‘ನಾಟು ನಾಟು’ ಅತ್ಯುತ್ತಮ ಮೂಲ ಗೀತೆಗಾಗಿ ಮೊದಲ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಾಚಿದ ಆರ್.ಆರ್.ಆರ್
ಎಸ್.ಎಸ್ ರಾಜಮೌಳಿಯವರ ಆರ್.ಆರ್.ಆರ್ ಚಿತ್ರವು 2023 ನೇ ಸಾಲಿನ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳಲ್ಲಿ ಅದರ ಹಿಟ್ ಟ್ರ್ಯಾಕ್ “ನಾಟು ನಾಟು” ಗಾಗಿ ಅತ್ಯುತ್ತಮ ಮೂಲ ಹಾಡು ವಿಭಾಗದಲ್ಲಿ ಚಿನ್ನದ ಟ್ರೋಫಿಯನ್ನು ಗೆದ್ದು ಬೀಗಿದೆ. ತೆಲುಗು ಚಲನಚಿತ್ರವು ‘ಅತ್ಯುತ್ತಮ ಚಿತ್ರ-ಇಂಗ್ಲಿಷೇತರ’ ವಿಭಾಗದಲ್ಲಿಯೂ ನಾಮನಿರ್ದೇಶನಗೊಂಡಿದೆ. ಸಂಗೀತ ನಿರ್ದೇಶಕ ಎಂ.ಎಂ ಕೀರವಾಣಿಯವರು ಪ್ರಶಸ್ತಿ ಸ್ವೀಕರಿಸಿ ಇಡೀ ತಂಡಕ್ಕೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ. ಕಾಲ ಭೈರವ ಮತ್ತು ರಾಹುಲ್ ಸಿಪ್ಲಿಗುಂಜ್ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. MM Keeravaani’s #GoldenGlobes2023 acceptance Speech!! ❤️🔥❤️🔥 #RRRMovie […]
ಇಂದು ಕೋವ್ಯಾಕ್ಸಿನ್ ಬೂಸ್ಟರ್ ಡೋಸ್ ಲಸಿಕಾ ಮೇಳ
ಉಡುಪಿ: ಕೋವಿಡ್-19 ನಾಲ್ಕನೇ ಅಲೆಯಲ್ಲಿ ಸಂಭವಿಸಬಹುದಾದ ತೀವ್ರತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜನವರಿ 11 ರಂದು ಜಿಲ್ಲೆಯ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಕೋವ್ಯಾಕ್ಸಿನ್ ಮುನ್ನೆಚ್ಚರಿಕೆ ಡೋಸ್ ಲಸಿಕಾ ಮೇಳವನ್ನು ಆಯೋಜಿಸಲಾಗಿದೆ. ಕೋವ್ಯಾಕ್ಸಿನ್ ಪ್ರಥಮ ಡೋಸ್ ಲಸಿಕೆ ಪಡೆದು 28 ದಿನಗಳು ಮೀರಿದವರು, 2ನೇ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆಯಲು ಮತ್ತು 2ನೇ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆದು 6 ತಿಂಗಳು ಪೂರೈಸಿದವರು ಕೋವ್ಯಾಕ್ಸಿನ್ ಮುನ್ನೆಚ್ಚರಿಕೆ ಲಸಿಕಾ ಡೋಸ್ (ಬೂಸ್ಟರ್ ಡೋಸ್) ಪಡೆಯಲು ಹತ್ತಿರದ ಸರಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿ […]