ವಿದ್ಯಾರ್ಥಿನಿಯಂತೆ ಬಂದು ರ‍್ಯಾಗಿಂಗ್ ಗ್ಯಾಂಗ್ ಅನ್ನು ಪತ್ತೆ ಹಚ್ಚಿದ ರಹಸ್ಯ ಪೊಲೀಸ್: ಇಂದೋರ್ ನಲ್ಲಿ ಸಿನಿಮೀಯ ಕಾರ್ಯಾಚರಣೆ

ಭೋಪಾಲ್: ಥೇಟ್ ವಿದ್ಯಾರ್ಥಿನಿಯಂತೆಯೆ ಕಾಲೇಜಿಗೆ ಬಂದು ಕ್ಯಾಂಪಸ್ ನಲ್ಲಿ ಅಡ್ಡಾಡುತ್ತಿದ್ದ ಆಕೆ ವಿದ್ಯಾರ್ಥಿನಿಯಲ್ಲ, ಬದಲಿಗೆ ರ‍್ಯಾಗಿಂಗ್ ಬಗ್ಗೆ ಪುರಾವೆಗಳನ್ನು ಸಂಗ್ರಹಿಸುವ ರಹಸ್ಯ ಪೊಲೀಸ್ ಆಗಿದ್ದಳು! ಕಾಲೇಜಿಗೆ ಭೇಟಿ ನೀಡುತ್ತಿದ್ದ ಮೂರು ತಿಂಗಳ ಅವಧಿಯಲ್ಲಿ ಮೊದಲ ವರ್ಷದ ವಿದ್ಯಾರ್ಥಿಗಳ ಕ್ರೂರ ರ‍್ಯಾಗಿಂಗ್ ನಲ್ಲಿ ಭಾಗಿಯಾಗಿದ್ದ 11 ಹಿರಿಯ ವಿದ್ಯಾರ್ಥಿಗಳನ್ನು ಈಕೆ ಗುರುತಿಸಿದ್ದಾಳೆ. ಇದೀಗ ಆ 11 ಹಿರಿಯ ವಿದ್ಯಾರ್ಥಿಗಳನ್ನು ಮೂರು ತಿಂಗಳ ಕಾಲ ಕಾಲೇಜು ಮತ್ತು ಹಾಸ್ಟೆಲ್‌ನಿಂದ ಅಮಾನತುಗೊಳಿಸಲಾಗಿದೆ. ಇಂದೋರ್‌ನ ಮಹಾತ್ಮಾ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜಿನಲ್ಲಿ ಇತ್ತೀಚೆಗೆ […]

ಬೈಂದೂರು ಹುಡುಗರ ಬೇಕರಿ ದುರಸ್ತಿಗೊಳಿಸಿ ಮಾನವೀಯತೆ ಮೆರೆದ ಡಾ. ಗೋವಿಂದ ಬಾಬು ಪೂಜಾರಿ

ಬೆಂಗಳೂರು: ಇತ್ತೀಚೆಗಷ್ಟೆ ಕುಂದನಹಳ್ಳಿ ಗೇಟ್ ಸಮೀಪ ಬೈಂದೂರಿನ ಬೇಕರಿ ಹುಡುಗರ ಮೇಲಿನ ಹಲ್ಲೆ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ನಡೆದ ಹೋರಾಟದಲ್ಲಿ ಭಾಗಿಯಾದ ಡಾ. ಗೋವಿಂದ ಬಾಬು ಪೂಜಾರಿಯವರು ಹಾನಿಗೊಳಗಾದ ಬೇಕರಿಯನ್ನು ದುರಸ್ತಿ ಮಾಡುವ ಭರವಸೆ ನೀಡಿದ್ದರು.   ಅವರ ಸೂಚನೆಯ ಮೇರೆಗೆ ಅವರ ಸಿಬ್ಬಂದಿ ವರ್ಗದವರು ಆದಿತ್ಯವಾರ ಹಾಗೂ ಸೋಮವಾರದಂದು ಬೇಕರಿ ಹುಡುಗರ ಜೊತೆಗಿದ್ದು ಹಾನಿಗೊಳಗಾದ ಉಪಕರಣಗಳನ್ನು ದುರಸ್ತಿಗೊಳಿಸಿ ಡಾ. ಗೋವಿಂದ ಬಾಬು ಪೂಜಾರಿಯವರ ಪರವಾಗಿ ಪೂಜೆ ಸಲ್ಲಿಸಿ ಬೇಕರಿಯನ್ನು ಪುನರಾಂಭಿಸಿದ್ದಾರೆ. ದೂರದ ಬೆಂಗಳೂರಿಗೆ ಬದುಕು […]

