ಮಲ್ಪೆ: ಬೋಟಿನಿಂದ ಕಾಲು ಜಾರಿ ಬಿದ್ದು ಮೀನುಗಾರ ಮೃತ್ಯು

ಮಲ್ಪೆ: ಬೋಟಿನಿಂದ ಕಾಲು ಜಾರಿ ನೀರಿಗೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಬಂದರಿನಲ್ಲಿ ನಡೆದಿದೆ. ಮೃತರನ್ನು ಕಟಪಾಡಿ ಮಟ್ಟು ನಿವಾಸಿ ಸಂತೋಷ್ ತಿಂಗಳಾಯ (35) ಎಂದು ಗುರುತಿಸಲಾಗಿದೆ. ಇವರು ಮಲ್ಪೆಯ ಬಲರಾಮ್ ಪರ್ಸಿನ್ ಬೋಟು ಬಂದರಿನ ಒಳಗೆ ಬರುವಾಗ, ಕಾಲು ಜಾರಿ ನೀರಿಗೆ ಬಿದ್ದರೆನ್ನಲಾಗಿದೆ. ಇವರನ್ನು ಕೂಡಲೇ ಮೇಲಕ್ಕೆ ಎತ್ತಿ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿಟಿಸಿಎಲ್ ವ್ಯಾಪ್ತಿಗೆ ಒಳಪಡುವ ಜಮೀನು ಜಿಲ್ಲಾಧಿಕಾರಿ ಹಂತದಲ್ಲಿ ಭೂ ಪರಿವರ್ತನೆಗೆ ಅವಕಾಶ: ಶಾಸಕ ರಘುಪತಿ ಭಟ್ ಗೆ ಅಭಿನಂದನೆ

ಉಡುಪಿ: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮಂಜೂರಾದ ಜಮೀನಿನಲ್ಲಿ 10 ಸೆಂಟ್ಸ್ ವರೆಗಿನ ಜಮೀನನ್ನು ಸ್ವಂತ ವಾಸ್ತವ್ಯದ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಲು ಜಿಲ್ಲಾಧಿಕಾರಿಯವರ ಹಂತದಲ್ಲೇ ಅವಕಾಶ ಕಲ್ಪಿಸಿ ನ. 05 ರಂದು ಸರ್ಕಾರ ಆದೇಶ ಹೊರಡಿಸಿದೆ. ಈ ವಿಚಾರದ ಕುರಿತು ಶಾಸಕ ರಘುಪತಿ ಭಟ್ ಸದನದಲ್ಲಿ ವಿಷಯ ಪ್ರಸ್ತಾಪಿಸಿ, ಶೀಘ್ರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು. ಅಲ್ಲದೆ ಸರ್ಕಾರಿ ಭರವಸೆಗಳ ಸಮಿತಿ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಿ ಅಧಿಕಾರಿಗಳ ಗಮನಕ್ಕೆ ತಂದು […]

ಮಂಗಳೂರು: ಎಬಿವಿಪಿ ವತಿಯಿಂದ ಅಭ್ಯಾಸವರ್ಗ; ನೂತನ ಕಾರ್ಯಕಾರಿಣಿ ಸಮಿತಿ ರಚನೆ

ಮಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಮಹಾನಗರದ ಅಭ್ಯಾಸ ವರ್ಗವು ನಗರದ ಸಂಘನಿಕೇತನದ ಸಭಾಂಗಣದಲ್ಲಿ ನವೆಂಬರ್ 11-12 ರಂದು ಜರುಗಿತು. ಅಭ್ಯಾಸ ವರ್ಗವನ್ನು ಇಂಡಿಯನ್ ರೆಡ್ ಕ್ರಾಸ್ ಜಿಲ್ಲಾ ಘಟಕದ ಮುಖ್ಯಸ್ಥ ಸಿಎ ಶಾಂತರಾಮ್ ಶೆಟ್ಟಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ರಥಬೀದಿಯ ಡಾ. ದಯಾನಂದ ಪೈ ಹಾಗೂ ಡಾ.ಸತೀಶ್ ಪೈ ಹಾಗೂ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಜಯಕರ ಭಂಡಾರಿ ಭಾಗವಹಿಸಿದ್ದರು. ಎಬಿವಿಪಿಯ ಸೈದ್ಧಾಂತಿಕ ಭೂಮಿಕೆ, ಕ್ಯಾಂಪಸ್ ಕಾರ್ಯ, ಕಾರ್ಯಪದ್ಧತಿ ಹಾಗೂ ಶಾಖೆ ಸಂಚಲನೆ […]

ಕುಂದಾಪುರ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ವ್ಯವಹಾರ ದಿನ ಆಯೋಜನೆ

ಕುಂದಾಪುರ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿನ.12ರಂದು ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಜರುಗಿದ ವ್ಯವಹಾರ ದಿನವನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಉದ್ಘಾಟಿಸಿ, ಕಲಿಕೆಯ ಹಂತದಲ್ಲಿಯೇ ಪ್ರತಿಯೊಬ್ಬ ವಿದ್ಯಾರ್ಥಿ ಭವಿಷ್ಯದ ಯೋಜನೆಗಳನ್ನು ಸ್ವಯಂ ರೂಪಿಸಿಕೊಳ್ಳುವ ಬದ್ಧತೆಯನ್ನು ಹೊಂದಿದರೆ ಬದುಕಿನಲ್ಲಿ ಯಶಸ್ಸು ಸಾಧ್ಯ ಎಂದು ಹೇಳಿದರು. ಶ್ರೀ ವೆಂಕಟರಮಣ ದೇವ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಕೆ. ರಾಮಕೃಷ್ಣ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ್ ಅಕಾಡೆಮಿ ಆಫ್ ಜನರಲ್ ಎಜುಕೇಶನ್ […]

ಉಡುಪಿ ಎಕ್ಸ್ಪ್ರೆಸ್ ಅಮ್ಮ ವಿತ್ ಕಂದಮ್ಮ ಸೀಸನ್-3: ಬಹುಮಾನ ಗೆದ್ದ ಅಮ್ಮ-ಮಕ್ಕಳಿವರು!!

ಉಡುಪಿ: ವಸ್ತುನಿಷ್ಠ ವರದಿಗಾರಿಕೆಗೆ ಹೆಸರುವಾಸಿಯಾದ ನಿಮ್ಮ ಉಡುಪಿ ಎಕ್ಸ್ಪ್ರೆಸ್ ಕಳೆದ ಬಾರಿಯಂತೆಯೆ ಈ ಬಾರಿಯೂ ಮಕ್ಕಳ ದಿನಾಚರಣೆ ಪ್ರಯುಕ್ತ ಮುದ್ದು ಕಂದಮ್ಮಗಳ ಜೊತೆ ತಾಯಂದಿರ ಫೋಟೋ ಸ್ಪರ್ಧೆ “ಅಮ್ಮ ವಿದ್ ಕಂದಮ್ಮ-ಸೀಸನ್ 3” ಅನ್ನು ಏರ್ಪಡಿಸಿದ್ದು, ಇದಕ್ಕೆ ಓದುಗರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದ್ದು, ನೂರಾರು ಫೋಟೋಗಳು ಬಂದಿದ್ದವು. ಇದರಲ್ಲಿ ಅತ್ಯುತ್ತಮ ಗುಣಮಟ್ಟದ 25 ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದು, ಅತಿ ಹೆಚ್ಚು ಲೈಕ್ ಪಡೆದ ಮೂರು ಫೋಟೋಗಳಿಗೆ ಬಹುಮಾನ ದೊರೆತಿದೆ. ಅತಿಹೆಚ್ಚು ಲೈಕ್ ಪಡೆದ […]