ನವೆಂಬರ್ 19 ರಂದು ಹೆಬ್ರಿ ತಾಲೂಕಿನಲ್ಲಿ ವಿದ್ಯುತ್ ಅದಾಲತ್
ಉಡುಪಿ: ಮೆಸ್ಕಾಂನ ವತಿಯಿಂದ ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಪ್ರತಿ ತಿಂಗಳ ಮೂರನೇ ಶನಿವಾರ ವಿದ್ಯುತ್ ಅದಾಲತ್ ಅನ್ನು ಹಮ್ಮಿಕೊಳ್ಳಲಾಗಿದೆ. ನವೆಂಬರ್ 19 ರಂದು ಹೆಬ್ರಿ ತಾಲೂಕಿನ ಕಬ್ಬಿನಾಲೆ, ಕಾಪು ತಾಲೂಕಿನ ಕಟ್ಟಿಂಗೇರಿ ಮತ್ತು ಪಿಲಾರು, ಕಾರ್ಕಳ ತಾಲೂಕಿನ ಮುಡಾರು ಮತ್ತು ಬೋಳ, ಕುಂದಾಪುರ ತಾಲೂಕಿನ ಬಡಾಕೆರೆ, ಹಾರ್ದಳ್ಳಿ-ಮಂಡಳ್ಳಿ ಮತ್ತು ಹೊಂಬಾಡಿ-ಮಂಡಾಡಿ, ಬೈಂದೂರು ತಾಲೂಕಿನ ಹೊಸೂರು ಹಾಗೂ ಬ್ರಹ್ಮಾವರ ತಾಲೂಕಿನ ಹೆಗ್ಗುಂಜೆ ಮತ್ತು ಯಡ್ತಾಡಿಯಲ್ಲಿ ನಡೆಯಲಿದೆ. ಡಿಸೆಂಬರ್ 17 ರಂದು ಹೆಬ್ರಿ ತಾಲೂಕಿನ ಬೆಳೆಂಜೆ, […]
ಕುಂದಾಪುರ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ
ಕುಂದಾಪುರ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ನ.8 ರಂದು ವಿದ್ಯಾರ್ಥಿಗಳಿಗೆ “ಕಾನೂನು ಅರಿವು ಮತ್ತು ನೆರವಿನ ಮೂಲಕ ನಾಗರಿಕರ ಸಬಲೀಕರಣ” ಹಾಗೂ “ನಮಗೂ ಹಕ್ಕಿದೆ @75” ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿಯ ವಕೀಲ ಭವಿಷ್ ಕುಂದರ್ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳು, ಮಾದಕ ವಸ್ತು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ರಾಗಿಣಿ ಇವರು ವಹಿಸಿದ್ದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ […]
ನಿಟ್ಟೆ ತಾಂತ್ರಿಕ ಕಾಲೇಜಿಗೆ ಇಪಿಎಫ್ ಸಂಸ್ಥೆಯಿಂದ ಪ್ರಶಂಸನಾ ಪ್ರಮಾಣಪತ್ರ
ನಿಟ್ಟೆ: ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯಡಿಯಲ್ಲಿ ಬರುವ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಸಂಸ್ಥೆಯ ಉಡುಪಿ ಘಟಕವು ತಮ್ಮ ವಿಭಾಗದಡಿಯಲ್ಲಿ ದೊಡ್ಡ ಸಂಸ್ಥೆಗಳ ಪೈಕಿ ಇಪಿಎಫ್ ನ ನಿಬಂಧನೆಗಳು ಹಾಗೂ ಯೋಜನೆಗಳನ್ನು ಯಶಸ್ವಿಯಾಗಿಸುವಲ್ಲಿ ಉತ್ತಮಕಾರ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವನ್ನು ಗುರುತಿಸಿ ಪ್ರಶಂಸನಾ ಪ್ರಮಾಣಪತ್ರ ನೀಡಿದೆ. ಇತ್ತೀಚೆಗೆ ಉಡುಪಿಯಲ್ಲಿ ನಡೆದ ಉಡುಪಿ ಇಪಿಎಫ್ ಪ್ರಾದೇಶಿಕ ಕಛೇರಿಯ 70ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಈ ಪ್ರಮಾಣಪತ್ರವನ್ನು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ […]
ಸಾಯಿರಾದ ರೆಸಿಡೆನ್ಸಿಯಲ್ಲಿ ಸಾರ್ವಜನಿಕ ಉಚಿತ ನೇತ್ರ ತಪಾಸಣಾ ಶಿಬಿರ ಸಂಪನ್ನ
ಉಡುಪಿ: ಲಯನ್ಸ್ ಕ್ಲಬ್ ಬ್ರಹ್ಮಗಿರಿ ಹಾಗೂ ಅಬಿ ನೇತ್ರ ಐಕೇರ್, ಓಕುಡೆ ಡೈಗ್ನೋಸ್ಟಿಕ್ ಸೆಂಟರ್ ಉಡುಪಿ ಹಾಗೂ ಸಾಯಿರಾಧಾ ರೆಸಿಡೆನ್ಸಿ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವು ನವಂಬರ್ 6 ರವಿವಾರದಂದು ಸಾಯಿರಾಧಾ ರೆಸಿಡೆನ್ಸಿ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಲಯನ್ಸ್ ಕ್ಲಬ್ ಬ್ರಹ್ಮಗಿರಿ ಅಧ್ಯಕ್ಷ ಲಯನ್ ಉಮೇಶ್ ನಾಯಕ್, ಸೊಸೈಟಿಯ ಅಧ್ಯಕ್ಷ ಜಹೀರ್ ಅಲಿ, ಕಾರ್ಯದರ್ಶಿ ಜೀವನ್ ವಿಲಿಯಂ ಡಿಸೋಜ, ಡಾಕ್ಟರ್ ಅಭಿನಯ ಅಶೋಕ್ ಓಕುಡೆ ಮತ್ತು ಜಿಲ್ಲಾ ವಿಝನ್ ಕೇರ್ ಸಂಯೋಜಕ ಲಯನ್ ವಾದಿರಾಜ ರಾವ್ […]