ಮಂಗಳೂರು: ಬಲವಂತದ ಮತಾಂತರ ಪ್ರಕರಣ; ಮೂವರ ವಿರುದ್ಧ ಎಫ್‌ಐಆರ್ ದಾಖಲು
ಮಂಗಳೂರು: ಬಾಲಕಿಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲು ಯತ್ನಿಸಿದ ಆರೋಪದ ಮೇಲೆ ಮಹಿಳಾ ವೈದ್ಯೆ ಸೇರಿದಂತೆ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸಂತ್ರಸ್ತೆ ಶಿವಾನಿ ಅವರ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಖಲೀಲ್, ಡಾ ಜಮೀಲಾ ಮತ್ತು ಐಮನ್ ವಿರುದ್ಧ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಕಾಯ್ದೆ 2022 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಸಂತ್ರಸ್ತೆಯ ತಾಯಿ ನೀಡಿದ ದೂರಿನ ಪ್ರಕಾರ, ಶಿವಾನಿ ಖಲೀಲ್ ಎಂಬುವರಿಗೆ ಸೇರಿದ ಅಂಗಡಿಯಲ್ಲಿ ತನ್ನ ಮೊಬೈಲ್ ಫೋನ್ ರೀಚಾರ್ಜ್ ಮಾಡುತ್ತಿದ್ದಳು. […]
ಎರಡನೇ ಸುತ್ತಿನ ನೀಟ್ ಯುಜಿ ಕೌನ್ಸೆಲಿಂಗ್ ಫಲಿತಾಂಶ ಪ್ರಕಟ
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ವು ಎರಡನೇ ಸುತ್ತಿನ ನೀಟ್ ಯುಜಿ ಕೌನ್ಸೆಲಿಂಗ್ 2022 ರ ಸೀಟು ಹಂಚಿಕೆ ಫಲಿತಾಂಶವನ್ನು ಪ್ರಕಟಿಸಿದೆ. ಅಭ್ಯರ್ಥಿಗಳು ಇದನ್ನು kea.kar.nic.in ಅಥವಾ cetonline.karnataka.gov.in/kea ನಲ್ಲಿ ಪರಿಶೀಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳು ಶುಲ್ಕವನ್ನು ಈಗಾಗಲೇ ಪಾವತಿಸದಿದ್ದರೆ, ನವೆಂಬರ್ 28 ರಂದು ಮಧ್ಯಾಹ್ನ 1 ರಿಂದ ನವೆಂಬರ್ 30, 2022 ರವರೆಗೆ ಪಾವತಿಸಬಹುದು. ನವೆಂಬರ್ 28 (ಮಧ್ಯಾಹ್ನ 3) ರಿಂದ ಡಿಸೆಂಬರ್ 2 (ರಾತ್ರಿ 11:59) ವರೆಗೆ ಪ್ರವೇಶ ಆದೇಶವನ್ನು ಡೌನ್‌ಲೋಡ್ ಮಾಡಬಹುದು. ಕೆಇಎ ಬಿಡುಗಡೆ […]
ಗೀತಾ ಜಯಂತಿ ಪ್ರಯುಕ್ತ ರಾಜಾಂಗಣದಲ್ಲಿ ಭಗವದ್ಗೀತಾ ಪ್ರವಚನ
ಉಡುಪಿ: ಕಿದಿಯೂರು ಹೋಟೆಲ್ಸ್ ನ ಮಾಲಕ ಭುವನೇಂದ್ರ ಕಿದಿಯೂರು ಇವರ 25 ನೇ ವರ್ಷದ ಪ್ರಾಯೋಜಕತ್ವದೊಂದಿಗೆ ಗೀತಾ ಜಯಂತಿ ಪ್ರಯುಕ್ತ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರ ಅನುಗ್ರಹದೊಂದಿಗೆ ಬೆಂಗಳೂರಿನ ವಿದ್ವಾನ್ ಬ್ರಹ್ಮಣ್ಯಾಚಾರ್ಯರಿಂದ “ಶ್ರೀಭಗವದ್ಗೀತಾ” ಪ್ರವಚನ ಕಾರ್ಯಕ್ರಮ ಜರುಗಿತು.
