಡು ಹಂತಗಳಾದ ಸಿಪಿಟಿ ಹಾಗೂ ಇಂಟರ್ ಮೀಡಿಯೆಟ್ ನ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಪಡೆದಿರುತ್ತಾರೆ. ಇವರು ಕೆ ಸುರೇಶ್ ಪ್ರಭು ಮತ್ತು ಎನ್ ಉಷಾ ಪ್ರಭು ದಂಪತಿಯ ಪುತ್ರಿ. ಪೆರಮೊಗರುವಿನ ಶ್ರದ್ಧಾ ವಿ ಶೆಟ್ಟಿ. ಇವರು […]

ಸಿ.ಎ ಅಂತಿಮ ಪರೀಕ್ಷೆಯಲ್ಲಿ ಚರಣ್ ಪಿ ಶೆಟ್ಟಿ ತೇರ್ಗಡೆ

ಉಡುಪಿ: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ನಡೆಸಿದ ಸಿ ಎ ಅಂತಿಮ ಪರೀಕ್ಷೆಯಲ್ಲಿ ಚರಣ್ ಪಿ ಶೆಟ್ಟಿ ಇವರು ಉತ್ತೀರ್ಣರಾಗಿದ್ದಾರೆ. ಇವರು ಉಡುಪಿಯ ಸಿಎ ನರಸಿಂಹ ನಾಯಕ್, ನಾಯಕ್ & ಅಸ್ಸೋಸಿಯೇಟ್ಸ್ ನಲ್ಲಿ ಅರ್ಟಿಕಲಶಿಪ್ ಮಾಡಿದ್ದಾರೆ. ಪೂರ್ಣ ಪ್ರಜ್ಞಾ ಸಂಧ್ಯಾ ಕಾಲೇಜಿನಲ್ಲಿ ಬಿಕಾಮ್ ಪದವಿ ಪಡೆದಿರುವ ಇವರು ಕಾಪು ಕಲ್ಯಾ ಮೂಡುಮನೆ ಪ್ರಕಾಶ್ ಶೆಟ್ಟಿ ಹಾಗೂ ರೂಪಾ ಶೆಟ್ಟಿ ಇವರ ಪುತ್ರ.

ಮಾಜಿ ಕೇಂದ್ರ ಸಚಿವ ಶರದ್ ಯಾದವ್ ನಿಧನ

ನವದೆಹಲಿ: ಮಾಜಿ ಕೇಂದ್ರ ಸಚಿವ ಮತ್ತು ಆರ್.ಜೆ.ಡಿ ನಾಯಕ ಶರದ್ ಯಾದವ್ ಅವರು 75 ನೇ ವಯಸ್ಸಿನಲ್ಲಿ ಜನವರಿ 12 ರಂದು ಗುರುವಾರ ನಿಧನರಾಗಿದ್ದಾರೆ. ಅವರ ಪುತ್ರಿ ಸುಭಾಷಿಣಿ ಶರದ್ ಯಾದವ್ ಅವರು ಈ ಸುದ್ದಿಯನ್ನು ಟ್ವಿಟರ್‌ನಲ್ಲಿ ಖಚಿತಪಡಿಸಿದ್ದಾರೆ. ಮಾಜಿ ಸಚಿವರ ಆರೋಗ್ಯ ಹದಗೆಟ್ಟಿದ್ದು, ಅವರನ್ನು ಗುರುಗ್ರಾಮ್‌ನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶರದ್ ಯಾದವ್ ಅವರನ್ನು “ಪ್ರಜ್ಞಾಹೀನ ಮತ್ತು ಸ್ಪಂದಿಸದ ಸ್ಥಿತಿಯಲ್ಲಿ” ತುರ್ತು ವಿಭಾಗಕ್ಕೆ ಕರೆತರಲಾಯಿತು ಮತ್ತು ಅವರಿಗೆ “ಯಾವುದೇ ನಾಡಿಮಿಡಿತ ಅಥವಾ ದಾಖಲಿಸಬಹುದಾದ ರಕ್ತದೊತ್ತಡ” ಇರಲಿಲ್ಲ […]