ಹೆಜ್ಜೇನು ಕಡಿತ: ಮಹಿಳೆ ಸಾವು
ಉಡುಪಿ: ಮಲ್ಪೆ ಬಳಿ ಹಸುವಿಗೆ ಹುಲ್ಲು ತರಲು ಹೋದ ಮಹಿಳೆಗೆ ಹೆಜ್ಜೇನು ಕಡಿದು ಸಾವನ್ನಪ್ಪಿರುವ ಘಟನೆ ಪಡುತೋನ್ಸೆ ಗ್ರಾಮದ ಕೆಮ್ಮಣ್ಣು ಸಮೀಪ ನಡೆದಿದೆ. ಕಟಪಾಡಿಯಲ್ಲಿಯೂ ಹೆಜ್ಜೇನು ದಾಳಿ ಕಟಪಾಡಿ ಏಣಗುಡ್ಡೆ ರಾಜರತ್ನ ರಸ್ತೆಯ ಬಳಿಯೂ ಹಲವು ಮಂದಿಗೆ ಹೆಜ್ಜೇನು ದಾಳಿ ನಡೆಸಿದ್ದು, ಮಹಿಳೆಯೋರ್ವರು ಜಿಲ್ಲಾಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆಗಾಗಿ ದಾಖಲುಗೊಂಡ ಘಟನೆ ನಡೆದಿದೆ. ಈ ರಸ್ತೆಯ ತಿರುವಿನ ಹುಣಸೆ ಮರದಲ್ಲಿ ಹೆಜ್ಜೇನುಗಳು ಬೃಹತ್ ಗಾತ್ರದ ಗೂಡು ಕಟ್ಟಿವೆ. ಗಿಡುಗವೊಂದು ಗೂಡಿಗೆ ದಾಳಿ ನಡೆಸಿದ ಕಾರಣ […]
ಶ್ರೀಕೃಷ್ಣಮಠದಲ್ಲಿ ಶ್ರೀ ಶೋಭಕೃತ್ ನಾಮ ಸಂವತ್ಸರದ ತಿಥಿ ನಿರ್ಣಯ ಪಂಚಾಂಗ ಬಿಡುಗಡೆ
ಉಡುಪಿ: ಶ್ರೀಕೃಷ್ಣಮಠದ ಶ್ರೀಮನ್ಮಧ್ವಾಚಾರ್ಯರ ಸರ್ವಜ್ಞಪೀಠದಲ್ಲಿ ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು,ಭಾವೀ ಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ತಿಥಿ ನಿರ್ಣಯಾನುಸಾರ ತಿಥಿ ವೃದ್ಧಿ ಹ್ರಾಸ ನಿಯಮದಿಂದ ರಚಿತವಾದ ಬರುವ “ಶ್ರೀಶೋಭಕೃತ್” ನಾಮ ಸಂವತ್ಸರದ ತಿಥಿ ನಿರ್ಣಯ ಪಂಚಾಂಗವನ್ನು ಬಿಡುಗಡೆಗೊಳಿಸಿದರು.
ವೈದ್ಯರೇ ಕೈಚೆಲ್ಲಿದರೂ ಕೈಬಿಡದ ಕೊರಗಜ್ಜ: ಉಕ್ರೇನಿನ ಅನಾರೋಗ್ಯ ಪೀಡಿತ ಮಗುವೀಗ ಸಂಪೂರ್ಣ ಸ್ವಸ್ಥ!
ಬಂಟ್ವಾಳ: ಅವಿಭಜಿತ ದ.ಕ ಜಿಲ್ಲೆಯಲ್ಲಿ ಕೊರಗಜ್ಜನ ಕಾರ್ನಿಕ ತಿಳಿಯದೆ ಇರುವವರು ವಿರಳ. ಕಳೆದು ಹೋದ ವಸ್ತುಗಳು ಮರಳಿ ಸಿಗಬೇಕಾದಲ್ಲಿ ಕೊರಗಜ್ಜನಿಗೆ ಒಂದು ಹರಕೆ ಹೇಳಿದರೆ ಸಾಕು, ಕಳೆದು ಹೋದ ವಸ್ತು ಯಾವ ಮಾಯೆಯಲ್ಲೋ ಪ್ರತ್ಯಕ್ಷ!! ಇಂತಿಪ್ಪ ಕೊರಗಜ್ಜ ಈಗ ಉಕ್ರೇನಿನ ಮಗುವಿನ ಜೀವವನ್ನೂ ಉಳಿಸಿ ಮತ್ತೊಮ್ಮೆ ಕಾರ್ನಿಕ ಮೆರೆದಿದೆ. ಪ್ರಕರಣ: ಕೆಲವು ತಿಂಗಳ ಹಿಂದೆ ಉಕ್ರೇನ್ ದೇಶದ ಪ್ರಜೆ ಆ್ಯಂಡ್ರ್ಯೂ, ಪತ್ನಿ ಎಲೆನಾ ಮತ್ತು ಮಗ ಮ್ಯಾಕ್ಸಿಂ ಭಾರತಕ್ಕೆ ಪ್ರವಾಸ ಬಂದಿದ್ದರು. ಉಕ್ರೇನ್ ದಂಪತಿ ತನ್ನ ಮಗನ […]
ಇಂದಿರಾನಗರ ಶಾಲೆಯಲ್ಲಿ ವಿಧ್ಯಾರ್ಥಿಗಳಿಗಾಗಿ ಕಾನೂನು ಅರಿವು ಕಾರ್ಯಕ್ರಮ
ಉಡುಪಿ: ಚೈಲ್ಡ್ ಲೈನ್-1098 ಉಡುಪಿ ವತಿಯಿಂದ ಸರಕಾರಿ ಪ್ರೌಢಶಾಲೆ ಇಂದಿರಾನಗರದಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಹಿಳಾ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಶ್ರೀಮತಿ ವಯಲೆಟ್ ಫೆಮೀನಾ ಮಕ್ಕಳ ಜೊತೆ ಸಂವಹನ ಮಾಡುವುದರ ಮೂಲಕ ಮಕ್ಕಳಿಗೆ ಕಾನೂನಿನಬಗ್ಗೆ ವಿವರಿಸುತ್ತಾ ಅಪರಾಧ ಮತ್ತು ಪೋಕ್ಸೋ ಕಾಯಿದೆ, ಮಕ್ಕಳ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದರು. ಮಕ್ಕಳಿಗೆ ತಮ್ಮ ಕರ್ತವ್ಯಗಳನ್ನು ತಿಳಿಸಿ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವಗಳನ್ನು ರೂಪಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ […]
ಕಾಷ್ಠ ಶಿಲ್ಪಿ ಸುದರ್ಶನ್ ಆಚಾರ್ಯರ ಸಾಧನೆಗೆ ಅಮೇರಿಕಾದ ಮಯೋನಿಕ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದಿಂದ ಪುರಸ್ಕಾರ
ಉಡುಪಿ: ರಥ ಶಿಲ್ಪಿ ಸುದರ್ಶನ್ ಆಚಾರ್ಯ ಕಾಷ್ಠಶಿಲ್ಪ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡುತ್ತಿದ್ದು, ಈಗಾಗಲೇ ತಮ್ಮ ಸಾಧನೆಗಾಗಿ ಹತ್ತು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಕಡಿಯಾಳಿ ತಿರುಗುವ ಮುಚ್ಚಿಗೆಯ ನಿರ್ಮಾತೃ ಕಾಷ್ಠ ಶಿಲ್ಪಿ ಇವರಾಗಿದ್ದು ಸದಾ ಕ್ರಿಯಾಶೀಲ ಯೋಚನೆಗಳೊಂದಿಗೆ ಶಿಲ್ಪ ಕಲೆಗಳನ್ನು ಮೂಡಿಸುತ್ತಾ ಜನ ಮನ ಗೆದ್ದಿದ್ದಾರೆ. ಭಾರತೀಯ ಕಲೆ ಮತ್ತು ಸಂಸ್ಕೃತಿಗೆ ಇವರು ನೀಡುತ್ತಿರುವ ಕೊಡುಗೆಯನ್ನು ಗುರುತಿಸಿ ಈ ಗೌರವವನ್ನು ನೀಡಿ ಸನ್ಮಾನಿಸಲಾಗಿದೆ.