ನ.2, 3 ಮತ್ತು 4 ರಂದು ಜಿಲ್ಲೆಯ ಹಲವೆಡೆ ವಿದ್ಯುತ್ ವ್ಯತ್ಯಯ
ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ವಿವಿಧ ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುವುದರಿಂದ ಈ ಕೆಳಕಂಡ ದಿನಾಂಕಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ. ನವೆಂಬರ್ 2: 110/33/11ಕೆವಿ ಹಿರಿಯಡ್ಕ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಪೆರ್ಡೂರು ಫೀಡರಿನಲ್ಲಿ ಮೆಂಟೆನೆನ್ಸ್ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಪುತ್ತಿಗೆ, ಪಕ್ಕಾಲು, ಪೆರ್ಡೂರು ಪೇಟೆ, ಮುತ್ತೂರ್ಮೆ, ಕುಕ್ಕೆಹಳ್ಳಿ, ಪಾಡಿಗಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. 110/11ಕೆವಿ ನಂದಿಕೂರು ಉಪವಿದ್ಯುತ್ ಕೇಂದ್ರದಿಂದ […]
ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಒಟ್ಟು 36 ಮಂದಿ ಸಾಧಕರಿಗೆ ಸನ್ಮಾನ
ಉಡುಪಿ: 2022ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪಟ್ಟಿ ಪ್ರಕಟವಾಗಿದೆ. ಪ್ರಶಸ್ತಿ ಪುರಸ್ಕೃತರ ಹೆಸರು ಈ ಕೆಳಕಂಡಂತಿದೆ. ಕಾರ್ಕಳ ಹಿರ್ಗಾನದ ಲೋಕು ಪೂಜಾರಿ (ದೈವಾರಾಧನೆ), ಕುಂದಾಪುರ ಅಂಪಾರಿನ ನಾಗರಾಜ ಪಾಣ (ದೈವಾರಾಧನೆ), ಬೈಂದೂರು ಹೇರೂರಿನ ರಾಮಯ್ಯ ಬಳೆಗಾರ (ಯಕ್ಷಗಾನ), ಕಾಪು ಪಲಿಮಾರಿನ ಗಿರೀಶ್ (ಯಕ್ಷಗಾನ/ ರಂಗಭೂಮಿ), ಬ್ರಹ್ಮಾವರ ಬಾರಕೂರಿನ ಮನು ಹಂದಾಡಿ (ರಂಗಭೂಮಿ), ಕಾಪುವಿನ ರಾಜ ಕಟಪಾಡಿ (ರಂಗಭೂಮಿ), ಬೈಂದೂರು ಆಲೂರಿನ ಸುರೇಂದ್ರ ಮೊಗವೀರ (ಯಕ್ಷಗಾನ), ಬ್ರಹ್ಮಾವರ ಕೋಟ ಮಣೂರಿನ ಜಾನಕಿ ಹಂದೆ (ಕೃಷಿ/ ಹೈನುಗಾರಿಕೆ), ಕಾರ್ಕಳ […]