ತಿಹಾರ್ ಜೈಲಿನಲ್ಲಿ ಆಪ್ ನಾಯಕ ಸತ್ಯೇಂದ್ರ ಜೈನ್ ರಾಜ ದರ್ಬಾರ್: ಮಸಾಜ್ ಬಳಿಕ ಆಹಾರದ ವೀಡಿಯೋ ವೈರಲ್

ದೆಹಲಿ: ಭ್ರಷ್ಟಾಚಾರದ ಆರೋಪದಡಿ ಕಾರಾಗೃಹವಾಸದಲ್ಲಿರುವ ದೆಹಲಿ ಸರ್ಕಾರದ ಸಚಿವ ಸತ್ಯೇಂದ್ರ ಜೈನ್ ಅವರ ಕಾಲಿಗೆ ವ್ಯಕ್ತಿಯೊಬ್ಬ ಮಸಾಜ್ ಮಾಡುತ್ತಿರುವ ವೀಡಿಯೊ ಹೊರಬಿದ್ದ ನಂತರ ರಾಜಕೀಯ ವಲಯದಲ್ಲಿ ಸಂಚಲನವಾಗಿತ್ತು. ತನ್ನ ನಾಯಕನ ವೀಡಿಯೋದ ಬಗ್ಗೆ ಸ್ಪಷ್ಟೀಕರಣ ನೀಡಿದ್ದ ಆಪ್ ಪಕ್ಷ ಜೈನ್ ರವರ ಆರೋಗ್ಯದ ಕಾರಣ ನೀಡಿ ಅವರಿಗೆ ವೈದ್ಯರ ಸಲಹೆ ಮೇರೆಗೆ ಫಿಸಿಯೋಥೆರಪಿ ನೀಡಲಾಗುತ್ತಿತ್ತು ಎಂದಿತ್ತು. ಆದರೆ ಇದನ್ನು ಅಲ್ಲಗಳೆದ ಜೈಲಿನ ಅಧಿಕಾರಿಗಳು ಜೈನ್ ಅವರಿಗೆ ಮಸಾಜ್ ನೀಡುತ್ತಿದ್ದ ವ್ಯಕ್ತಿ ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಯಾಗಿರುವ ಸಹಕೈದಿ […]

ಜೀವನದಲ್ಲಿ ಯಶಸ್ಸು ಹೊಂದಲು ಸಹಕಾರಿ ಋಷಿ ಅಗಸ್ತ್ಯರು ಶ್ರೀರಾಮನಿಗೆ ಬೋಧಿಸಿದ ಆದಿತ್ಯ ಹೃದಯ ಸ್ತ್ರೋತ್ರ

ಪ್ರಕೃತಿಯಲ್ಲಿರುವ ಪಂಚಭೂತಗಳನ್ನು ದೇವತೆಗಳೆಂದು ಆರಾಧಿಸುವುದು ಸನಾತನ ಸಂಸ್ಕೃತಿ. ಸೃಷ್ಟಿಯಲ್ಲಿರುವ ಪ್ರತಿಯೊಂದು ವಸ್ತುವೂ ಮಣ್ಣು, ನೀರು, ಗಾಳಿ, ಬೆಂಕಿ, ಆಕಾಶ ಎಂಬ ಪಂಚತತ್ವಗಳಿಂದಾಗಿದೆ. ಅಗ್ನಿಯಿಂದ ಸೃಷ್ಟಿಯ ಉತ್ಪತ್ತಿಯಾಗಿದೆ. ಅಗ್ನಿಯ ಪ್ರತ್ಯಕ್ಷ ರೂಪ ಸೂರ್ಯದೇವ. ಅದಿತಿಯ ಪುತ್ರನಾದ ಸೂರ್ಯನನ್ನು ಆದಿತ್ಯ ಎಂದೂ ಕರೆಯುತ್ತಾರೆ. ಭೂಮಿಯ ಮೇಲಿನ ಜೀವನದ ಆಧಾರಸ್ತಂಭವಾಗಿರುವ ಆದಿತ್ಯನಿಗೆ ಸಮರ್ಪಿತ ಆದಿತ್ಯ ಹೃದಯ ಸ್ತೋತ್ರವು ಸಾರ್ವಕಾಲಿಕ ಶಕ್ತಿಶಾಲಿ ಸ್ತೋತ್ರಗಳಲ್ಲಿ ಒಂದಾಗಿದೆ. ಜ್ಯೋತಿಷ್ಯದ ಪ್ರಕಾರ ದುರ್ಬಲ ಸೂರ್ಯನನ್ನು ಹೊಂದಿರುವ ಅಥವಾ ಜೀವನದಲ್ಲಿ ಅನಿರ್ದಿಷ್ಟತೆಯನ್ನು ಅನುಭವಿಸುತ್ತಿರುವ ಜನರು ಆದಿತ್ಯ ಹೃದಯ ಸ್ತೋತ್ರವನ್ನು […]

ಡಿಸೆಂಬರ್ 3 ರಂದು ಜಿಲ್ಲಾ ಮಟ್ಟದ ವಿಕಲಚೇತನರ ದಿನಾಚರಣೆ

ಉಡುಪಿ: ಮಂಗಳವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ವಿಕಲಚೇತನರ ದಿನಾಚರಣೆ ಆಚರಿಸುವ ಕುರಿತ ಪೂರ್ವಭಾವಿ ಸಭೆಯು ಅಪರ ಜಿಲ್ಲಾಧಿಕಾರಿ ವೀಣಾ.ಬಿ.ಎನ್ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲಾ ಮಟ್ಟದ ವಿಕಲಚೇತನರ ದಿನಾಚರಣೆಯನ್ನು ಡಿಸೆಂಬರ್ 3 ರಂದು ಉಡುಪಿ ನಗರದ ಅಮ್ಮಣ್ಣಿ ರಾಮಣ್ಣ ಸಭಾಭವನದಲ್ಲಿ ಬೆಳಗ್ಗೆ 10.30 ಕ್ಕೆ ಆಚರಿಸಲಾಗುವುದು ಎಂದರು. ವಿಶ್ವ ವಿಕಲಚೇತನರ ದಿನಾಚರಣೆಯು ಡಿಸೆಂಬರ್ 3 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿಯೂ ಕಾರ್ಯಕ್ರಮವನ್ನು ಆಯೋಜಿಸಿ ಅರ್ಥಪೂರ್ಣವಾಗಿ ಆಚರಿಸಲು ಸಕಲ […]

ನ. 25 ರಂದು ಅಂಬಲಪಾಡಿ ದೇವಸ್ಥಾನದಲ್ಲಿ ಚಿಗುರು ಸಾಂಸ್ಕೃತಿಕ ಕಾರ್ಯಕ್ರಮ

ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಮತ್ತು ತಾಲೂಕು ಘಟಕದ ಸಹಯೋಗದೊಂದಿಗೆ ಚಿಗುರು ಬಾಲ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮವು ನವೆಂಬರ್ 25 ರಂದು ಮಧ್ಯಾಹ್ನ 2.30 ಕ್ಕೆ ನಗರದ ಅಂಬಲಪಾಡಿ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಅಂಬಲಪಾಡಿ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬಿ ವಿಜಯ ಬಲ್ಲಾಳ ಉದ್ಘಾಟಿಸಲಿದ್ದು, ಶಾಸಕ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ನಗರಸಭೆ ಅಧ್ಯಕ್ಷೆ […]

ದೇವಸ್ಥಾನಗಳ ವ್ಯವಸ್ಥಾಪನ ಸಮಿತಿ ರಚನೆ: ಸಾರ್ವಜನಿಕರಿಂದ ಅರ್ಜಿ ಆಹ್ವಾನ

ಉಡುಪಿ: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿರುವ ಪ್ರವರ್ಗ-ಬಿ(1) ಮತ್ತು ಸಿ(1) ಅಧಿಸೂಚಿತ ಸಂಸ್ಥೆಗಳಾದ ಉಡುಪಿ ತಾಲೂಕು ಕೊಡವೂರು ಶ್ರೀಶಂಕರನಾರಾಯಣ ದೇವಸ್ಥಾನದ ಸಾಮಾನ್ಯ ಒಂದು ಸ್ಥಾನಕ್ಕೆ ಮತ್ತು ಬೈಂದೂರು ತಾಲೂಕು ಹೇರೂರು ಚಿಕ್ತಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪರಿಶಿಷ್ಟ ಜಾತಿಯ ಒಂದು ಸ್ಥಾನಕ್ಕೆ ಮೂರು ವರ್ಷಗಳ ಅವಧಿಗೆ ವ್ಯವಸ್ಥಾಪನಾ ಸಮಿತಿ ರಚಿಸಲು ಆಸಕ್ತ ಭಕ್ತಾದಿಗಳು ಹಾಗೂ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಕನಿಷ್ಠ 25 ವರ್ಷ ಮೇಲ್ಪಟ್ಟ ಆಸಕ್ತರು ಅರ್ಜಿ ಸಲ್ಲಿಸಲು […]