ಬ್ರಹ್ಮಾವರ: ರುಡ್ ಸೆಟ್ ವತಿಯಿಂದ ಉಚಿತ ಕ್ಯಾಂಡಲ್ ತಯಾರಿಕಾ ತರಬೇತಿ
ಬ್ರಹ್ಮಾವರ: ಸ್ವ ಉದ್ಯೋಗಾಕಾಂಕ್ಷಿಗಳಿಗೆ ಹಾಗೂ ಉದ್ಯೋಗವನ್ನು ಅರಸುತ್ತಿರುವವರಿಗೆ ಆಶಾಕಿರಣವಾಗಿರುವ ಮತ್ತು ಕೇಂದ್ರ ಸರಕಾರದಿಂದ ಸ್ವ ಉದ್ಯೋಗಕ್ಕೆ ಅನುಕರಣೀಯ ಮಾದರಿ ಎಂದು ಗುರುತಿಸಲ್ಪಟ್ಟ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ, ಕೆನರಾ ಬ್ಯಾಂಕ್ ಸಹಯೋಗದೊಂದಿಗೆ ನಡೆಯುವ ರುಡ್ ಸೆಟ್ ಸಂಸ್ಥೆಯು ಬ್ರಹ್ಮಾವರದಲ್ಲಿ ಉಚಿತ ಊಟ, ವಸ್ತಿ, ಸಮವಸ್ತ್ರ ತರಬೇತಿ ಕಿಟ್ ನೊಂದಿದೆ ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ನಿರುದ್ಯೋಗಿ ಯುವಕ ಯುವತಿಯರಿಗೆ 10 ದಿನಗಳ ಕ್ಯಾಂಡಲ್ ತಯಾರಿಕೆ, ಫಿನಾಯಿಲ್ ಸೋಪ್ ಆಯಿಲ್ ತರಾರಿಕೆ […]
ನ.13 ರಂದು ಆದರ್ಶ ಆಸ್ಪತ್ರೆಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ
ಉಡುಪಿ: ಆದರ್ಶ ಚಾರಿಟೇಬಲ್ ಟ್ರಸ್ಟ್, ಆದರ್ಶ ಗ್ರೂಪ್ ಆಫ್ ಇನ್ಸ್ಟಿಟೂಶನ್ಸ್ ಮತ್ತು ಆದರ್ಶ ಆಸ್ಪತ್ರೆ ಉಡುಪಿ ಇದರ ಜಂಟಿ ಆಶ್ರಯದಲ್ಲಿ ವಿಶ್ವ ಮಧುಮೇಹ ದಿನದ ಅಂಗವಾಗಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನ.13 ಭಾನುವಾರದಂದು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಆದರ್ಶ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.
ಮತ್ಸ್ಯ ಸಂಪದ ಯೋಜನೆ: ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಮಹಿಳೆಯರಿಂದ ಅರ್ಜಿ ಆಹ್ವಾನ
ಉಡುಪಿ: ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ 2022-23 ನೇ ಸಾಲಿಗೆ ನೀಡಲಾದ ಗುರಿಗಳಿಗೆ ತಕ್ಕಂತೆ ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಅರ್ಹ ಆಸಕ್ತ ಫಲಾನುಭವಿಗಳಿಂದ ಒಳನಾಡು ಮೀನುಗಾರಿಕೆ ಮತ್ತು ಜಲಕೃಷಿ ಅಭಿವೃದ್ಧಿ, ಕಡಲ ಕೃಷಿ ಮತ್ತು ಕಡಲ ಕಳೆ ಕೃಷಿಗೆ ಸೇರಿದಂತೆ ಸಮುದ್ರ ಮೀನುಗಾರಿಕೆ ಅಭಿವೃದ್ಧಿ, ಅಲಂಕಾರಿಕ ಮತ್ತು ಮನೋರಂಜನೆ ಮೀನುಗಾರಿಕಾ ಅಭಿವೃದ್ಧಿ, ಅಲಂಕಾರಿಕ ಮೀನು/ಅಕ್ವೇರಿಯಂ ಮಾರಾಟ ಮಳಿಗೆ ಸೇರಿದಂತೆ ಚಿಲ್ಲರೆ ಮೀನು ಮಾರಾಟ ಮಳಿಗೆಗಳ ನಿರ್ಮಾಣ , ಆಳಸಮುದ್ರದ ಮೀನುಗಾರಿಕೆಗೆ ಅಭಿವೃದ್ದಿ ಮತ್ತಿತರ […]
ಕಾರ್ಕಳ: ಜಂಪ್ ರೋಪ್ ಪಂದ್ಯಾಟದಲ್ಲಿ ಚಿನ್ನ ಗೆದ್ದು ರಾಜ್ಯಮಟ್ಟಕ್ಕೆ ಆಯ್ಕೆಯಾದ ಜ್ಞಾನಸುಧಾ ವಿದ್ಯಾರ್ಥಿಗಳು
ಕಾರ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ನ್ಯಾಶನಲ್ ಪಿ.ಯು ಕಾಲೇಜು ಬಾರ್ಕೂರು ಇದರ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಜಂಪ್ ರೋಪ್ ಟೂರ್ನಾಮೆಂಟ್ ನಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಐವರು ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 30 ಸೆಕೆಂಡ್ ಸ್ಪೀಡ್ ಡಬಲ್ ಅಂಡರ್ ಜಂಪ್ ರೋಪ್ನಲ್ಲಿ ವಿಶ್ವನಾಥ ಕೊಪ್ಪದ್ ಹಾಗೂ ಕು.ಚಿನ್ಮಯ್.ಎಸ್.ದೇಶಪಾಂಡೆ ಚಿನ್ನದ ಪದಕ, 3.ಮೀ.ಎಂಡೊರೆನ್ಸ್ ಜಂಪ್ ರೋಪ್ನಲ್ಲಿ ವಿಘ್ನೇಶ್ ಭಟ್ ಹಾಗೂ ಮಾನ್ಯ ಎಂ.ಎ ಚಿನ್ನದ ಪದಕ, […]
ಮಣಿಪಾಲ: ಮಾಹೆಯ ಗಾಂಧಿಯನ್ ಸೆಂಟರಿನಲ್ಲಿ ವರ್ಲ್ಡ್ ಆಫ್ ವೈದೇಹಿ ವಿಚಾರ ಸಂಕಿರಣ ಉದ್ಘಾಟನೆ
ಮಣಿಪಾಲ: ಅಡುಗೆ ಮನೆಯಲ್ಲಿ ಮಹಿಳಾ ಲೋಕ, ಹಿತ್ತಲಿನಲ್ಲಿ ಹರಟೆ ಮತ್ತು ಅಂಗಳದಲ್ಲಿ ಜೀವನ ಎಂಬ ಮೂರು ಸ್ತರಗಳ ಬದುಕಿನ ‘ಧ್ವನಿ ರೂಪ’ವನ್ನು ವೈದೇಹಿ ನಮ್ಮ ಕೃತಿಗಳಲ್ಲಿ ಹಿಡಿದಿಟ್ಟಿದ್ದಾರೆ. ಓದಲು ಮತ್ತು ಬರೆಯಲು ಬಾರದವರ ಜಗತ್ತನ್ನು ವೈದೇಹಿ ಸೆರೆಹಿಡಿದಿರುವುದೇ ಅವರ ವಿಶೇಷತೆ ಎಂದು ಬಹುಶ್ರುತ ವಿದ್ವಾಂಸ ಪ್ರೊ.ಕೆ.ಪಿ.ರಾವ್ ಹೇಳಿದರು. ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಯೋಜಿಸಿದ್ದ “ವರ್ಲ್ಡ್ ಆಫ್ ವೈದೇಹಿ” ಎರಡು ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಪುರುಷ ಪ್ರಧಾನ […]