ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ ವತಿಯಿಂದ ವೃದ್ಧಾಶ್ರಮಕ್ಕೆ ಉಚಿತವಾಗಿ ಮಾರ್ಗಫಲಕ ಅಳವಡಿಕೆ

ಕಟಪಾಡಿ: ಇಲ್ಲಿನ ಅಗ್ರಹಾರ ಏಣಗುಡ್ಡೆ ಎಂಬಲ್ಲಿ “ಕಾರುಣ್ಯ” ವೃದ್ಧರ ಆಶ್ರಮ/ಅನಾಥರ ಆಶ್ರಮವಿದ್ದು ಇದನ್ನು ಕುಮಾರ್ ದಂಪತಿಗಳು ಸೇವಾರೂಪದಲ್ಲಿ ಕಳೆದ ಎಂಟು ವರ್ಷದಿಂದ ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿ ಹದಿಮೂರು ಜನರಿಗೆ ಉಚಿತವಾಗಿ ವಸತಿ ಕಲ್ಪಿಸಲಾಗಿದ್ದು ನಿರ್ಗತಿಕ ವೃದ್ಧರು ಆಶ್ರಯ ಪಡೆದಿದ್ದಾರೆ. ಸ್ವಂತ ಮಕ್ಕಳೇ ವೃದ್ಧ ತಂದೆತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸುವಂತಹ ಇಂದಿನ ದಿನಗಳಲ್ಲಿ ಸ್ವಂತ ಖರ್ಚಲ್ಲಿ ಇಂತಹ ಸಮಾಜಸೇವೆಯನ್ನು ಸಲ್ಲಿಸುತ್ತಿರುವ ಕುಮಾರ್ ದಂಪತಿಗಳ ಕಾರ್ಯ ಅಭಿನಂದನಾರ್ಹವಾಗಿದೆ. ಕಾರುಣ್ಯ ಆಶ್ರಮವು ಕಟಪಾಡಿ ಪೇಟೆಯಿಂದ ಮೂರು ಕಿಲೋಮೀಟರ್ ದೂರದಲ್ಲಿದ್ದು ಜನರಿಗೆ ಈ ಆಶ್ರಮಕ್ಕೆ […]

ಸುಳ್ಳು ದಾಖಲೆ ಸೃಷ್ಟಿಸಿ ಪಾಸ್ ಪೋರ್ಟ್ ರಚಿಸಿ ವಂಚಿಸಿದ ಆರೋಪಿಗಳಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

ಉಡುಪಿ: ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಪಾಸ್‌ಪೋರ್ಟ್ ಗಳನ್ನು ಹೊಂದಿ ಸರ್ಕಾರಕ್ಕೆ ವಂಚಿಸಿದ ಆರೋಪಿಗಳಿಗೆ ನಗರದ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. ಪಲಿಮಾರು ಗ್ರಾಮದ ರಾಖಿ ವಿನ್‌ಸೆಂಟ್ ಡಿ ಸೋಜಾ ಎಂಬಾತನು ತನ್ನ ಅಣ್ಣನಾದ ಪಿಯೂಶ್ ಆಗಸ್ಟಿನ್ ಡಿ ಸೋಜರವರ ಹೆಸರನ್ನು ದುರ್ಬಳಕೆ ಮಾಡಿ, ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ತನ್ನದೇ ಭಾವಚಿತ್ರ ಹಾಗೂ ಬೇರೆ ಬೇರೆ ಹೆಸರು ಮತ್ತು ವಿಳಾಸದ ಪಾಸ್‌ಪೋರ್ಟ್ಗಳನ್ನು ಹೊಂದಿದ್ದು, ಸದ್ರಿ ಪಾಸ್‌ಪೋರ್ಟ್ಗಳನ್ನು ಹೊಂದಲು ಪಾವುಲ್ ಡಿಸೋಜಾ […]