ಪೂರ್ವ ಸ್ವಾಮ್ಯದ ವಾಹನ ಮಾರಾಟಗಾರರ ಸಂಘದ ವತಿಯಿಂದ ಜೀವಮಾನ ಸದಸ್ಯತ್ವ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ

ಉಡುಪಿ: ಪೂರ್ವ ಸ್ವಾಮ್ಯದ ವಾಹನ ಮಾರಾಟಗಾರರ ಸಂಘದ ವತಿಯಿಂದ ಸಂಘದ ಎಲ್ಲ ಸಮಿತಿ ಸದಸ್ಯರಿಗೆ ಹಾಗೂ ಆಜೀವ ಸದಸ್ಯರಿಗೆ ಜೀವಮಾನ ಸದಸ್ಯತ್ವ(ಲೈಫ್ ಟೈಮ್ ಮೆಂಬರ್ಶಿಪ್) ಪ್ರಮಾಣ ಪತ್ರವನ್ನು ಹಾಗೂ ಗುರುತಿನ ಚೀಟಿಯನ್ನು ವಿತರಿಸಲಾಯಿತು. ಉಡುಪಿ, ಬ್ರಹ್ಮಾವರ, ಕುಂದಾಪುರ, ಕಾರ್ಕಳ ಮತ್ತು ಹಿರಿಯಡ್ಕದ ಎಲ್ಲಾ ಆಜೀವ ಸದಸ್ಯರ ಕಚೇರಿಗೆ ತೆರಳಿ ಅವರ ಕುಶಲಕ್ಷೇಮ ವಿಚಾರಿಸಿ ಬಳಿಕ ಅವರಿಗೆ ಜೀವಮಾನ ಸದಸ್ಯತ್ವ ಪ್ರಮಾಣಪತ್ರವನ್ನು ಹಾಗೂ ಗುರುತಿನ ಚೀಟಿಯನ್ನು ನೀಡುವ ಕಾರ್ಯವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು […]

ಡಿ.16 ರಂದು ವರ್ತೆಕಲ್ಕುಡ ದೈವಸ್ಥಾನದ ಕಾಲಾವಧಿ ಸಿರಿಸಿಂಗಾರ ಕೋಲ

ಉಡುಪಿ: ವರ್ತೆಕಲ್ಕುಡ ದೈವಸ್ಥಾನ, ಬಜೆ ತಂಗಾಣ ಇಲ್ಲಿ ಡಿ.16 ಶುಕ್ರವಾರದಂದು ಕಾಲಾವಧಿ ಸಿರಿಸಿಂಗಾರ ಕೋಲ ನಡೆಯಲಿದ್ದು, ರಾತ್ರಿ 7.00ಕ್ಕೆ ಭಜನಾ ಕಾರ್ಯಕ್ರಮ ರಾತ್ರಿ 8.00ಕ್ಕೆ ಅನ್ನ ಸಂತರ್ಪಣೆ ರಾತ್ರಿ 9.00ಕ್ಕೆ ಹೂವಿನ ಪೂಜೆ ಜರುಗಲಿರುವುದು. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತಾಭಿಮಾನಿಗಳು ಆಗಮಿಸಿ, ಶ್ರೀ ದೈವಗಳ ಸಿರಿಮುಡಿ ಗಂಧ- ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಸುಧಾಕರ್ ಶೆಟ್ಟಿ ತಿಳಿಸಿದ್ದಾರೆ.  ಸರ್ವರಿಗೂ ಆದರದ ಸ್ವಾಗತ ಬಯಸುವ ಸುಧಾಕರ ಶೆಟ್ಟಿ ಬಜೆ, ತಂಗಾಣ ತಂಗಾಣ ಕುಟುಂಬಸ್ಥರು, ಬಜೆ ಸಂಪರ್ಕ: […]