ಜ.05: ಜಿಲ್ಲೆಯಲ್ಲಿ ರಾಜ್ಯಪಾಲರ ಪ್ರವಾಸ ಕಾರ್ಯಕ್ರಮ

ಉಡುಪಿ: ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಜನವರಿ 5 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದು, ಅಂದು ಬೆಳಗ್ಗೆ 10.30 ಕ್ಕೆ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪುರುಷರ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ವಾಲಿಬಾಲ್ ಚಾಂಪಿಯನ್‌ಶಿಪ್ ಪಂದ್ಯದ ಉದ್ಘಾಟನೆ ನೆರವೇರಿಸಿ, ನಂತರ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ.

ಕಾಪು: ತಾಯಿ, ಮಗು ನಾಪತ್ತೆ

ಉಡುಪಿ: ಕಾಪು ತಾಲೂಕು ಮಲ್ಲಾರು ಗ್ರಾಮದ ಕೊಂಬುಗುಡ್ಡೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಮುತ್ತವ್ವ (26) ಎಂಬ ಮಹಿಳೆಯು ತನ್ನ 2 ವರ್ಷ 6 ತಿಂಗಳ ಮಗುವಾದ ಗಂಗಾನೊಂದಿಗೆ ಡಿಸೆಂಬರ್ 25 ರಿಂದ ನಾಪತ್ತೆಯಾಗಿರುತ್ತಾರೆ. 4 ಅಡಿ 5 ಇಂಚು ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾಪು ಪೊಲೀಸ್ ಠಾಣೆ ದೂ.ಸಂಖ್ಯೆ: 0820-2551033, ಮೊ.ನಂ: 9480805449, ಉಡುಪಿ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: […]

ಕಸ್ತೂರ್ಬಾ ಆಸ್ಪತ್ರೆಯ ಡೀನ್ ಆಗಿ ಡಾ. ಪದ್ಮರಾಜ್ ಹೆಗ್ಡೆ ನೇಮಕ

ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಮೂತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಕೆ.ಎಂ.ಸಿ ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಡಾ. ಪದ್ಮರಾಜ್ ಹೆಗ್ಡೆ ಅವರನ್ನು ಕಸ್ತೂರ್ಬಾ ಆಸ್ಪತ್ರೆಯ ಡೀನ್ ಆಗಿ ಜ.1ರಂದು ನೇಮಕ ಮಾಡಲಾಗಿದೆ. ಡಾ.ಪದ್ಮರಾಜ್ ಹೆಗ್ಡೆ ಉಡುಪಿ ಜಿಲ್ಲೆಯ ಆತ್ರಾಡಿಯವರು. ಇವರು ಎಂಬಿಬಿಎಸ್ ಮತ್ತು ಎಂಎಸ್ ಜನರಲ್ ಸರ್ಜರಿ ಮತ್ತು ಎಂ.ಸಿಎಚ್ ಅನ್ನು (ಜೆನಿಟೋ ಯುರಿನರಿ ಸರ್ಜರಿ) ಮಣಿಪಾಲದ ಕೆಎಂಸಿಯಲ್ಲಿ ಪೂರ್ಣಗೊಳಿಸಿದ್ದಾರೆ. ಸ್ಕಾಟ್ಲೆಂಡ್ ನ ಗ್ಲಾಸ್ಗೋ ವಿಶ್ವವಿದ್ಯಾಲಯವು ಇವರಿಗೆ ಎಫ್‌ಆರ್‌ಸಿಎಸ್ ನೀಡಿದೆ ಮತ್ತು ಇವರು ಆಸ್ಪತ್ರೆ ಆಡಳಿತ ಮತ್ತು […]

ಜ. 5 ರಂದು ವಿದ್ಯುತ್ ವ್ಯತ್ಯಯ

ಉಡುಪಿ: 110/11ಕೆವಿ ನಂದಿಕೂರು ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆವಿ ಎರ್ಮಾಳು, ನಂದಿಕೂರು ಮತ್ತು ಸಾಂತೂರು ಫೀಡರ್‌ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಎರ್ಮಾಳು, ತೆಂಕ, ಪೂಂದಾಡು, ಅದಮಾರು, ಹೆಜಮಾಡಿ, ಅವರಾಲು, ನಡ್ಸಾಲು, ನಂದಿಕೂರು, ಎನ್.ಎಸ್ ರೋಡ್, ಪಡುಬಿದ್ರೆ, ಎಸ್.ಎಸ್ ರೋಡ್, ಡೌನ್ ಟೌನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ಹಾಗೂ 110/11ಕೆವಿ ಮಧುವನ ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆವಿ ಬಾರ್ಕೂರು ಎಕ್ಸ್ಪ್ರೆಸ್ ಫೀಡರ್ ಮಾರ್ಗದಲ್ಲಿ ರಸ್ತೆ […]

ಬೀಡಿನಗುಡ್ಡೆ: ಜನವರಿ 13, 14, 15 ರಂದು ಪವರ್ ಪರ್ಬ-2023 ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ

ಉಡುಪಿ: ಮಹಿಳಾ ಉದ್ಯಮಿಗಳ ವೇದಿಕೆಯಾಗಿರುವ ಪವರ್ ಉಡುಪಿಯು ಸ್ವ-ಉದ್ಯಮದೊಂದಿಗೆ ಬೆಳೆಯುತ್ತಿರುವ ಮಹಿಳಾ ಉದ್ಯಮಿಗಳ ಹಾಗೂ ಕುಟುಂಬ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರ ಒಗ್ಗೂಡುವಿಕೆಯೊಂದಿಗೆ 2009ರಲ್ಲಿ ಪ್ರಾರಂಭಗೊಂಡಿತು. ಇದೀಗ ಸಂಸ್ಥೆಯು ವಿಭಿನ್ನ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಮಹಿಳಾ ಉದ್ಯಮಿಗಳ ಪಾಲ್ಗೊಳ್ಳುವಿಕೆ ಯೊಂದಿಗೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಪವರ್ ಪರ್ಬವು ಪವರ್ ಸಂಸ್ಥೆಯಿಂದ ಉಡುಪಿಯಲ್ಲಿ ಆಯೋಜಿಸಲ್ಪಡುತ್ತಿರುವ ಅದ್ದೂರಿ ಕಾರ್ಯಕ್ರಮವಾಗಿದ್ದು ಮಹಿಳಾ ಉದ್ಯಮಿಗಳ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಪ್ರಮುಖ ಉದ್ದೇಶವನ್ನು ಹೊಂದಿದೆ. 2016ರಲ್ಲಿ ಆರಂಭಗೊಂಡ ಈ ಕಾರ್ಯಕ್ರಮವು 2018 ಹಾಗೂ 2020ರಲ್ಲಿ ಅತ್ಯುತ್ತಮ ರೀತಿಯಲ್ಲಿ ಮೂಡಿಬಂದಿದ್ದು […]