ಬ್ರಹ್ಮಾವರ: ದರ್ಖಾಸ್ತು ಜಾಗ ಅತಿಕ್ರಮಣ; ಶಾಸಕ ರಘುಪತಿ ಭಟ್ ರಿಂದ ಸ್ಥಳ ಪರಿಶೀಲನೆ

ಬ್ರಹ್ಮಾವರ: ತಾಲೂಕಿನ ಆರೂರು ಗ್ರಾಮದ ಸ.ನಂ 148/2ಬಿ ರಲ್ಲಿ 1 ಎಕರೆ ಜಮೀನು ಉಡುಪಿ ತಹಶೀಲ್ದಾರರ ಎಡಿಎಸ್/ಡಿ.ಸಿ.ಆರ್.ಸಿ.ಆರ್ ನಂಬ್ರ 168/1982-83 ರಂತೆ ಶ್ರೀಕೃಷ್ಣ ನಾಯಕ ಎಂಬವರ ಹೆಸರಿಗೆ ದರ್ಖಾಸ್ತು ಮಂಜೂರಾತಿಯಾಗಿ ಅವರ ಹೆಸರಿನಲ್ಲಿ ಪಹಣಿ ದಾಖಲಾಗಿದ್ದರೂ ಈ ಜಾಗವನ್ನು ಬೇರೊಬ್ಬರು ಅತಿಕ್ರಮಿಸಿದ್ದು ಇದನ್ನು ಸರಿಪಡಿಸುವಂತೆ ಮಾಡಿರುವ ಮನವಿಯಂತೆ ಸೋಮವಾರದಂದು ಶಾಸಕ ಕೆ. ರಘುಪತಿ ಭಟ್ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡುವ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಆರೂರು […]
ಕೋಟ: ಸುಗಂಧಿ ಮಕ್ಕಳ ಚಲನಚಿತ್ರ ಪ್ರದರ್ಶನ ಸಪ್ತಾಹ

ಕೋಟ: ವಿವೇಕ ಬಾಲಕಿಯರ ಫ್ರೌಢಶಾಲೆಯ ಆವರಣದ ಸ್ವರ್ಣಭವನದಲ್ಲಿ ಹಮ್ಮಿಕೊಳ್ಳಲಾದ ಮಕ್ಕಳ ದಿನಾಚರಣೆ ಅಂಗವಾಗಿ ಬೆಂಗಳೂರು ಅಂತರಾಷ್ಟೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಕಾರಂತ ಜೀವನ ಪ್ರೇರಿತ ಮಕ್ಕಳ ಚಲನಚಿತ್ರ ಸುಗಂಧಿ ಇದರ ಉಚಿತ ಪ್ರದರ್ಶನ ಸಪ್ತಾಹ ಕಾರ್ಯಕ್ರಮವು ಸೋಮವಾರದಂದು ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ಸಾಧನೆ ಮಾಡಿದ್ದಾರೆ ಎಂದರು. ಕನ್ನಡ ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಸುಗಂಧಿ ಚಲನಚಿತ್ರವು ಕಲೆಯಲ್ಲಿನ ಮೌಢ್ಯವನ್ನು ಎತ್ತಿ ಹಿಡಿಯುವಂತಿದೆ. ಚಿತ್ರವು ಯಶಸ್ವಿಯಾಗಿ […]
ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಪಾಂಡಿಚೆರಿ ಗೃಹಮಂತ್ರಿ ಎ.ನಮಶಿವಯಮ್

ಉಡುಪಿ: ಪಾಂಡಿಚೆರಿಯ ಗೃಹಮಂತ್ರಿಗಳಾದ ಎ.ನಮಶಿವಯಮ್ ತಮ್ಮ ಕುಟುಂಬ ಸಮೇತರಾಗಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಠದ ದಿವಾನರಾದ ವರದರಾಜ ಭಟ್ ಹಾಗೂ ಪರ್ಯಾಯ ಸ್ವಾಗತ ಸಮಿತಿಯ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ಉಪಸ್ಥಿತರಿದ್ದರು.