ಶ್ರೀಕ್ಷೇತ್ರ ಕಲ್ಯಾಣಪುರದಲ್ಲಿ 94ನೇ ಭಜನಾ ಸಪ್ತಾಹ ಮಹೋತ್ಸವ ಆರಂಭ
ಉಡುಪಿ: ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವರ ಸನ್ನಿಧಿಯಲ್ಲಿ ವರ್ಷ೦ಪ್ರತಿ ನಡೆಯುವ ಭಜನಾ ಸಪ್ತಾಹವು ಸೋಮವಾರದಂದು ಪ್ರಾರಂಭವಾಯಿತು. ಶ್ರೀದೇವರಿಗೆ ಅರ್ಚಕರಾದ ಕೆ. ಜಯದೇವ್ ಭಟ್ ರವರ ಉಪಸ್ಥಿತಿಯಲ್ಲಿ ಪ್ರಾರ್ಥನೆಯನ್ನುಸಲ್ಲಿಸಿ, ಮಂಗಳಾರತಿ ಬೆಳಗಿಸಿ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಚಾಲನೆಯನ್ನು ನೀಡಲಾಯಿತು. ಹರಿನಾಮ ಸ೦ಕೀರ್ತನೆಯೊ೦ದಿಗೆ ಶ್ರೀವಿಠೋಭರಖುಮಾಯಿ ದೇವರನ್ನು ಪಲ್ಲಕ್ಕಿಯಲ್ಲಿರಿಸಿ ಸಪ್ತಾಹದ ಸಾಳಿಯಲ್ಲಿರಿಸಿ ಮಹಾ ಮಂಗಳಾರತಿ ಬೆಳಗಿಸಿ ಬಳಿಕ ಭಜನಾ ದೀಪಸ್ತಂಭಕ್ಕೆ ಪ್ರಧಾನ ಅರ್ಚಕರಾದ ಜಯದೇವ್ ಭಟ್ ಆರತಿ ಬೆಳಗಿಸಿದರು. ಸಪ್ತಾಹ ಮಹೋತ್ಸವದ ಪ್ರಯುಕ್ತವಾಗಿ ಶ್ರೀದೇವರನ್ನು ಹಾಗೂ ಪರಿವಾರ ದೇವರನ್ನು ವಿಶೇಷ […]
ವಿದ್ಯಾಲಕ್ಷ್ಮೀ ಸಮೂಹ ಸಂಸ್ಥೆಯಲ್ಲಿ ಫ್ರೆಷರ್ಸ್ ಡೇ ಆಚರಣೆ
ಬ್ರಹ್ಮಾವರ: ಶನಿವಾರದಂದು ಇಲ್ಲಿನ ವಿದ್ಯಾಲಕ್ಷ್ಮೀ ಸಮೂಹ ಸಂಸ್ಥೆಯಲ್ಲಿ ಕಾಲೇಜಿನ ಹೊಸ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮ ಫ್ರೆಷರ್ಸ್ ಡೇ ಅನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಜನತಾ ಪ.ಪೂ ಕಾಲೇಜಿನ ಪ್ರಾಂಶುಪಾಲ ಗಣೇಶ್ ಮೊಗವೀರ್, ಬ್ರಹ್ಮಾವ ಪೊಲೀಸ್ ಠಾಣೆಯ ಪಿ.ಎಸ್.ಐ ರಾಜಶೇಖರ್ ವಂಡಳ್ಳಿ ಇವರು ಭಾಗವಹಿಸಿದ್ದರು. ಕಾಲೇಜಿನ ಸಂಸ್ಥಾಪಕ ಸುಬ್ರಹ್ಮಣ್ಯ ಇವರು ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಶುಭ ಹಾರೈಸಿದರು. ಕಾಲೇಜಿನ ನಿರ್ದೇಶಕಿ ಶ್ರೀಮತಿ ಮಮತಾ, ಪ್ರಾಂಶುಪಾಲೆ ಶ್ರೀಮತಿ ಡಾ.ಸೀಮಾ ಭಟ್, ಅಧ್ಯಾಪಕ ವೃಂದದವರು ಮತ್ತಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕಿಯರಾದ […]