ಡಿಸೆಂಬರ್ 11 ರಂದು ಐತಿಹಾಸಿಕ ತೋನ್ಸೆ-ಪಡುಮನೆ ಕಂಬಳ

ಉಡುಪಿ: ಐತಿಹಾಸಿಕ ತೋನ್ಸೆ-ಪಡುಮನೆ ಕಂಬಳವು ಡಿಸೆಂಬರ್ 11 ರಂದು ನಡೆಯಲಿದೆ. ಇದು ಉಡುಪಿ ಜಿಲ್ಲೆಯ ಪ್ರಸಿದ್ಧ ಕಂಬಳಗಳಲ್ಲಿ ಒಂದಾಗಿದೆ. ತೋನ್ಸೆ ಪಡುಮನೆ ಕಂಬಳದ ಕೀರ್ತಿಯು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದಿಂದ ಕೇರಳದ ಉತ್ತರ ಭಾಗದವರೆಗೆ ಹಬ್ಬಿದ್ದು, ನೆರೆ ರಾಜ್ಯದಿಂದಲೂ ಜನರು ಕಂಬಳದಲ್ಲಿ ಭಾಗವಹಿಸುತ್ತಾರೆ. ಅಂದು ಮಧ್ಯಾಹ್ನ 1 ಗಂಟೆಗೆ ಕಂಬಳ ಪ್ರಾರಂಭವಾಗಲಿದ್ದು ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷ ತೋನ್ಸೆ ಪಡುಮನೆ ಶುಭರಾಮ್ ಶೆಟ್ಟಿ ಮತ್ತು ತೋನ್ಸೆ ಗ್ರಾ.ಪ. ಅಧ್ಯಕ್ಷೆ ಶ್ರೀಮತಿ ಲತಾ ಭಾಗವಹಿಸಲಿದ್ದಾರೆ. ಸಂಜೆ 6 […]

ತಲ್ಲೂರು ಶಿವರಾಮ್ ಶೆಟ್ಟಿ ಇವರಿಗೆ ಕರ್ನಾಟಕ ಜಾನಪದ ವಿವಿ ಗೌರವ ಡಾಕ್ಟರೇಟ್

ಉಡುಪಿ: ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಅರೆಮಲ್ಲಾಪುರದ ಜಾನಪದ ಕಲಾವಿದ ಕೆಂಚಪ್ಪ ನಾಗರಾಜಿ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಜೀವನ್ ರಾಮ್, ಉಡುಪಿಯ ಯಕ್ಷಗಾನ ಕಲಾವಿದ ತಲ್ಲೂರು ಶಿವರಾಮ ಶೆಟ್ಟಿ, ಹುಬ್ಬಳ್ಳಿಯ ರಂಗಕರ್ಮಿ ಯಶವಂತ ಸರದೇಶಪಾಂಡೆ,ಗದಗ ಜಿಲ್ಲೆಯ ಗಂಗಿಮಾದಿನಗರದ ಬಸವರಾಜ ಕೆಂಚಿಗೇರಿ ವೆಂಕಪ್ಪ ಅಂಬಾಜಿ ಸುಗೇಟ್ಕರ್ (ಬಾಗಲಕೋಟ ಜಿಲ್ಲೆ), ಇವರಿಗೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿದೆ ಎಂದು ವಿವಿ ಉಪಕುಲಪತಿ ಪ್ರೊ.ಟಿ.ಎಂ.ಭಾಸ್ಕರ್ ಸೋಮವಾರದಂದು ತಿಳಿಸಿದ್ದಾರೆ. ಡಾ.ತಲ್ಲೂರು ಶಿವರಾಮ ಶೆಟ್ಟಿ ಇವರು ಪ್ರಸ್ತುತ […]

ರಸ್ತೆ ಕಾಮಗಾರಿ ವಿಳಂಬ: ಗುತ್ತಿಗೆದಾರರ ಮನೆಗೆ ಭೇಟಿ ನೀಡಿದ ವಿಜಯ್ ಕೊಡವೂರು; ಕಾಮಗಾರಿ ಪ್ರಾರಂಭ

ಮಲ್ಪೆ: ಜನರ ಸಮಸ್ಯೆಗೆ ಸ್ಪಂದಿಸದೆ ವಿಳಂಬ ನೀತಿ ಅನುಸರಿಸುತ್ತಿದ್ದ ರಸ್ತೆ ಗುತ್ತಿಗೆದಾರರ ಮನೆಗೆ ವಿಜಯ್ ಕೊಡವೂರು ನೇತೃತ್ವದಲ್ಲಿ ಗ್ರಾಮಸ್ಥರೊಂದಿಗೆ ಭೇಟಿ ನೀಡಲಾಯಿತು. ಮೂರನೇ ಹಂತದ ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯಲ್ಲಿ ಆಶೀರ್ವಾದ್ – ಉದ್ದಿನ ಹಿತ್ಲು – ತೊಟ್ಟಂ (3.5 ಕಿ ಮೀ)ನ ಮಾರ್ಗವು ಸುಮಾರು 305 ಲಕ್ಷ ರೂಪಾಯಿಗಳ ಅಂದಾಜು ಅನುದಾನದಲ್ಲಿ ನಿರ್ಮಾಣವಾಗಲಿರುವ ಕಾಂಕ್ರೀಟ್ ರಸ್ತೆಯ ಟೆಂಡರ್ ಅವಧಿಯು 09-08-2021 ರಿಂದ 09-07-2022 ರವರೆಗಿದ್ದು, ಮುಂದಿನ 5 ವರ್ಷಗಳ ನಿರ್ವಹಣೆಯ ಜವಬ್ದಾರಿಯೂ ಗುತ್ತಿಗೆದಾರರಾಗಿರುತ್ತದೆ. ಗುತ್ತಿಗೆದಾರರು ಮಳೆಗಾಲದ ನೆಪ […]