ಸುಳ್ಯ: ಡಿ.16-18 ರವರೆಗೆ ಬೃಹತ್ ಕೃಷಿ ಮೇಳ ಆಯೋಜನೆ

ಸುಳ್ಯ: ಇಲ್ಲಿನ ಚೆನ್ನಕೇಶವ ದೇವಸ್ಥಾನ ಪರಿಸರದಲ್ಲಿ ಡಿ.16,17,18 ರಂದು ಮೂರು ದಿನಗಳ ಕಾಲ ಬೃಹತ್ ಕೃಷಿ ಮೇಳವನ್ನು ಆಯೋಜಿಸಲಾಗಿದೆ. ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ 170 ಕ್ಕೂ ಅಧಿಕ ಕೃಷಿ ಸಂಬಂಧಿ ಮಳಿಗೆಗಳು, ಪಾರಂಪರಿಕ ಗ್ರಾಮ ವೈಶಿಷ್ಟ್ಯ, ತಾರಾಲಯ, ವಿಚಾರ ಸಂಕಿರಣಗಳು, ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮಗಳು ನಡೆಯಲಿದ್ದು, ರಾಜ್ಯದ ಸಚಿವರು, ಸಂಸದರು ಮತ್ತು ಶಾಸಕರು ಭಾಗವಹಿಸಲಿದ್ದಾರೆ. ಪ್ರಣವ ಸೌಹಾರ್ದ ಸಹಕಾರಿ ಸಂಘ, ಸುಳ್ಯ ರೈತ ಉತ್ಪಾದಕರ ಕಂಪನಿ, ಮಂಗಳೂರು ವಿಶ್ವವಿದ್ಯಾನಿಲಯ, ಸಾವಯವ ಕೃಷಿಕ […]

ಕರ್ನಾಟಕ ಮಾಧ್ಯಮ ಅಕಾಡೆಮಿ ದತ್ತಿನಿಧಿ ಪ್ರಶಸ್ತಿಗಾಗಿ ಪತ್ರಕರ್ತರಿಂದ ಲೇಖನ ಆಹ್ವಾನ

ಉಡುಪಿ: ಕರ್ನಾಟಕ ಮಾಧ್ಯಮ ಅಕಾಡೆಮಿಯು 2022 ನೇ ಸಾಲಿನ ದತ್ತಿನಿಧಿ ಪ್ರಶಸ್ತಿಗಾಗಿ ಪತ್ರಕರ್ತರಿಂದ ಲೇಖನಗಳನ್ನು ಆಹ್ವಾನಿಸಲಾಗಿದೆ. ಬೆಂಗಳೂರಿನ ಅಭಿಮಾನಿ ಪ್ರಕಾಶನ ಸಂಸ್ಥೆಯು ರಾಜ್ಯ ಮತ್ತು ಜಿಲ್ಲಾಮಟ್ಟದ ಕನ್ನಡ ಪತ್ರಿಕೆಗಳಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ-ವರದಿಗಳನ್ನು ಬರೆದ ಪತ್ರಕರ್ತರಿಗೆ ಹಾಗೂ ಮೈಸೂರಿನ ಮೈಸೂರು ದಿಗಂತ ಪತ್ರಿಕಾ ಸಂಸ್ಥೆಯು ಮಾನವೀಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ-ವರದಿಗಳನ್ನು ಬರೆದ ಪತ್ರಕರ್ತರಿಗೆ ಪ್ರತಿವರ್ಷ ತಲಾ ಹತ್ತು ಸಾವಿರ ರೂ.ಗಳ ನಗದು ಪ್ರಶಸ್ತಿ ನೀಡಲು ಸಂಸ್ಥೆಗಳು ಒಂದು ಲಕ್ಷ ರೂ.ಗಳ ದತ್ತಿಯನ್ನು ಕರ್ನಾಟಕ […]

ನಬಾರ್ಡ್ ನಿಯೋಗದಿಂದ ಬೆನೆಗಲ್ ತರಕಾರಿ ಬೆಳೆಗಾರರ ಸೌಹಾರ್ದ ಸೊಸೈಟಿ ಭೇಟಿ

ಬ್ರಹ್ಮಾವರ: ಬೆನೆಗಲ್ ತರಕಾರಿ ಬೆಳೆಗಾರರ ಸೌಹಾರ್ದ ಸೊಸೈಟಿಗೆ ನಬಾರ್ಡ್ ಮುಂಬಯಿ ಕಚೇರಿ ಹಾಗೂ ಬೆಂಗಳೂರು ಕಚೇರಿಗಳ ಅಧಿಕಾರಿಗಳು, ಎಜಿಎಂ ಸಂಗೀತ ಎಸ್ ಕರ್ತಾ ಅವರ ನೇತೃತ್ವದಲ್ಲಿ ಡಿ. 1ರಂದು ಭೇಟಿ ನೀಡಿ ಸಂಘದ ಚಟುವಟಿಕೆ ಬಗ್ಗೆ ವಿಚಾರ ವಿನಿಮಯ ಮಾಡಿ, ವಿವಿಧ ತರಕಾರಿ ಬೆಳೆಗಳ ಕ್ಷೇತ್ರಗಳನ್ನು ವೀಕ್ಷಿಸಿದರು.

ಎಲ್ಲರಿಗಾಗಿ ಉಚಿತ ಆರೋಗ್ಯ ಸೇವೆ ಯೋಜನೆಯಡಿ ನಮ್ಮ ಕ್ಲಿನಿಕ್ ಗಳ ಉದ್ಘಾಟನೆ

ಉಡುಪಿ: ಬುಧವಾರದಂದು ಬೀಡಿನಗುಡ್ಡೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಉಡುಪಿ ಇವರ ಸಹಯೋಗದಲ್ಲಿ ನಮ್ಮ ಕ್ಲಿನಿಕ್ ನ ಉದ್ಘಾಟನೆ ನಡೆಯಿತು. ಸೇವೆಯನ್ನು ಉದ್ಘಾಟಿಸಿ ಮಾತನಾಡಿದ ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್, ನಮ್ಮ ಕ್ಲಿನಿಕ್ ಜನಸ್ನೇಹಿ, ಜನೋಪಯೋಗಿ ಆರೋಗ್ಯ ಸೇವೆ ಒದಗಿಸಬೇಕು. ನಗರ ಪ್ರದೇಶ ವ್ಯಾಪ್ತಿಯಲ್ಲಿ ಬಡಜನರನ್ನೊಳಗೊಂಡಂತೆ ಎಲ್ಲರಿಗೂ ಆರೋಗ್ಯ ಸೇವೆಯನ್ನು ಸರಳವಾಗಿ ಪಡೆಯಲು ಅನುಕೂಲವಾಗುವ ಉದ್ದೇಶದಿಂದ ಇದನ್ನು ಪ್ರಾರಂಭಿಸಲಾಗಿದೆ ಎಂದರು. ಜಿಲ್ಲೆಯಲ್ಲಿ […]