ಪೆರ್ಡೂರು: ರಾಜ್ಯಮಟ್ಟದ ಕ್ರಿಕೆಟ್ ಆಟಗಾರ ರಕ್ಷಿತ್ ಶೆಟ್ಟಿ ನಿಧನ
ಪೆರ್ಡೂರು: ಉಡುಪಿ- ರಾಜ್ಯ, ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟಗಳಲ್ಲಿ ಮಿಂಚಿದ್ದ ವೇಗಿ, ಉದಯೋನ್ಮುಖ ಕ್ರಿಕೆಟಿಗ ರಕ್ಷಿತ್ ಶೆಟ್ಟಿ ಪೆರ್ಡೂರು(29 ವರ್ಷ) ಬ್ರೈನ್ ಟ್ಯೂಮರ್ ನಿಂದ ಇಂದು ನಿಧನರಾದರು. ಪೆರ್ಡೂರು ಬುಕ್ಕಿಗುಡ್ಡೆ ನಿವಾಸಿಯಾಗಿರುವ ರಕ್ಷಿತ್ ಶೆಟ್ಟಿ ಇವರು ಗೆಳೆಯರ ಬಳಗ ಪೆರ್ಡೂರು ತಂಡದ ಮೂಲಕ ಕ್ರಿಕೆಟ್ ಜೀವನವನ್ನು ಪ್ರಾರಂಭಿಸಿದರು. ನಂತರ ಯಂಗ್ ಸ್ಟಾರ್ ಪೆರ್ಡೂರು, ದುರ್ಗಾ ಆತ್ರಾಡಿ ತಂಡಗಳ ಪರವಾಗಿ ಜಿಲ್ಲಾಮಟ್ಟದ ಪಂದ್ಯಗಳನ್ನಾಡಿದ್ದರು. ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ ರಕ್ಷಿತ್ ಶೆಟ್ಟಿ ಎಸ್.ಝಡ್.ಸಿ.ಸಿ ಮತ್ತು ಎಮ್.ಬಿ.ಸಿ.ಸಿ ತಂಡಗಳ ಪರವಾಗಿ […]
ರಾಜ್ಯದಲ್ಲಿ ಅತಿ ಹೆಚ್ಚು ಮಹಿಳಾ ಮತದಾರರಿರುವ ಜಿಲ್ಲೆ: ಉಡುಪಿಗೆ ಪ್ರಥಮ ಸ್ಥಾನ
ಉಡುಪಿ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ – 2023 ರ ಪರಿಷ್ಕೃತ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ರಾಜ್ಯದಲ್ಲಿ ಅತ್ಯಂತ ಹೆಚ್ಚು ಮಹಿಳಾ ಮತದಾರರಿರುವ ಜಿಲ್ಲೆಯಾಗಿ ಉಡುಪಿ ಮೊದಲ ಸ್ಥಾನದಲ್ಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಅತ್ಯಂತ ಕಡಿಮೆ ಮಹಿಳಾ ಮತದಾರರನ್ನು ಹೊಂದಿರುವ ಜಿಲ್ಲೆಯಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿಯ ಕಚೇರಿ ತಿಳಿಸಿದೆ. ಉಡುಪಿಯಲ್ಲಿ 4,90,060 ಪುರುಷ ಮತದಾರರು ಹಾಗೂ 5,26,173 ಮಹಿಳಾ ಮತದಾರರಿದ್ದು ಒಟ್ಟು 10,16,245 ಮತದಾರರಿದ್ದಾರೆ. ಜಿಲ್ಲೆಯ ಲಿಂಗಾನುಪಾತ: 1074 ಬೆಂಗಳೂರು ಗ್ರಾಮಾಂತರದಲ್ಲಿ 14,90, 481 […]
ದೈವ-ಕೋಲದ ವಿಚಾರದಲ್ಲಿ ತಡೆಯಾಜ್ಞೆ ತಂದ ವ್ಯಕ್ತಿ ದೈವದೆದುರೇ ಕುಸಿದು ಸಾವು: ಪಡುಹಿತ್ಲುವಿನಲ್ಲಿ ವಿಚಿತ್ರ ವಿದ್ಯಮಾನ
