ಫೆ. 11 ರಂದು ರಾಷ್ಟ್ರೀಯ ಲೋಕ್ ಅದಾಲತ್
ಉಡುಪಿ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಇವರ ವತಿಯಿಂದ ರಾಜ್ಯಾದ್ಯಂತ 2023 ರ ಫೆಬ್ರವರಿ 11 ರಂದು ರಾಷ್ಟ್ರೀಯ ಲೋಕ್ ಅದಾಲತ್/ ಮೆಗಾ ಲೋಕ್ ಅದಾಲತ್ನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಈ ಮೂಲಕ ತಕ್ಷಣ ಪರಿಹಾರ ಕಂಡುಕೊಳ್ಳಬಹುದಾಗಿದೆ. ಅದಾಲತ್ನಲ್ಲಿ ಸಾರ್ವಜನಿಕರು ರಾಜಿಯಾಗಬಲ್ಲ ಅಪರಾಧಿಕ ಪ್ರಕರಣ, ಬ್ಯಾಂಕ್ ಸಾಲ ವಸೂಲಾತಿ ಪ್ರಕರಣ, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣ, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ಜಿಲ್ಲಾ […]
ಪಶ್ಚಿಮಘಟ್ಟ ತಪ್ಪಲಿನ ಔಷಧೀಯ ಸಸ್ಯಗಳ ಬೆಳೆಗೆ ಸರ್ವ ಸಹಕಾರ: ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕೊಡ್ಗಿ
ಉಡುಪಿ: ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿರುವ ಎಲ್ಲಾ ಕ್ಯಾಂಪ್ಕೋ ಸದಸ್ಯರ ಮೂಲಕ ಪಶ್ಚಿಮಘಟ್ಟ ತಪ್ಪಲಿನ ಔಷಧೀಯ ಸಸ್ಯಗಳ ಬೆಳೆಗೆ ಎಲ್ಲಾ ರೀತಿಯ ಅಗತ್ಯ ಪ್ರೋತ್ಸಾಹ ನೀಡುವುದಾಗಿ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕೊಡ್ಗಿ ಹೇಳಿದರು. ಅವರು ಗುರುವಾರ ಕಾರ್ಕಳ ತಾಲೂಕು ಬಜಗೋಳಿಯ ತ್ರಿಭುವನ ಮಾಳದಲ್ಲಿ, ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ, ಕರ್ನಾಟಕ ಜೀವವೈವಿಧ್ಯ ಮಂಡಳಿ ಹಾಗೂ ಕಾಂಪ್ಕೋ ಮಂಗಳೂರು ಇವರ ಸಹಯೋಗದಲ್ಲಿ ರಾಷ್ಟ್ರೀಯ ಔಷಧಿ ಗಿಡಮೂಲಿಕಾ ಮಂಡಳಿ ಪ್ರಾಯೋಜಿತ ಯೋಜನೆ […]
ಎಸ್.ಕೆ.ಪಿ.ಎ ವತಿಯಿಂದ ಸಹಕಾರ ರತ್ನ ಜಯಕರ್ ಶೆಟ್ಟಿ ಇಂದ್ರಾಳಿ ಇವರಿಗೆ ಗೌರವಾಭಿನಂದನೆ
ಉಡುಪಿ: ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾದ ಜಯಕರ ಶೆಟ್ಟಿ ಇಂದ್ರಾಳಿ ಇವರಿಗೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯದಿಂದ ಗೌರವಾಭಿನಂದನೆ ಸಲ್ಲಿಸಲಾಯಿತು. ಜಯಕರ್ ಶೆಟ್ಟಿ ಇಂದ್ರಾಳಿ ಇವರು ಆರಂಭದಿಂದಲೂ ಛಾಯಾಗ್ರಾಹಕರ ಸಂಘಕ್ಕೆ ನೀಡಿರುವ ಸಹಕಾರಕ್ಕಾಗಿ ಸರ್ವ ಛಾಯಾಗ್ರಾಹಕರ ಪರವಾಗಿ ಅವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಉಡುಪಿ ಶಾಖೆಯ ಪ್ರಬಂಧಕ ರಾಘವೇಂದ್ರ ಉಪಾಧ್ಯಾಯ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ವಾಮನ ಪಡುಕೆರೆ, ಉಪಾಧ್ಯಕ್ಷ […]
ಜಿಲ್ಲಾಧಿಕಾರಿ ಕೂರ್ಮಾ ರಾವ್ ಜಿಲ್ಲಾಸ್ಪತ್ರೆ ಭೇಟಿ: ಕೋವಿಡ್ ಸಿದ್ದತೆ ಪರಿಶೀಲನೆ
ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ನಿರ್ವಹಣೆ ಕುರಿತಂತೆ ಪೂರ್ವಬಾವಿಯಾಗಿ ಕೈಗೊಂಡಿರುವ ಸಿದ್ದತೆಗಳ ಕುರಿತು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅವರು ಬುಧವಾರ ಉಡುಪಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿನ ಆಕ್ಸಿಜಿನ್ ಘಟಕಗಳ ಕಾರ್ಯನಿರ್ವಹಣೆ, ಪೂರೈಕೆ, ವೆಂಟಿಲೇಟರ್ ಗಳ ಸುಸ್ಥಿತಿ ಹಾಗೂ ಕೋವಿಡ್ ಪರೀಕ್ಷಾ ಲ್ಯಾಬ್ನ ಸಮರ್ಪಕ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲಿಸಿದರು. ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್ ಉಪಸ್ಥಿತರಿದ್ದರು.
ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ ಪರಿಷ್ಕರಣೆ: ಬೆಸ್ಕಾಂ 37 ಪೈಸೆ; ಮೆಸ್ಕಾಂ 39 ಪೈಸೆ ಇಳಿಕೆ
ಬೆಂಗಳೂರು: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್ಸಿ) ಇಂಧನ ವೆಚ್ಚ ಹೊಂದಾಣಿಕೆ ಶುಲ್ಕವನ್ನು (ಎಫ್ಎಸಿ) ಪರಿಷ್ಕರಿಸಿರುವುದರಿಂದ ಮುಂಬರುವ ತ್ರೈಮಾಸಿಕಕ್ಕೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ) ಗ್ರಾಹಕರ ವಿದ್ಯುತ್ ಬಿಲ್ಗಳು ಕ್ರಮವಾಗಿ 37 ಪೈಸೆ ಮತ್ತು 39 ಪೈಸೆ ಇಳಿಕೆ ಕಾಣಲಿವೆ. ಹೊಸ ದರಗಳು ಜನವರಿ 1 ಮತ್ತು ಮಾರ್ಚ್ 31, 2023 ರ ನಡುವೆ ರಚಿಸಲಾಗುವ ಬಿಲ್ಗಳಿಗೆ ಅನ್ವಯಿಸುತ್ತವೆ. ಹಿಂದಿನ ಪರಿಷ್ಕರಣೆಯಲ್ಲಿ, ಅಕ್ಟೋಬರ್ನಿಂದ ಡಿಸೆಂಬರ್ನಿಂದ ನಡೆಯುತ್ತಿರುವ ತ್ರೈಮಾಸಿಕದಲ್ಲಿ […]