ಮಂಗಳೂರು: ನ. 27 ರಂದು ಗುರು ಬೆಳದಿಂಗಳು ವತಿಯಿಂದ ಬೃಹತ್ ಉಚಿತ ಆರೋಗ್ಯ ಮೇಳ
ಮಂಗಳೂರು: ಗುರುಬೆಳದಿಂಗಳು ಫೌಂಡೇಶನ್ ಕುದ್ರೋಳಿ ಆಶ್ರಯದಲ್ಲಿ ಭರವಸೆ ಚಾರಿಟೆಬಲ್ ಫೌಂಡೇಶನ್ ಬೆಂಗಳೂರು ವತಿಯಿಂದ ನ. 27ರಂದು ಬೆಳಗ್ಗೆ 8.30 ರಿಂದ ಸಾಯಂಕಾಲ 4 ರವರೆಗೆ ಮಂಗಳೂರಿನ ಶ್ರೀ ಗೋಕರ್ಣನಾಥ ಕಾಲೇಜು ಸಭಾಂಗಣದಲ್ಲಿ ಪುರುಷ, ಮಕ್ಕಳು ಮತ್ತು ಮಹಿಳೆಯರಿಗಾಗಿ ಬೃಹತ್ ಉಚಿತ ಆರೋಗ್ಯ ಮೇಳ ಆಯೋಜಿಸಲಾಗಿದೆ. ಮಹಿಳೆಯರ ಮುಟ್ಟಿನ ತೊಂದರೆ, ಬಂಜೆತನ, ಲೈಂಗಿಕ ಸಮಸ್ಯೆ, ರಕ್ತಹೀನತೆ, ಎಚ್ ಪಿ ವಿ ಪರೀಕ್ಷೆ (ಗರ್ಭಕಂಠದ ಕ್ಯಾನ್ಸರ್, ಸ್ತನ ಕ್ಯಾನ್ಸರ್) ತಡೆಗಟ್ಟವಿಕೆ, ಎಲ್ಲಾ ಸ್ತ್ರೀ ರೋಗಗಳ ತಡೆಗಟ್ಟುವಿಕೆ, ಮಾರ್ಗದರ್ಶನ ಮತ್ತು ಚಿಕಿತ್ಸೆ […]
ಕಾರ್ಕಳ: ನವೆಂಬರ್ 26 ರಂದು ಕೋಟಿ ಚೆನ್ನಯ್ಯ ಥೀಂ ಪಾರ್ಕಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ
ಕಾರ್ಕಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ, ಕೋಟಿ ಚೆನ್ನಯ ಅಭಿವೃದ್ಧಿ ಸಮಿತಿ ಹಾಗೂ ಯಕ್ಷ ರಂಗಾಯಣ ಕಾರ್ಕಳ ಇವರ ಸಹಯೋಗದೊಂದಿಗೆ ಕಾರ್ಕಳ ಕೋಟಿ ಚೆನ್ನಯ್ಯ ಥೀಂ ಪಾರ್ಕ್ನಲ್ಲಿ ನಡೆಯಲಿರುವ ಮಾಸಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವು ನವೆಂಬರ್ 26 ರಂದು ಸಂಜೆ 5.30 ಕ್ಕೆ ನಡೆಯಲಿದೆ. ಮೊದಲ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಅಂದು ಸಂಜೆ 6 ರಿಂದ ರಾತ್ರಿ 9 ರವರೆಗೆ ರಾಮ ನಿರ್ಯಾಣ ಯಕ್ಷಗಾನ ತಾಳಮದ್ದಳೆಯನ್ನು ಏರ್ಪಡಿಸಲಾಗಿದೆ. ಪ್ರತಿ ತಿಂಗಳು ಥೀಂ ಪಾರ್ಕ್ನಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಚಟುವಟಿಕೆಗಳು […]
ಶಿರ್ವದಲ್ಲೊಬ್ಬ ತದ್ರೂಪಿ ರಿಷಭ್ ಶೆಟ್ಟಿ: ಕಾಂತಾರದ ಶಿವ ಪಾತ್ರಧಾರಿ ರಿಷಭ್ ರೀತಿ ಕಾಣುವ ವ್ಯಕ್ತಿಗೆ ಬೇಸ್ತು ಬಿದ್ದ ಜನ!
