ಎಕ್ಸಲೆಂಟ್ ಪ.ಪೂರ್ವ ಕಾಲೇಜಿನ ವಿದಾರ್ಥಿಗಳಿಗಾಗಿ ಕೈಗಾರಿಕಾ ಕೇಂದ್ರಗಳಿಗೆ ಭೇಟಿ ಕಾರ್ಯಕ್ರಮ
ಕುಂದಾಪುರ: ಸುಣ್ಣಾರಿಯ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕೈಗಾರಿಕಾ ಸಂಸ್ಥೆಯ ವೀಕ್ಷಣೆ ಹಾಗೂ ಅಧ್ಯಯನ ವಿಷಯಕ್ಕೆ ಸಂಬಂಧಿಸಿದಂತೆ ಕೈಗಾರಿಕಾ ಕೇಂದ್ರಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಏರ್ಪಡಿಸಲಾಯಿತು. ಉಡುಪಿ ಜಿಲ್ಲೆಯ ಉಪ್ಪೂರಿನ ಬಳಿ ಇರುವ ಕೆ.ಎಂ.ಎಫ್ ನಂದಿನಿ ಡೈರಿ ಸ್ಥಾವರಕ್ಕೆ ವಿದ್ಯಾರ್ಥಿಗಳು ಭೇಟಿ ಕೊಟ್ಟು ಹಾಲಿನ ಪಾಶ್ಚರೀಕರಣ ಮತ್ತು ಹಾಲನ್ನು ಪ್ಯಾಕೇಟುಗಳಲ್ಲಿ ಸಂಗ್ರಹಿಸುವ ವಿಧಾನಗಳ ಬಗ್ಗೆ ತಿಳಿದುಕೊಂಡರು. ಹಾಲಿನಿಂದ ತಯಾರಾಗುವ ವಿವಿಧ ತಿಂಡಿ-ತಿನಿಸುಗಳು, ಸಂಗ್ರಹಿಸುವ ವಿಧಾನಗಳು ಹಾಗೂ ವಿತರಣಾ ಕ್ರಮಗಳ ಬಗ್ಗೆ ಅರಿತುಕೊಂಡರು. […]
ಜಿಲ್ಲಾ ಯುವ ಮಂಡಳಿ ಪ್ರಶಸ್ತಿ: ಯುವಕ-ಯುವತಿ ಮಂಡಳಿಗಳಿಂದ ಅರ್ಜಿ ಆಹ್ವಾನ
ಉಡುಪಿ: ನೆಹರು ಯುವ ಕೇಂದ್ರದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಯುವ ಮಂಡಳಿ ಪ್ರಶಸ್ತಿಗೆ ಯುವಕ-ಯುವತಿ ಮಂಡಳಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾ ನೋಂದಾಣಾಧಿಕಾರಿಗಳ ಕಚೇರಿಯಲ್ಲಿ ನೋಂದಾವಣೆಯಾಗಿ, ನೆಹರು ಯುವ ಕೇಂದ್ರದಲ್ಲಿ ಸಂಯೋಜನೆ ಹೊಂದಿರುವ, 2021 ಏಪ್ರಿಲ್ 1 ರಿಂದ 2022 ಮಾರ್ಚ್ 31 ರ ಒಳಗೆ ಗ್ರಾಮ, ಪಟ್ಟಣ ಮತ್ತು ತಾಲೂಕು ಅಭಿವೃದ್ಧಿಗಾಗಿ ಜನಪರ ಕಾರ್ಯಕ್ರಮಗಳನ್ನು ನಡೆಸಿರುವ ಜಿಲ್ಲೆಯ ಯುವಕ-ಯುವತಿ ಮಂಡಳಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗುವ ಯುವ ಮಂಡಳಗಳು 25,000 ರೂ. ಪ್ರಶಸ್ತಿ ಪತ್ರದ […]
ದನದ ಸೆಗಣಿಯಿಂದ ಪ್ಲಾಸ್ಟರ್, ಕಹಿಬೇವಿನ ಇಟ್ಟಿಗೆಯಿಂದ ವಾರ್ಷಿಕ 10 ಲಕ್ಷ ಸಂಪಾದನೆ: ಹರ್ಯಾಣಾದ ಪ್ರಾಧ್ಯಾಪಕರ ಅಮೋಘ ಸಾಧನೆ
