ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವವರು ಗೃಹರಕ್ಷಕ ದಳ ಸಿಬ್ಬಂದಿಗಳು: ವಸಂತ ಕುಮಾರ್

ಉಡುಪಿ: ಗೃಹ ರಕ್ಷಕದಳದ ಸಿಬ್ಬಂದಿಗಳು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಸ್ವ-ಇಚ್ಚೆ ಹಾಗೂ ಪ್ರಾಮಾಣಿಕತೆಯಿಂದ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹೆಚ್.ಎಂ ವಸಂತ ಕುಮಾರ್ ಹೇಳಿದರು. ಅವರು ಶನಿವಾರ ಜಿಲ್ಲಾ ಗೃಹ ರಕ್ಷಕದಳ ಉಡುಪಿ ಇವರ ವತಿಯಿಂದ, ಜಿಲ್ಲಾ ಗೃಹರಕ್ಷಕ ದಳ ಕಚೇರಿ ಆವರಣದಲ್ಲಿ ನಡೆದ ಅಖಿಲ ಭಾರತ ಗೃಹ ರಕ್ಷಕದಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಗೃಹ ರಕ್ಷಕ ದಳದ ಸಿಬ್ಬಂದಿಗಳು ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಆರ್.ಟಿ.ಓ, ಪ್ರವಾಸೋದ್ಯಮ ಇಲಾಖೆ ಸೇರಿದಂತೆ ವಿವಿಧ […]

25 ವರ್ಷಗಳಿಂದ ಶ್ರೇಷ್ಠತೆ ಮತ್ತು ಗುಣಮಟ್ಟಕ್ಕೆ ಹೆಸರುವಾಸಿ ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ: ಡಾ| ಜೆರಾಲ್ಡ್ ಐಸಾಕ್ ಲೋಬೋ

ಉಡುಪಿ: ಉಡುಪಿ ಕಥೋಲಿಕ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಇದರ 25 ನೇ ವರ್ಷದ ರಜತ ಸಂಭ್ರಮ ಸಮಾರಂಭ ವು ಡಿ18 ರವಿವಾರದಂದು ಶೋಕ ಮಾತಾ ಇಗರ್ಜಿಯ ಆವೆ ಮರಿಯಾ ಸಭಾಂಗಣದಲ್ಲಿ ನಡೆಯಿತು. ಉಡುಪಿ ಕೆಥೋಲಿಕ್ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ವಂದನೀಯ ಡಾ| ಜೆರಾಲ್ಡ್ ಐಸಾಕ್ ಲೋಬೋ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ಮಾಡಿ ಮಾತನಾಡಿ, ವಿಶ್ವದ ಎಲ್ಲಾ ಕ್ಷೇತ್ರಗಳಿಗಿಂತಲೂ ಇಂದು ಬಲಿಷ್ಠವಾಗಿ ಬೆಳೆದಿರುವುದು ಸೇವಾ ಕ್ಷೇತ್ರ. ಇದಕ್ಕೆ ಸೇವಾ ಕ್ಷೇತ್ರದ ಗುಣಮಟ್ಟ ಕಾರಣ. ಸೇವಾ ಕ್ಷೇತ್ರದಲ್ಲಿ ವಸ್ತು […]

ರಾಜ್ಯಗಳಾದ್ಯಂತ ಎಸ್‌ಯುವಿ ವಾಹನಗಳಿಗೆ ಏಕ ವ್ಯಾಖ್ಯಾನ: ತೆರಿಗೆ ದರದಲ್ಲಿ ಬದಲಾವಣೆ ಸಾಧ್ಯತೆ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೌನ್ಸಿಲ್ ಶನಿವಾರ ದೇಶದ ಎಲ್ಲಾ ರಾಜ್ಯಗಳಲ್ಲಿ ಎಸ್‌ಯುವಿ ವಾಹನಗಳಿಗೆ ಒಂದೇ ವ್ಯಾಖ್ಯಾನವನ್ನು ಹೊಂದಲು ನಿರ್ಧರಿಸಿದೆ, ಇದು ತೆರಿಗೆ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ. ಪ್ರಸ್ತುತ 1500 ಸಿಸಿ ಇಂಜಿನ್ ಸಾಮರ್ಥ್ಯ, 4000 ಎಂಎಂ ಗಿಂತ ಉದ್ದ ಮತ್ತು 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಕಾರುಗಳು ಜಿಎಸ್‌ಟಿ 28% ಮತ್ತು 22% ಸೆಸ್ ಅನ್ನು ಆಕರ್ಷಿಸುತ್ತವೆ, ಇದು ಪರಿಣಾಮಕಾರಿ ತೆರಿಗೆ ದರ 50% ತೆಗೆದುಕೊಳ್ಳುತ್ತಿದೆ. ಆದಾಗ್ಯೂ, ರಾಜ್ಯಗಳು ವಾಹನಗಳನ್ನು […]