ಕೋಟೇಶ್ವರ ಕೋಟಿಲಿಂಗೇಶ್ವರ ರಥೋತ್ಸವ ನಿಮಿತ್ತ ಮದ್ಯ ಮಾರಾಟ ನಿಷೇಧ: ಜಿಲ್ಲಾಧಿಕಾರಿ

ಕುಂದಾಪುರ: ತಾಲೂಕಿನ ಕೋಟೇಶ್ವರ ಗ್ರಾಮದ ಮಹತೋಬಾರ ಶ್ರೀ ಕೋಟಿಲಿಂಗೇಶ್ವರರಥೋತ್ಸವ ಕಾರ್ಯಕ್ರಮವು ಡಿಸೆಂಬರ್ 9 ರವರೆಗೆ ನಡೆಯಲಿದ್ದು, ಈ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಠಿಯಿಂದ ಕೋಟೇಶ್ವರ, ಹಂಗಳೂರು ಮತ್ತು ಗೋಪಾಡಿ ಗ್ರಾಮಗಳಲ್ಲಿ ಡಿ. 8 ರ ಬೆಳಗ್ಗೆ 6 ರಿಂದ ಡಿ. 9 ರ ರಾತ್ರಿ 12 ರವರೆಗೆ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್, ರೆಸ್ಟೋರೆಂಟ್ ಮತ್ತು ವೈನ್‌ಶಾಪ್‌ಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿರುತ್ತಾರೆ.

ತ್ರಿಶಾ ವಿದ್ಯಾ ಕಾಲೇಜಿನಲ್ಲಿ ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮ

ಕಟಪಾಡಿ: ಇಲ್ಲಿನ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನದ ಅಂಗವಾಗಿ ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮವನ್ನು ಡಿ.1ರಂದು ಹಮ್ಮಿಕೊಳ್ಳಲಾಯಿತು. ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಲಹೆಗಾರ್ತಿ ಶ್ರೀಮತಿ ರೋಶಿನಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಎಚ್ಐವಿ ಹಾಗೂ ಏಡ್ಸ್ ನಡುವಿನ ವ್ಯತ್ಯಾಸಗಳನ್ನು, ರೋಗದ ಲಕ್ಷಣಗಳನ್ನು, ರೋಗ ಹರಡುವ ವಿಧಾನ ಹಾಗೂ ಅದನ್ನು ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ನಾವು ರೋಗದ ವಿರುದ್ಧ ಹೋರಾಡಬೇಕೆ ಹೊರತು ರೋಗಿಯ ವಿರುದ್ಧ ಅಲ್ಲ ಎಂದು ಕರೆ ನೀಡಿದರು. […]

ಮಂಗಳೂರು: ಕ್ಲಿಕ್ ಲ್ಯಾಬ್ಸ್ ನಲ್ಲಿ ಉದ್ಯೋಗಾವಕಾಶ

ಮಂಗಳೂರು: ಕ್ಲಿಕ್ ಲ್ಯಾಬ್ಸ್ ಸಂಸ್ಥೆಯಲ್ಲಿ ಕಸ್ಟಮರ್ ಸಕ್ಸೆಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಹ ಅಭ್ಯರ್ಥಿಗಳು ಬೇಕಾಗಿದ್ದಾರೆ. ಕೌಶಲ್ಯ: ಗುಣಮಟ್ಟದ ಮತ್ತು ವೈಯಕ್ತೀಕರಿಸಿದ ಗ್ರಾಹಕ ಸೇವೆ ನೀಡಲು ಸಮರ್ಥರಾಗಿರಬೇಕು. ಉತ್ಪನ್ನಗಳ ಕುರಿತು ಒಳನೋಟಗಳನ್ನು ರವಾನಿಸಿ ಮತ್ತು ಕಂಪನಿ ತಮ್ಮ ಡಿಜಿಟಲ್ ಗುರಿಯನ್ನು ಸಾಧಿಸಲು ಬೆಂಬಲಿಸಬೇಕು. ಗ್ರಾಹಕರೊಂದಿಗೆ ಸಂವಹನ ನಡೆಸಿ ಮತ್ತು ನಿಯಮಿತ ಪ್ರತಿಕ್ರಿಯೆಯನ್ನು ಸಂಗ್ರಹಿಸಬೇಕು. ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡಬೇಕು. ಅನುಭವ: 0-2 ವರ್ಷ ಸ್ಥಳ: ಮಂಗಳೂರು ಇ-ಮೇಲ್ ವಿಳಾಸ: [email protected]