ಸಹಕಾರವೆಂದರೆ ಅದು ಜೀವನ ತತ್ವ: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ

ಉಡುಪಿ: ಸಹಕಾರವೆಂದರೆ ಅದು ಕೇವಲ ಆರ್ಥಿಕ ಕ್ಷೇತ್ರಕ್ಕೆ ಮಾತ್ರ ಮೀಸಲಾಗಿಲ್ಲ. ಸಹಕಾರವೆಂದರೆ ಅದು ಜೀವನ ತತ್ವ. ಜನರಲ್ಲಿ ಪ್ರೀತಿ-ವಿಶ್ವಾಸ, ಕೊಟ್ಟು ಪಡೆದುಕೊಳ್ಳುವ ಗುಣವಿದ್ದಾಗ ಸಹಕಾರ ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನ ಶ್ರೀ ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯ ಪಟ್ಟರು. ಅವರು ಬುಧವಾರ ನಗರದಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ 19 ನೇ ಶಾಖೆಯನ್ನುದ್ಘಾಟಿಸಿ ಮಾತನಾಡಿದರು. ಅರ್ಥವ್ಯವಸ್ಥೆ ಎನ್ನುವುದು ಮುಳ್ಳಿನ ಹಾಸಿಗೆ ಇದರ ಬಗ್ಗೆ ಎಚ್ಚರವಿರಬೇಕು. ಸಹಕಾರಿ ಕ್ಷೇತ್ರದಲ್ಲಿ ಪ್ರಾಮಾಣಿಕತೆ […]
ಜ.13 ರಿಂದ 15 ರವರೆಗೆ ಪವರ್ ಪರ್ಬ-2023: ಬೃಹತ್ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ

ಉಡುಪಿ: ಭಾರತ ಸರಕಾರದ ಎಮ್.ಎಸ್.ಎಮ್.ಇ ಸಚಿವಾಲಯದ ಸಹಯೋಗದೊಂದಿಗೆ ಮಹಿಳಾ ಉದ್ದಿಮೆದಾರರ ‘ಪವರ್ ಪರ್ಬ-2023’ ಬೃಹತ್ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದ ನಾಲ್ಕನೇ ಆವೃತ್ತಿಯು ಜ. 13 ರಿಂದ 15 ರವರೆಗೆ ಬೀಡಿನಗುಡ್ಡೆಯ ಮಹಾತ್ಮ ಗಾಂಧಿ ಬಯಲು ರಂಗಮಂದಿರದಲ್ಲಿ ನಡೆಯಲಿದೆ.
ಚೇರ್ಕಾಡಿ: ನಾಳೆ ಬ್ಲೂ ಬೆಲ್ ಹೋಂ ಸ್ಟೇ ಉದ್ಘಾಟನೆ

ಚೇರ್ಕಾಡಿ: ಇಲ್ಲಿನ ಬ್ರಹ್ಮಾವರ-ಹೆಬ್ರಿ ರಸ್ತೆಯ ಮಧ್ಯದಲ್ಲಿ ಚೇರ್ಕಾಡಿಯ ಮುಂಡ್ಕಿನಜೆಡ್ಡು ಎಂಬಲ್ಲಿ ಬ್ಲೂ ಬೆಲ್ ಹೋಂ ಸ್ಟೇ ಜ.5 ರಂದು ಉದ್ಘಾಟನೆಯಾಗಲಿದೆ ಎಂದು ಮಾಲಕರು ತಿಳಿಸಿದ್ದಾರೆ. ಬ್ಲೂ ಬೆಲ್ ಹೋಂ ಸ್ಟೇ ವೈಶಿಷ್ಟ್ಯಗಳು ಚೇರ್ಕಾಡಿಯ ಎಂಬ ಪ್ರಶಾಂತ ಸ್ಥಳದಲ್ಲಿ ಪ್ರಥಮ ಹೋಂ ಸ್ಟೇ ಸೊಂಪಾದ ಗಿಡ ಮರಗಳಿಂದ ಕೂಡಿದ ಪ್ರದೇಶ ಮನೆಯ ಆಹಾರ ತಿನಿಸುಗಳು ಉಚಿತ ವೈಫೈ ಸೌಲಭ್ಯ 24/7 ನೀರು ಮತ್ತು ವಿದ್ಯುತ್ ಲಭ್ಯತೆ ದೃಶ್ಯ ವೀಕ್ಷಣೆ ಪ್ರವಾಸ ಉತ್ತಮ ಬೆಲೆಗೆ ಉತ್ತಮ ಸೌಕರ್ಯಗಳು ಹೆಚ್ಚಿನ ಮಾಹಿತಿಗಾಗಿ […]
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯ: ಸಂವಾದ ಕಾರ್ಯಕ್ರಮ

ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಜ.3 ರಂದು ‘ಹಲವು ಸಮಾಜಮುಖೀ ಕೆಲಸಗಳನ್ನು ಹೇಗೆ ಮಾಡಬಹುದು’ ಎಂಬ ವಿಷಯದ ಕುರಿತು ಸಂವಾದ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮಕ್ಕೆ ಮೈಸೂರು ಗ್ರಾಹಕ ಪರಿಷತ್ ನ ಸ್ಥಾಪಕ ಡಾ.ಭಾಮೀ ಶಣೈ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಸಂಸ್ಥೆಯ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಅವರು ಸಂಸ್ಥೆಯ ವತಿಯಿಂದ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳನ್ನೊಳಗೊಂಡು ಯಾವ ರೀತಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬಹುದು ಎಂಬುದರ ಬಗೆಗೆ […]