ನವೆಂಬರ್ 18 ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉಡುಪಿ ಪ್ರವಾಸ
ಉಡುಪಿ ಕೇಂದ್ರ ರಕ್ಷಣಾ ಖಾತೆ ಸಚಿವ ರಾಜನಾಥ್ ಸಿಂಗ್ ಅವರು ನವೆಂಬರ್ 18 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಅಂದು ಮಧ್ಯಾಹ್ನ 1 ಗಂಟೆಗೆ ಉಡುಪಿಗೆ ಆಗಮಿಸಿ, 1.40 ಕ್ಕೆ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಇಲ್ಲಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ, 2.10 ಕ್ಕೆ ಮಾಹೆಯ 30 ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಮಂಗಳೂರಿಗೆ ತೆರಳಲಿದ್ದಾರೆ.
ಉಡುಪಿ ಬೋರ್ಡ್ ಹೈಸ್ಕೂಲ್‌ನಲ್ಲಿ ಮಕ್ಕಳ ದಿನಾಚರಣೆ
ಉಡುಪಿ: ಮಕ್ಕಳು ಪ್ರತೀ ದಿನ ತಮ್ಮ ಬಾಲ್ಯದ ಸಂಭ್ರಮವನ್ನು ಆನಂದಿಸುವಂತೆ ಅವರ ಹಕ್ಕುಗಳನ್ನು ದೊರಕಿಸಲು ಸೂಕ್ತ ವಾತಾವರಣವನ್ನು ನಿರ್ಮಾಣ ಮಾಡುವ ಮೂಲಕ ಜಿಲ್ಲೆಯನ್ನು ಮಕ್ಕಳ ಸ್ನೇಹಿ ಜಿಲ್ಲೆಯನ್ನಾಗಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಸೋಮವಾರದಂದು ಉಡುಪಿ ಬೋರ್ಡ್ ಹೈಸ್ಕೂಲ್‌ನಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲಕಾರ್ಮಿಕ ಯೋಜನಾ ಸಂಘ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ರೋಟರಿ […]
ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ವಾಯು ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ
ಮಂಗಳೂರು: ಭಾರತೀಯ ವಾಯುಪಡೆಯು ವಿಜ್ಞಾನ ಮತ್ತು ವಿಜ್ಞಾನೇತರ ಸ್ಟ್ರೀಮ್‍ಗಳಿಗೆ ಅಗ್ನಿಪಥ್ ಯೋಜನೆಯಡಿ ವಾಯು ಸೇನೆಯಲ್ಲಿ ಅಗ್ನಿವೀರ್ ವಾಯು ಹುದ್ದೆಯಲ್ಲಿ ಸೇವೆ ಸಲ್ಲಿಸಲು 2023ನೇ ಜನವರಿಯಲ್ಲಿ ನಡೆಯುವ ಆನ್‍ಲೈನ್ ಆಯ್ಕೆ ಪರೀಕ್ಷೆಗೆ ಅರ್ಜಿ ಆಹ್ವಾನಿಸಿದೆ. ಪಿಯುಸಿಯಲ್ಲಿ(ವಿಜ್ಞಾನ, ವಾಣಿಜ್ಯ, ಕಲೆ ಮತ್ತು ಡಿಪ್ಲೋಮಾ ಯಾವುದೇ ವಿಷಯಗಳಲ್ಲಿ) ಕನಿಷ್ಠ ಶೇ.50% ಮತ್ತು ಇಂಗ್ಲೀಷ್ ವಿಷಯದಲ್ಲಿ ಶೇ.50% ಅಂಕಗಳೊಂದಿಗೆ ಉತ್ತೀರ್ಣರಾದ ಅವಿವಾಹಿತ ಯುವಕ -ಯುವತಿಯರು 2002ನೇ ಜೂನ್ 27ರಿಂದ 25ರ ಡಿಸೆಂಬರ್ 27ರ ನಡುವೆ ಜನಿಸಿರುವವರು ವೆಬ್‍ಸೈಟ್ https://agnipathvayu.cdac.in ಮೂಲಕ 2022ರ ನವೆಂಬರ್ […]
ಮಣಿಪಾಲ: ಮಾಹೆ ಹೋಟೇಲ್ ಅಡ್ಮಿನಿಸ್ಟ್ರೇಷನ್ ಕಾಲೇಜಿನಲ್ಲಿ ಕ್ರಿಸ್ ಮಸ್ ಕೇಕ್ ಮಿಶ್ರಣ ತಯಾರಿಕೆ
ಮಣಿಪಾಲ: ಮಾಹೆಯ ವೆಲ್‌ಕಮ್ ಗ್ರೂಪ್ ಗ್ರಾಜುಯೇಟ್ ಸ್ಕೂಲ್ ಆಫ್ ಹೋಟೆಲ್ ಅಡ್ಮಿನಿಸ್ಟ್ರೇಷನ್ ನಲ್ಲಿ ಕ್ರಿಸ್ ಹಬ್ಬದ ಕೇಕ್ ಗಾಗಿ ಮದ್ಯದಲ್ಲಿ ಡ್ರೈ ಫ್ರೂಟ್ಸ್ ಮಿಶ್ರಣ ಮಾಡುವ ವಾರ್ಷಿಕ ಆಚರಣೆಯನ್ನು ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ಮಾಹೆ ಟ್ರಸ್ಟ್ ನ ಟ್ರಸ್ಟೀ ಶ್ರೀಮತಿ ವಸಂತಿ ಆರ್.ಪೈ, ಮಾಹೆ ಕುಲಪತಿ ಡಾ. ಎಚ್.ಎಸ್ ಬಲ್ಲಾಳ್ ಮತ್ತು ಇಂದಿರಾ ಬಲ್ಲಾಳ್, ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ.ವೆಂಕಟೇಶ್ ಮತ್ತು ಶ್ರೀಮತಿ ಕುಸುಮಾ ವೆಂಕಟೇಶ್, ರಿಜಿಸ್ಟ್ರಾರ್ ಡಾ. ನಾರಾಯಣ್ ಸಭಾಹಿತ್ ಹಾಗೂ ಮಾಹೆಯ ಇನ್ನಿತರ […]
ಹಾಲಿನ ದರ ಏರಿಕೆ: ಮುಖ್ಯಮಂತ್ರಿ ಮಧ್ಯಪ್ರವೇಶ; ನ. 20 ರವರೆಗೆ ಕಾಯಲು ಕೆಎಂಎಫ್ ನಿರ್ಧಾರ
ಬೆಂಗಳೂರು: ಮಂಗಳವಾರದಿಂದ ಹಾಲು ಮತ್ತು ಮೊಸರು ದರವನ್ನು ಹೆಚ್ಚಿಸುವ ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ನಿರ್ಧಾರಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಾತ್ಕಾಲಿಕ ತಡೆ ಹಾಕಿದ್ದಾರೆ. ಮುಖ್ಯಮಂತ್ರಿ ನಿರ್ದೇಶನದ ನಂತರ, ಹಾಲು ಮತ್ತು ಮೊಸರಿನ ಬೆಲೆಗಳನ್ನು ಪರಿಷ್ಕರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನವೆಂಬರ್ 20 ರವರೆಗೆ ಕಾಯಲು ಕೆಎಂಎಫ್ ನಿರ್ಧರಿಸಿದೆ. ಸೋಮವಾರ ಮಧ್ಯರಾತ್ರಿಯೊಳಗೆ ಬೆಲೆ ಏರಿಕೆ ಮಾಡಲು ಕೆಎಂಎಫ್ ನಿರ್ಧರಿಸಿದ ಸುದ್ದಿ ತಿಳಿದ ಮುಖ್ಯಮಂತ್ರಿ ಬೊಮ್ಮಾಯಿ, ನವೆಂಬರ್ 20ರ ವರೆಗೆ ಬೆಲೆ ಏರಿಕೆ ಮಾಡದಂತೆ ಘಟಕವನ್ನು ಕೇಳಿಕೊಂಡಿದ್ದಾರೆ. ಕೆಎಂಎಫ್ […]