ಪೊಲೀಸರ ಒತ್ತಡ ನಿವಾರಣೆಗೆ ಕ್ರೀಡೆ ಅಗತ್ಯ: ಜಿಲ್ಲಾಧಿಕಾರಿ ಕೂರ್ಮರಾವ್ ಎಂ

ಉಡುಪಿ: ಸಾರ್ವಜನಿಕರ ಸೇವೆಯಲ್ಲಿ ಪ್ರತಿದಿನ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಒತ್ತಡ ನಿವಾರಣೆಗೆ ಹಾಗೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅತ್ಯಂತ ಮುಖ್ಯವಾದುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ಅಜ್ಜರಕಾಡು ಮಹಾತ್ಮ ಗಾಂಧೀ ಕ್ರೀಡಾಂಗಣದಲ್ಲಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಪೊಲೀಸರು ಪ್ರತಿದಿನ ಯಾವುದಾದರೊಂದು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದರಿಂದ, ಕರ್ತವ್ಯದ ಅವಧಿಯಲ್ಲಿ ಹೆಚ್ಚಿನ ಉತ್ಸಾಹದಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುವುದರ ಜೊತೆಗೆ ಒತ್ತಡ ರಹಿತ, ಆರೋಗ್ಯಕರ ಜೀವ ನಡೆಸಲು ಸಾಧ್ಯವಾಗಲಿದೆ. […]

ನ.18,19:‌ ಕೇಂದ್ರ ಸಚಿವರ ಪ್ರವಾಸ ಕಾರ್ಯಕ್ರಮ

ಉಡುಪಿ: ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರು ನವೆಂಬರ್ 18 ಹಾಗೂ 19 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ನ. 17 ರಂದು ಉಡುಪಿಗೆ ಆಗಮಿಸಿ ವಾಸ್ತವ್ಯ ಮಾಡಲಿದ್ದು, ನ. 18 ರಂದು ಮಧ್ಯಾಹ್ನ 1.40 ಕ್ಕೆ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಇಲ್ಲಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಹಾಗೂ ಮಾಹೆಯ 30 ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಉಡುಪಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ. […]

ಉಡುಪಿ: ಯುವಕ ನಾಪತ್ತೆ

ಉಡುಪಿ: ಉಡುಪಿ ತಾಲೂಕು ಉದ್ಯಾವರ ಗ್ರಾಮದ ಪಿತ್ರೋಡಿ ನಿವಾಸಿ ಸುಜಿತ್ (26) ಎಂಬ ಯುವಕನು ಏಪ್ರಿಲ್ 29 ರಂದು ಬೆಳಗ್ಗೆ ಕೆಲಸಕ್ಕೆಂದು ಮನೆಯಿಂದ ಹೊರಗೆ ಹೋದವರು ವಾಪಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 7 ಇಂಚು ಎತ್ತರ, ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ, ತುಳು ಹಾಗೂ ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾಪು ಪೊಲೀಸ್ ಠಾಣೆ ದೂ.ಸಂಖ್ಯೆ: 0820-2551033, ಮೊ.ನಂ:9480805449, ಉಡುಪಿ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 0820-2520333, ಮೊ.ನಂ: 9480805431 […]

ಮಂಗಳೂರು: ಉಡುಪಿ ಎಕ್ಸ್ಪ್ರೆಸ್ ‘ಸಹಕಾರ ಸೌರಭ ‘ ವಿಶೇಷ ಸಂಚಿಕೆ ಬಿಡುಗಡೆ

ಮಂಗಳೂರು: ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ಉಡುಪಿ ಎಕ್ಸ್ಪ್ರೆಸ್ ವೆಬ್ ಸೈಟ್ ನ ‘ಸಹಕಾರ ಸೌರಭ’ ವಿಶೇಷ ಸಂಚಿಕೆಯನ್ನು ಗುರುವಾರದಂದು ಎಸ್.ಸಿ. ಡಿ.ಸಿ.ಸಿ ಬ್ಯಾಂಕ್ ನ  ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್ ರಾಜೇಂದ್ರ ಕುಮಾರ್, ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ, ಬ್ಯಾಂಕ್ ನ ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್ ರೈ, ಜೈರಾಜ್ ಬಿ ರೈ, ರವೀಂದ್ರ […]

ಚೀನಾ ಮೇಲೆ ಹದ್ದಿನ ಕಣ್ಣು: ಇದೇ ಮೊದಲ ಬಾರಿಗೆ 3ಡಿ-ಮುದ್ರಿತ ಬಂಕರ್ ನಿರ್ಮಿಸಲಿರುವ ಭಾರತೀಯ ಸೇನೆ

ಲಡಾಕ್: ಕಳೆದ ಎರಡು ವರ್ಷಗಳಿಂದ ಭಾರತ-ಚೀನಾ ಗಡಿ ಬಿಕ್ಕಟ್ಟು ಮುಂದುವರಿದಿದ್ದು, ಶತ್ರುಗಳೊಂದಿಗೆ ಸೆಣಸಾಡಲು ಮತ್ತು ಯಾವುದೇ ಸಮಯದಲ್ಲಿ ಯಾವುದೇ ವಿಷಮ ಪರಿಸ್ಥಿತಿಗೆ ಸಿದ್ಧರಾಗಿರಲು ಭಾರತೀಯ ಸೇನೆಯು ಲೈನ್ ಆಫ್ ಆಕ್ಚುವಲ್ ಕಂಟೋಲ್(ಎಲ್.ಎ.ಸಿ)ನಲ್ಲಿ ಪ್ರಮುಖ ಮೂಲಸೌಕರ್ಯ ನಿರ್ಮಾಣ ಯೋಜನೆಯನ್ನು ರೂಪಿಸಿದೆ. ಭಾರತೀಯ ಸೇನೆಯು ಚೀನಾದ ಎದುರು ಪೂರ್ವ ಲಡಾಖ್ ಸೆಕ್ಟರ್‌ನಲ್ಲಿ 450 ಟ್ಯಾಂಕ್‌ಗಳು ಮತ್ತು 22000 ಕ್ಕೂ ಹೆಚ್ಚು ಸೈನಿಕರಿಗೆ ವಸತಿಗಾಗಿ ಮೂಲಸೌಕರ್ಯಗಳನ್ನು ನಿರ್ಮಿಸಲಿದೆ ಎಂದು ವರದಿಯಾಗಿದೆ. ಸೇನೆಯು 3ಡಿ-ಮುದ್ರಿತ ಶಾಶ್ವತ ರಕ್ಷಣೆಗಳನ್ನು ನಿರ್ಮಿಸಲಿದೆ. ಲಡಾಕ್ ನಲ್ಲಿ ಭಾರತೀಯ […]