ಸುತ್ತಲಿನ ಜಗತ್ತಿನ ಮಹಿಳೆಯರ ಬವಣೆಗಳೆ ಕಥೆಯ ಪಾತ್ರಗಳ ಹಿಂದಿನ ಸ್ಪೂರ್ತಿ: ವೈದೇಹಿ ಜಗತ್ತಿನಲ್ಲಿ ಕಥೆಗಾರ್ತಿಯ ಅಭಿಮತ
ಮಣಿಪಾಲ: ತಮ್ಮ ಮೇಲೆ ನಡೆಯುವ ದುರಾಡಳಿತದ ಬಗ್ಗೆ ಮಹಿಳೆಯರು ಮೌನವಿದ್ದರೂ ಒಂದು ಹಂತದ ನಂತರ ಸ್ಫೋಟಗೊಳ್ಳುತ್ತಾರೆ. ನನ್ನ ಸುತ್ತಲಿನ ಮಹಿಳೆಯರ ಜಗತ್ತು ಅವರ ವಿಧವಿಧದ ಬಳಲುವಿಕೆ ಪ್ರತಿಕ್ರಿಯಿಸಲು ಸಾಹಿತ್ಯವು ನನಗೆ ಅವಕಾಶ ನೀಡಿದೆ ಎಂದು ಖ್ಯಾತ ಲೇಖಕಿ ವೈದೇಹಿ ಹೇಳಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಯೋಜಿಸಿದ್ದ ವೈದೇಹಿ ಜಗತ್ತು-ಎರಡು ದಿನಗಳ ವಿಚಾರ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ವೈದೇಹಿ, ಅಕ್ಕು, ಅಮ್ಮಚ್ಚಿ, ಪುಟ್ಟಮ್ಮತ್ತೆ ಮುಂತಾದ ಪಾತ್ರಗಳು ತಾವು ಕಂಡ ಮನುಜ ಜಗತ್ತಿನ […]
ಹೆಮ್ಮಾಡಿ: ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ವಿಚಾರಗೋಷ್ಠಿ
ಹೆಮ್ಮಾಡಿ: ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ “ಕನ್ನಡ ನಾಡು-ನುಡಿ-ಸಂಸ್ಕೃತಿ” ವಿಷಯದ ಕುರಿತು ವಿದ್ಯಾರ್ಥಿ ವಿಚಾರಗೋಷ್ಠಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಗಣೇಶ ಮೊಗವೀರ್ ವಹಿಸಿದ್ದರು. ಸರ್ಕಾರಿ ಪ್ರಥಮದರ್ಜೆ ಕಾಲೇಜು ಬೈಂದೂರಿನ ಅತಿಥಿ ಉಪನ್ಯಾಸಕ ಎಸ್. ಮಣಿಕಂಠ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಕನ್ನಡ ನಾಡು-ನುಡಿಯ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಕನ್ನಡ ನೆಲ, ಜಲ, ಸಂಸ್ಕೃತಿ, ಸಂಪ್ರದಾಯವನ್ನು ಗೌರವಿಸುವಂತೆ ಕರೆ ನೀಡಿದರು. ಸಮಾರಂಭದಲ್ಲಿ ಜನತಾ ಪ್ರೌಢಶಾಲೆ ಹೆಮ್ಮಾಡಿಯ ಮುಖ್ಯ ಶಿಕ್ಷಕಮಂಜು ಕಾಳಾವರ, ಕಾಲೇಜಿನ ಉಪಪ್ರಾಂಶುಪಾಲ, ಬೋಧಕ- ಬೋಧಕೇತರ […]
ಪೆರಂಪಳ್ಳಿ: ನ.19 ರಂದು ಶಿವದೂತೆ ಗುಳಿಗೆ ತುಳು ನಾಟಕ ಪ್ರದರ್ಶನ
ಪೆರಂಪಳ್ಳಿ: ಇಲ್ಲಿನ ಯುವಕ ಮಂಡಲದ ಆಶ್ರಯದಲ್ಲಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ಕಲಾಸಂಗಮ ಕಲಾವಿದರಿಂದ ತುಳು ರಂಗಭೂಮಿಯಲ್ಲಿ ಸಂಚಲನ ಮೂಡಿಸಿದ, ಸ್ವರಾಜ್ ಶೆಟ್ಟಿ ಅಭಿನಯದ ಅತ್ಯಮೋಘ ನಾಟಕ ಶಿವದೂತೆ ಗುಳಿಗೆ ನ. 19 ರಂದು ರಾತ್ರಿ 8 ಗಂಟೆಗೆ ಯುವಕ ಮಂಡಲ ವಠಾರದಲ್ಲಿ ನಡೆಯಲಿರುವುದು.
ಕೊಡವೂರು: ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಶಿಬಿರ
ಕೊಡವೂರು: ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ, ಗೆಳೆಯರ ಬಳಗ ಲಕ್ಷ್ಮೀ ನಗರ, ಡಿಜಿಟಲ್ ಸೇವಾ ಕೇಂದ್ರ ಕೊಡವೂರು ಇವರ ಸಹಯೋಗದಲ್ಲಿ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಶಿಬಿರವು ನ.13 ರಂದು ಲಕ್ಷ್ಮೀ ನಗರ ಪೇಟೆಯಲ್ಲಿ ನಡೆಯಿತು. ಶಿಬಿರವನ್ನು ಹಿರಿಯರಾದ ಶೇಕರ್ ಲಕ್ಷ್ಮೀನಗರ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನಗರ ಸಭಾ ಸದಸ್ಯವಿಜಯ್ ಕೊಡವೂರು, ಈಗಾಗಲೇ ಕೊಡವೂರು ವಾರ್ಡಿನಲ್ಲಿ ಇಂತಹ ಶಿಬಿರವನ್ನು ಸಂಘ ಸಂಸ್ಥೆಗಳ ಸಹಯೋಗದಿಂದ ಮಾಡುತ್ತಾ ಇದ್ದು, ಕೇಂದ್ರ ಮತ್ತು ರಾಜ್ಯ ಸರಕಾರದ […]