ಹರ್ಯಾಣದ ಪ್ರಾಧ್ಯಾಪಕರಾದ ಡಾ ಶಿವದರ್ಶನ್ ಮಲಿಕ್ ಅವರು ಪರಿಸರ ಸ್ನೇಹಿ ಆವಿಷ್ಕಾರವನ್ನು ಕಂಡುಹಿಡಿದ್ದಾರೆ ಮತ್ತು ಇದು ಭವಿಷ್ಯದಲ್ಲಿ ಮನೆಯಲ್ಲಿ ಬಳಕೆಯಾಗುವ ವಾತಾನುಕೂಲಕ(ಎಸಿ)ಗಳ ಅಗತ್ಯವನ್ನು ಇಲ್ಲವಾಗಿಸಬಹುದು ಎಂದು ಭಾವಿಸಲಾಗಿದೆ. ಶಿವದರ್ಶನ್ ಅವರು ಹಸುವಿನ ಸಗಣಿಯಿಂದ ಪ್ಲಾಸ್ಟರ್ಗಳನ್ನು ಮತ್ತು ಬೇವಿನಿಂದ ಇಟ್ಟಿಗೆಗಳನ್ನು ಮಾಡುವ ವಿನೂತನ ವಿಧಾನವನ್ನು ಕಂಡುಹಿಡಿದಿದ್ದಾರೆ. ಮನೆಯಲ್ಲಿ ಇವುಗಳ ಅಳವಡಿಕೆಯಿಂದ ತಾಪಮಾನವು 7 ಡಿಗ್ರಿ ತಂಪಾಗಿರುತ್ತದೆ. ಇವು ಶಾಖ ಮತ್ತು ಗಮನಾರ್ಹ ಇಂಗಾಲದ ಹೆಜ್ಜೆಗುರುತನ್ನು ಉತ್ಪಾದಿಸುವ ಕಾಂಕ್ರೀಟ್ನ ಅಗತ್ಯವನ್ನು ಕಡಿಮೆ ಮಾಡುತ್ತದೆ. ಈ ವಿಧಾನದಿಂದ ಎಸಿ ಬಳಕೆಯ ಅಗತ್ಯವೂ […]
ಕೂಚಿಪುಡಿ ನೃತ್ಯೋತ್ಸವದಲ್ಲಿ ಅನೌಷ್ಕಾ ಸುನಕ್ ಭಾಗಿ: ಭಾರತವೆಂದರೆ ನನಗಿಷ್ಟ ಎಂದ ಪೋರಿ
ಲಂಡನ್: ಭಾರತವು ನನ್ನ ಕುಟುಂಬ, ಮನೆ ಮತ್ತು ಸಂಸ್ಕೃತಿ ಒಟ್ಟಿಗೆ ಬೆರೆತಿದೆ ಮತ್ತು ನಾನು ಪ್ರತಿ ವರ್ಷ ಅಲ್ಲಿಗೆ ಹೋಗಲು ಇಷ್ಟಪಡುತ್ತೇನೆ ಎಂದು ಲಂಡನ್ನಲ್ಲಿ ನಡೆದ ಕೂಚಿಪುಡಿ ನೃತ್ಯ ಉತ್ಸವ – ರಂಗ್ 2022 ರಲ್ಲಿ ಯುಕೆ ಪ್ರಧಾನಿ ರಿಷಿ ಸುನಕ್ ಅವರ ಪುತ್ರಿ ಅನೌಷ್ಕಾ ಸುನಕ್ ಹೇಳಿದ್ದಾರೆ. ಖ್ಯಾತ ಕೂಚಿಪುಡಿ ನರ್ತಕಿ ಅರುಣಿಮಾ ಕುಮಾರ್ ಅವರು ಸಂಯೋಜಿಸಿದ್ದ ನೃತ್ಯೋತ್ಸವದಲ್ಲಿ, 4 ರಿಂದ 85 ವರ್ಷ ವಯಸ್ಸಿನ ಪ್ರಪಂಚದಾದ್ಯಂತದ 100 ಕಲಾವಿದರು ಇದರಲ್ಲಿ ಭಾಗವಹಿಸಿದ್ದರು. ಭಾರತದ 75 […]
ಮುಂದಿನ ಚುನಾವಣೆಯಲ್ಲಿ ಒಬ್ಬ ವ್ಯಕ್ತಿಗೆ ಒಂದೇ ಟಿಕೆಟ್: ಕಾಂಗ್ರೆಸ್ ಉಸ್ತುವಾರಿ ಡಿಕೆ ಶಿವಕುಮಾರ್
ಬೆಂಗಳೂರು: ಮುಂಬರುವ ಚುನಾವಣೆಯಲ್ಲಿ ಒಬ್ಬ ವ್ಯಕ್ತಿಗೆ ಒಂದೇ ಟಿಕೆಟ್ ಸಿಗಲಿದೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಡಿಕೆ ಶಿವಕುಮಾರ್ ಶುಕ್ರವಾರ ಹೇಳಿದ್ದಾರೆ. ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಿಂದ ಸ್ಪರ್ಧಿಸಲು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿರುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ಯಾರೇ ಆಗಲಿ ಒಬ್ಬರಿಗೆ ಒಂದೇ ಟಿಕೆಟ್ ಸಿಗುತ್ತದೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದ್ದು, ಇಲ್ಲಿ ಪಕ್ಷಕ್ಕಿಂತ ವ್ಯಕ್ತಿ ಮುಖ್ಯವಲ್ಲ. ಪಕ್ಷ ಅಧಿಕಾರಕ್ಕೆ ಬರಬೇಕು, ಅದು ಆದಾಗ ಎಲ್ಲರಿಗೂ ಅಧಿಕಾರ ಸಿಗುತ್ತದೆ.ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ […]