ಜನವರಿಯಲ್ಲಿ ಕೋವಿಡ್ ಪ್ರಕರಣಗಳ ಉಲ್ಬಣ: ಮುಂದಿನ 40 ದಿನಗಳು ನಿರ್ಣಾಯಕವೆಂದ ಆರೋಗ್ಯ ಇಲಾಖೆ

ನವದೆಹಲಿ: ಈ ಹಿಂದಿನ ಕೋವಿಡ್ ಪ್ರಕರಣದ ಮಾದರಿಗಳನ್ನು ಉಲ್ಲೇಖಿಸಿ ಜನವರಿ ಮಧ್ಯಭಾಗದಲ್ಲಿ ಭಾರತದಲ್ಲಿ ಕೋವಿಡ್ ಪ್ರಕರಣಗಳು ಉಲ್ಬಣವಾಗುವ ಸಾಧ್ಯತೆ ಇದೆ. ಹಾಗಾಗಿ ಮುಂದಿನ 40 ದಿನಗಳು ನಿರ್ಣಾಯಕವಾಗಲಿವೆ ಎಂದು ಆರೋಗ್ಯ ಇಲಾಖೆಯ ಅಧಿಕೃತ ಮೂಲಗಳು ತಿಳಿಸಿವೆ ಎಂದು ಸುದ್ದಿ ಸಂಸ್ಥೆ ಎ.ಎನ್.ಐ ವರದಿ ಮಾಡಿದೆ. ಈ ಹಿಂದೆ, ಪೂರ್ವ ಏಷ್ಯಾದಲ್ಲಿ ಕೋವಿಡ್ ಪ್ರಕರಣಗಳು ಉಲ್ಬಣಿಸಿದ 30-35 ದಿನಗಳ ನಂತರ ಹೊಸ ಅಲೆಯು ಭಾರತವನ್ನು ಅಪ್ಪಳಿಸಿದೆ ಎಂದು ಗಮನಿಸಲಾಗಿದೆ. ಇದು ಒಂದು ಪ್ರವೃತ್ತಿಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, […]

ಪೆರ್ಡೂರು: ಮಕ್ಕಳಿಗೆ ಪಾಠ ಕಲಿಸಬೇಕಾದ ಶಿಕ್ಷಕ ಕಂಠ ಮಟ್ಟ ಕುಡಿದು ಶಾಲಾ ಜಗುಲಿಯಲ್ಲಿ ಗಡದ್ದು ನಿದ್ದೆ!

ಪೆರ್ಡೂರು: ಪ್ರಾಥಮಿಕ ಶಾಲೆಯ ಶಿಕ್ಷಕನೋರ್ವ ಕಂಠಪೂರ್ತಿ ಕುಡಿದು ಶಾಲೆಯ ಜಗುಲಿ ಮೇಲೆ ಮಲಗಿದ ಘಟನೆ ಪೆರ್ಡೂರು ಗ್ರಾಮದ ಅಲಂಗಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಕೃಷ್ಣಮೂರ್ತಿ ಎಂಬ ಶಿಕ್ಷಕ ಕಂಠಪೂರ್ತಿ ಕುಡಿದು ಶಾಲೆಯ ಜಗಲಿಯಲ್ಲೆಮಲಗಿದ್ದಾರೆ. ಮಕ್ಕಳಿಗೆ ಪಾಠ ಹೇಳಿ ಅವರನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡಬೇಕಾಗಿರುವ ಶಿಕ್ಷಕರೇ ಕಂಠಪೂರ್ತಿ ಕುಡಿದು ಮಲಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಶಿಕ್ಷಕನನ್ನು ಕೂಡಲೇ ಅಮಾನತು ಮಾಡುವಂತೆ ಪೆರ್ಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವು ಪೂಜಾರಿ, ಉಪಾಧ್ಯಕ್ಷೆ ಚೇತನಾ ಶೆಟ್ಟಿ, ಗ್ರಾಮ ಪಂಚಾಯಿತಿ […]

ಬೆಳ್ತಂಗಡಿ: ಶಾಲಾ ಪ್ರವಾಸದ ಬಸ್ ಹಾಗೂ ಕರ್ನಾಟಕ ರಾಜ್ಯ ಸಾರಿಗೆ ಬಸ್ ಮುಖಾಮುಖಿ; ಇಬ್ಬರಿಗೆ ಗಂಭೀರ ಗಾಯ

ಬೆಳ್ತಂಗಡಿ: ಶಾಲಾ ಮಕ್ಕಳ ಪ್ರವಾಸದ ಬಸ್ ಹಾಗೂ ಕರ್ನಾಟಕ ರಾಜ್ಯ ಸಾರಿಗೆ ಬಸ್ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಿಡ್ಲೆ ಗ್ರಾಮದ ಬೂಡುಜಾಲು ಸಮೀಪ ನಡೆದಿದೆ. ಗಾಯಗೊಂಡವರನ್ನು ಟೂರಿಸ್ಟ್‌ ಬಸ್‌ ಚಾಲಕ ಅಭಿಷೇಕ್‌ ಹಾಗೂ ಬಸ್‌ ಪ್ರಯಾಣಿಕ ದುಗೇಶ್‌ ಎಂದು ಗುರುತಿಸಲಾಗಿದ್ದು ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಂಧನೂರಿನ ಕಾಲೇಜು ವಿದ್ಯಾರ್ಥಿಗಳ ಪ್ರವಾಸದ ಬಸ್‌ ಧರ್ಮಸ್ಥಳ ಕಡೆಗೆ ಪ್ರಯಾಣಿಸುತ್ತಿದ್ದಾಗ ಕೊಕ್ಕಡ ಕಡೆಗೆ ಹೋಗುತ್ತಿದ್ದ ಕೆಎಸ್ಸಾರ್ಟಿಸಿ ಬಸ್‌ ಡಿಕ್ಕಿ ಹೊಡೆದಿದೆ. ಬಸ್‌ನಲ್ಲಿದ್ದ ಮಕ್ಕಳು ಹಾಗೂ ಪ್ರಯಾಣಿಕರು […]

ತಾಯಿ ಹೀರಾಬೆನ್ ಆಸ್ಪತ್ರೆಗೆ ದಾಖಲು: ಆರೋಗ್ಯ ವಿಚಾರಿಸಲು ದೌಡಾಯಿಸಿದ ಪ್ರಧಾನಿ ಮೋದಿ

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿಯವರನ್ನು ಮಂಗಳವಾರ ರಾತ್ರಿ ಅಹಮದಾಬಾದ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ತಿಳಿಸಿದೆ. ತಾಯಿಯ ಆರೋಗ್ಯ ವಿಚಾರಿಸಲು ಪ್ರಧಾನಿ ಮೋದಿ ಅಹಮದಾಬಾದಿಗೆ ದೌಡಾಯಿಸಿದ್ದಾರೆ. #WATCH | PM Modi arrives at UN Mehta Institute of Cardiology & Research Centre in Ahmedabad where his mother Heeraben Modi is admitted As per the hospital, her […]

ಭಾರತದಾದ್ಯಂತ ಜಿಯೋ ನೆಟ್‌ವರ್ಕ್ ಡೌನ್: ಸಂಪರ್ಕ ಸಿಗುತ್ತಿಲ್ಲವೆಂದಾದಲ್ಲಿ ಹೀಗೆ ಮಾಡಿ ನೋಡಿ

ನವದೆಹಲಿ: ಭಾರತದಾದ್ಯಂತ ರಿಲಯನ್ಸ್ ಜಿಯೋ ಮೊಬೈಲ್ ಮತ್ತು ಜಿಯೋ ಫೈಬರ್ ಸೇವೆಗಳು ಡೌನ್ ಆಗಿವೆ ಎಂದು ಅನೇಕ ಬಳಕೆದಾರರು ಹೇಳಿದ್ದಾರೆ. ಅನೇಕ ಜಿಯೋ ಚಂದಾದಾರರು ಟ್ವಿಟರ್‌ ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡು, ಜಿಯೋ ನೆಟ್‌ವರ್ಕ್ ಮೂಲಕ ಇಂಟರ್ನೆಟ್ ಅನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಅದೇ ರೀತಿ, ಅನೇಕ ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಬಳಕೆದಾರರು ಕೂಡಾ ಮನೆಯಲ್ಲಿ ಇಂಟರ್ನೆಟ್ ಬಳಸಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಮಾಡಿದ್ದಾರೆ. ಡೌನ್ ಡಿಟೆಕ್ಟರ್ ಪ್ರಕಾರ, ಜಿಯೋ ಮೊಬೈಲ್ ಮತ್ತು ಬ್ರಾಡ್‌ಬ್ಯಾಂಡ್ […]