ಶಿರ್ವ: ಉಡುಪಿಯ ಶಿರ್ವದ ಪಂಜಿಮಾರಿನಲ್ಲೊಬ್ಬ ಹೆಚ್ಚುಕಡಿಮೆ ಕಾಂತಾರದ ಶಿವ ಪಾತ್ರಧಾರಿಯಾದ ರಿಷಭ್ ಶೆಟ್ಟರಂತೆಯೆ ಕಾಣುವ ವ್ಯಕ್ತಿಯೊಬ್ಬರಿದ್ದಾರೆ. ದೂರದಿಂದ ನೋಡಿದಾಗ ರಿಷಭ್ ಶೆಟ್ರೇ ಬಂದರೇನೋ ಅನ್ನಿಸಿಬಿಡುತ್ತದೆ. ಆದರೆ ಹತ್ತಿರಹೋಗಿ ನೋಡಿದಾಗ ಇದು ರಿಷಭ್ ಶೆಟ್ರಲ್ಲ ಬದಲಿಗೆ ಅವರ ತದ್ರೂಪಿ ಎನ್ನುವುದು ಗೊತ್ತಾಗಿ ಜನ ಬೇಸ್ತು ಬೀಳುತ್ತಿದ್ದಾರೆ! ಶಿರ್ವದ ಪಂಜಿಮಾರಿನ ನಿವಾಸಿ ಪ್ರದೀಪ್ ಆಚಾರ್ಯ ಇವರೇ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿರುವ ಜ್ಯೂನಿಯರ್ ರಿಷಭ್ ಶೆಟ್ಟಿ. ಪ್ರಸ್ತುತ ಇವರು ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಕಾಂತಾರದ ಶಿವ ಪಾತ್ರದಲ್ಲಿ […]
ಬ್ರಹ್ಮಾವರ: ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ಅಂತರ್ ಕಾಲೇಜು ಭಾಷಣ ಮತ್ತು ಪ್ರಬಂಧ ಸ್ಪರ್ಧೆ
ಬ್ರಹ್ಮಾವರ: ಗುರುವಾರದಂದು ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯ ಸಾಹಿತ್ಯ ಸಂಘದ ವತಿಯಿಂದ ಪದವಿಪೂರ್ವ ಅಂತರ್ ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ ಮತ್ತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಥಳೀಯ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ನೀಡಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಮತ್ತು ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಸಂಸ್ಥೆಯ ಸಂಸ್ಥಾಪಕ ಸುಬ್ರಹ್ಮಣ್ಯ ಇವರು ಅಭಿನಂದಿಸಿದರು. ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಮಮತಾ ಮತ್ತು ಪ್ರಾಂಶುಪಾಲೆ ಶ್ರೀಮತಿ ಡಾ ಸೀಮಾ ಭಟ್ ಮತ್ತು ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. […]
ಮಂಗಳೂರು: ನ.27 ರಂದು ಎಂಸಿಸಿ ಬ್ಯಾಂಕ್ ಶತಮಾನೋತ್ತರ ದಶಮಾನ ಸಂಭ್ರಮಾಚರಣೆ
ಮಂಗಳೂರು: ಅವಿಭಜಿತ ದ.ಕ ಜಿಲ್ಲೆಯಲ್ಲಿ ಸುಸಜ್ಜಿತ 16 ಶಾಖೆಗಳನ್ನು ಹೊಂದಿರುವ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ದಾಖಲೆಯ 1.60% ಎನ್.ಪಿ.ಎ ಹಾಗೂ 8.27 ಕೋಟಿ ಲಾಭ ಗಳಿಸಿರುವ ಕರಾವಳಿಯ ಮುಂಚೂಣಿಯ ಸಹಕಾರಿ ಲಿಮಿಟೆಡ್ ಬ್ಯಾಂಕ್ ಗಳಲ್ಲಿ ಒಂದಾಗಿರುವ ಎಂಸಿಸಿ ಬ್ಯಾಂಕ್ ತನ್ನ ಶತಮಾನೋತ್ತರ ದಶಮಾನದ ಸಂಭ್ರಮದಲ್ಲಿದೆ. ನ.27 ಭಾನುವಾರದಂದು ನಗರದ ಮಿಲಾಗ್ರಿಸ್ ಕಾಲೇಜು ಮೈದಾನದಲ್ಲಿ ಬ್ಯಾಂಕ್ ತನ್ನ ಶತಮಾನೋತ್ತರ ದಶಮಾನ ಸಂಭ್ರಮವನ್ನು ಆಚರಿಸುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೋ ತಿಳಿಸಿದರು. ಅವರು ಗುರುವಾರದಂದು ಬ್ಯಾಂಕಿನ ಮಂಗಳೂರಿನ ಆಡಳಿತ […]