ಮಂದಿರ 360: ಮನೆಯಲ್ಲಿ ಕುಳಿತೇ ಮಂದಿರ ದರ್ಶನ; ಕೇಂದ್ರ ಸಂಸ್ಕೃತಿ ಸಚಿವಾಲಯದ ಭಾವಪೂರ್ಣ ಉಡುಗೊರೆ
ನವದೆಹಲಿ: ಜೀವನದಲ್ಲಿ ಒಮ್ಮೆಯಾದರೂ ತೀರ್ಥಯಾತ್ರೆ ಕೈಗೊಳ್ಳಬೇಕು, ದೇಶದ ದೇವಸ್ಥಾನಗಳನ್ನೆಲ್ಲಾ ನೋಡಿ ಕೃತಾರ್ಥರಾಗಬೇಕು ಎಂದು ಬಯಸುವ ಅದೆಷ್ಟೋ ಆಸ್ತಿಕರಿಗೆ ಸಮಯದ ಅಭಾವ, ಆರ್ಥಿಕತೆಯ ಕೊರತೆ ಮತ್ತು ದೈಹಿಕ ಸಮಸ್ಯೆಗಳಿಂದಾಗಿ ತೀರ್ಥಯಾತ್ರೆ ಕೈಗೊಳ್ಳುವುದು ಕನಸಾಗಿಯೇ ಉಳಿಯುತ್ತದೆ. ಇಂತಹ ಸದ್ಭಕ್ತರಿಗಾಗಿಯೆ ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯವು ಒಂದು ಅತ್ಯಪೂರ್ವವಾದ ಉಡುಗೊರೆಯನ್ನು ನೀಡಿದೆ. ಅಂದೆಂದರೆ, ಮಂದಿರ 360(ಟೆಂಪಲ್ 360). ಏನಿದು ಟೆಂಪಲ್ 360? ಭಾರತ ಸರಕಾರದ ಸಂಸ್ಕೃತಿ ಸಚಿವಾಲಯದ ವೈಬ್ ಸೈಟ್ https://temple360.in ಭಾರತದ ತೀರ್ಥಯಾತ್ರಾರ್ಥಿಗಳಿಗೆ ಎಲ್ಲ ದೇವಸ್ಥಾನಗಳಿಗೆ ವರ್ಚುವಲ್ ಪ್ರವಾಸವನ್ನು ಏರ್ಪಡಿಸಿದೆ. […]
ಕರಡು ಮತದಾರರ ಪಟ್ಟಿಯಲ್ಲಿ ಹೆಸರು ದಾಖಲಾಗಿರುವ ಬಗ್ಗೆ ಪರಿಶೀಲಿಸಿ: ಜಿಲ್ಲಾಧಿಕಾರಿ ಕೂರ್ಮಾ ರಾವ್
ಉಡುಪಿ: ಎಪಿಕ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಪರಿಶೀಲಿಸಿ, ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದರು. ಅವರು ಬುಧವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಉಡುಪಿ ವತಿಯಿಂದ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅಂಗವಾಗಿ ಉಡುಪಿಯ ಬನ್ನಂಜೆಯಿಂದ ಅಜ್ಜರಕಾಡು ಹುತಾತ್ಮ ಸ್ಮಾರಕದವರೆಗೆ ನಡೆದ ಜಾಥಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಿ ಮಾತನಾಡಿದರು. ಚುನಾವಣೆಯಲ್ಲಿ ಮತ ಚಲಾಯಿಸಲು ಎಪಿಕ್ ಕಾರ್ಡ್ ಇದ್ದರೆ ಮಾತ್ರ ಸಾಲದು. […]
ಜೈ ಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ವತಿಯಿಂದ ಕಾಮಧೇನು ಗೋಶಾಲೆಗೆ ಗೋಗ್ರಾಸ ವಿತರಣೆ
ಬ್ರಹ್ಮಾವರ: ಜೈ ಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸೈಬರಕಟ್ಟೆ ಶಿರಿಯಾರ ಇದರ ಗೋಗ್ರಾಸ ವಿತರಣೆ ಕಾರ್ಯಕ್ರಮವು ನ.9 ರಂದು ನಂಚಾರಿನ ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ ನಲ್ಲಿ ನಡೆಯಿತು. ಜೈಗಣೇಶ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಅಶೋಕ್ ಪ್ರಭು ಸೈಬರಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜೈ ಗಣೇಶ್ ಸೌಹಾರ್ದ ಸಹಕಾರಿಯ ಸುಮಾರು 3 ವರ್ಷದ ಅವಧಿಯಿಂದ ಕ್ರೋಢೀಕೃತ ಗೋರಕ್ಷಾ ನಿಧಿ ರೂ 1ಲಕ್ಷ 30ಸಾವಿರದಿಂದ 33 ಸಾವಿರ ಮೌಲ್ಯದ ಒಣ ಹುಲ್ಲನ್ನು ಗೋಶಾಲೆಗೆ ಹಸ್ತಾಂತರಿಸಿದರು. ಉಳಿದ ಮೊತ್ತವನ್ನು ಈಗಾಗಲೇ […]