ಪಡುಬಿದ್ರೆ: ಇಲ್ಲಿನ ಪಡುಹಿತ್ಲು ಗ್ರಾಮದಲ್ಲಿ ಜಾರಂದಾಯ ಬಂಟ ದೈವಸ್ಥಾನದಲ್ಲಿ ಜಾರಂದಾಯ ಬಂಟ ಸೇವಾ ಸಮಿತಿಯ ನೇತೃತ್ವದಲ್ಲಿ ನೇಮೋತ್ಸವವು ವರ್ಷಂಪ್ರತಿ ನಡೆಯುತ್ತಿದ್ದು, ಇದೀಗ ಇಲ್ಲಿ ವಿಚಿತ್ರವೆನಿಸುವಂತಹ ಘಟನೆ ನಡೆದಿದೆ. ದೈವಸ್ಥಾನದ ಉಸ್ತುವಾರಿಯು ಪಡುಹಿತ್ಲು ಜಾರಂದಾಯ ಬಂಟ ಸೇವಾ ಸಮಿತಿಯದ್ದಾಗಿದ್ದು, ಈ ಹಿಂದೆ ಪ್ರಕಾಶ್ ಶೆಟ್ಟಿ ಅಧ್ಯಕ್ಷರಾಗಿದ್ದರು. ಆದರೆ ಸಮಿತಿ ಬದಲಾದಾಗ ಪ್ರಕಾಶ್ ಶೆಟ್ಟಿ ಅಧಿಕಾರ ಕಳೆದುಕೊಂಡರು. ಹಾಗಂತ ಸುಮ್ಮನಿರದ ಪ್ರಕಾಶ್ ಶೆಟ್ಟಿ 9 ಜನರ ಪ್ರತ್ಯೇಕ ಟ್ರಸ್ಟ್ ರಚಿಸಿ ಬಂಡಾರ ಮನೆಯ ಗುರಿಕಾರರಾದ ಜಯ ಪೂಜಾರಿಯನ್ನು ಅಧ್ಯಕ್ಷರನ್ನಾಗಿ ನೇಮಿಸುತ್ತಾರೆ […]
ಜ. 10 ರಂದು ಜಿಲ್ಲಾ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಜನವರಿ 10 ರಂದು ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ. 110/33/11 ಕೆವಿ ಮಣಿಪಾಲ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಇಂಡಸ್ಟ್ರಿಯಲ್ ಕೆ.ಎಂ.ಎಫ್, ಮಣಿಪಾಲ ಟೌನ್ ಮತ್ತು ಮೂಡುಬೆಳ್ಳೆ ಫೀಡರಿನಲ್ಲಿ ಹಾಗೂ 11ಕೆವಿ ಹಿರಿಯಡ್ಕ ಫೀಡರಿನಲ್ಲಿ ಮೆಂಟೆನೆನ್ಸ್ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾ, ಈಶ್ವರನಗರ, ಸರಳೇಬೆಟ್ಟು, ಅರ್ಬಿ, ಪ್ರಗತಿನಗರ, 80 ಬಡಗುಬೆಟ್ಟು, ಮಣಿಪಾಲ ಟೌನ್, ವೇಣುಗೋಪಾಲ ಟೆಂಪಲ್ ಹತ್ತಿರ, […]
ವ್ಯಕ್ತಿಯ ಜೀವನದ ಮೊದಲ 25 ವರ್ಷಗಳು ಆತನ ಸಂಪೂರ್ಣ ಜೀವನವನ್ನು ರೂಪಿಸುತ್ತದೆ: ವಿದ್ಯಾವಂತ ಆಚಾರ್ಯ
ಕಾರ್ಕಳ: ಅಕ್ಷರಂ ಬ್ರಹ್ಮಾಸಿ ಎಂದರೆ ‘ಅಕ್ಷರವೇ ದೇವರು’. ಯಾರು ಅದನ್ನು ಹೇಳಿಕೊಡುತ್ತಾರೆ ಅವರು ದೇವರಿಗೆ ಸಮಾನ. ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು. ಶಿಕ್ಷಣಕ್ಕಿರುವ ಮಹತ್ವ ಬೇರೆ ಯಾವ ಚಟುವಟಿಕೆಗಳಿಗೂ ಇಲ್ಲ. ನಮ್ಮ ಜೀವನದ ಮೊದಲ 25 ವರ್ಷಗಳು ಏನು ಮಾಡುತ್ತೇವೆ, ಅದೇ ನಮ್ಮ ಮುಂದಿನ 75 ವರ್ಷ ನಾವು ಪಾಲಿಸಿಕೊಂಡು ಹೋಗುತ್ತೇವೆ. ಹೀಗಾಗಿ ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ಎಳವೆಯಲ್ಲೇ ಒಳ್ಳೆಯ ವಿಚಾರಗಳನ್ನು ತಿಳಿಹೇಳಬೇಕು ಎಸ್.ಆರ್.ಎಸ್ ನ ನಿರ್ದೇಶಕ ವಿದ್ಯಾವಂತ ಆಚಾರ್ಯ ಅಭಿಪ್ರಾಯಪಟ್ಟರು. ಅವರು ಜ. […]