ಮಂಗಳೂರು: ನೆಹರೂ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ; ಸಾಧಕರಿಗೆ ಸನ್ಮಾನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ನೆಹರು ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್ ಕುಮಾರ್ ಧ್ವಜಾರೋಹಣ ಮಾಡಿದರು. ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಸದ ನಳಿನ್ ಕುಮಾರ್ ಕಟೀಲ್, ಪ್ರಭಾರಿ ಜಿಲ್ಲಾಧಿಕಾರಿ ಆರ್.ಕುಮಾರ್, ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ಶಾಸಕರಾದ ವೇದವ್ಯಾಸ್ ಕಾಮತ್, ಡಾ. ವೈ ಭರತ್ ಶೆಟ್ಟಿ, ಉಮಾನಾಥ್ […]

ಜೇನುಗಾರಿಕಾ ತರಬೇತಿಗೆ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಉಡುಪಿ: ತೋಟಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಭಾಗಮಂಡಲ ಜೇನುಗಾರಿಕೆ ತರಬೇತಿ ಕೇಂದ್ರದಲ್ಲಿ ನವೆಂಬರ್ 14 ರಿಂದ 2023 ಫೆಬ್ರವರಿ 15 ರ ವರೆಗೆ ನಡೆಯಲಿರುವ 3 ತಿಂಗಳ ಜೇನುಗಾರಿಕೆ ತರಬೇತಿಗೆ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕನಿಷ್ಠ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರುವ, 18 ರಿಂದ 35 ವರ್ಷ ವಯಸ್ಸಿನ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ತರಬೇತಿ ಬಯಸುವ ಅಭ್ಯರ್ಥಿಯ ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು, ಸ್ವಂತ ಸಾಗುವಳಿ ಮಾಡುತ್ತಿರಬೇಕು. ಅರ್ಜಿ ಸಲ್ಲಿಸಲು ನವೆಂಬರ್ 5 ಕೊನೆಯ ದಿನ. […]

ನ.6 ರಂದು ಮಂದಾರ್ತಿ ಸೇವಾ ಸಹಕಾರಿ ಸಂಘದ ನೂತನ ಕಟ್ಟಡ ಶ್ರೀ ದುರ್ಗಾ ಸಹಕಾರ ಸೌಧದ ಉದ್ಘಾಟನಾ ಸಮಾರಂಭ

ಮಂದಾರ್ತಿ: ಮಂದಾರ್ತಿ ಸೇವಾ ಸಹಕಾರಿ ಸಂಘದ ನೂತನ ಕಟ್ಟಡ ಶ್ರೀ ದುರ್ಗಾ ಸಹಕಾರ ಸೌಧದ ಉದ್ಘಾಟನಾ ಸಮಾರಂಭವು ನ.6 ರಂದು ಬೆಳಿಗ್ಗೆ 10.30 ಕ್ಕೆ ಮಂದಾರ್ತಿ ರಥಬೀದಿಯಲ್ಲಿ ನಡೆಯಲಿರುವುದು. ಮಂದಾರ್ತಿ ಸೇವಾ ಸಹಕಾರಿ ಸಂಘವು ಕಳೆದ 98 ವರ್ಷಗಳಿಂದ ಸಹಕಾರಿ ಕ್ಷೇತ್ರಗಳ ಮೂಲಕ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಾ ಬಂದಿದ್ದು, ಸರಕಾರದ ಸವಲತ್ತುಗಳನ್ನು ಸದಸ್ಯರಿಗೆ ತಲುಪಿಸಿ ಅಭಿವೃದ್ದಿ ಪಥದಲ್ಲಿ ಮುನ್ನೆಡೆಯುತ್ತಿದೆ. ಸೇವೆಯನ್ನು ಆಧುನೀಕರಣಗೊಳಿಸುವ ಸಲುವಾಗಿ ಮಾಂದಾರ್ತಿಯ ಹೃದಯ ಭಾಗದಲ್ಲಿ ಸಂಪೂರ್ಣ ಹವಾನಿಯಂತ್ರಿತ ನೂತನ ಕಚೇರಿಯನ್ನು ನಿರ್ಮಾಣ ಮಾಡಲಾಗಿದ್ದು, […]

ಬ್ರಹ್ಮಾವರ: ಕನ್ನಡ ನಾಡು-ನುಡಿ ಸಂಸ್ಕೃತಿಗಾಗಿ ಸಾರ್ವಜನಿಕ ಛದ್ಮವೇಷ ಸ್ಪರ್ಧೆ

ಬ್ರಹ್ಮಾವರ: ಕನ್ನಡ ರಾಜ್ಯೋತ್ಸವ ಸಂಭ್ರಮದ ಹಿಗ್ಗನ್ನು ಇನ್ನಷ್ಟು ಹೆಚ್ಚಿಸಲು ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಗಾಂಧಿನಗರ ಬೈಕಾಡಿ, ಎಸ್ಎಂಎಸ್ ಪದವಿ ಪೂರ್ವ ಕಾಲೇಜು ಬ್ರಹ್ಮಾವರ ಇವರ ಸಹಯೋಗದೊಂದಿಗೆ ‘ನುಡಿ ಚಿತ್ತಾರ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನ. 06 ರ ಭಾನುವಾರ ಬೆಳಿಗ್ಗೆ 9:30 ಗಂಟೆಗೆ ಎಸ್ಎಂಎಸ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಕನ್ನಡ ನಾಡಿನ ನುಡಿ ಹಾಗೂ ಸಂಸ್ಕೃ ತಿ ಎಂಬುವುದು ಅನನ್ಯವಾದ ಸಾಂಸ್ಕೃತಿಕ ಶ್ರೀಮಂತಿಕೆಯ ಆಗರ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಭಾಷೆ ಹಾಗೂ ಈ […]

ನ.1 ರಿಂದ ವಿಮಾ ಪಾಲಿಸಿ, ಅಡುಗೆ ಅನಿಲ ಮತ್ತು ಜಿ.ಎಸ್.ಟಿ ರಿಟರ್ನ್ಸ್ ನಿಯಮಗಳಲ್ಲಿ ಆಗಲಿವೆ ಬದಲಾವಣೆಗಳು

ನವದೆಹಲಿ: ನವೆಂಬರ್ 1 ರಿಂದ ವಿಮಾ ಪಾಲಿಸಿ, ಅಡುಗೆ ಅನಿಲ ಮತ್ತು ಜಿ.ಎಸ್.ಟಿ ಗಳ ನಿಯಮಗಳು ಬದಲಾಗಲಿವೆ. ಈ ನಿಯಮಗಳು ಸಾಮಾನ್ಯ ಜನರ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ ಮತ್ತು ಇವುಗಳಲ್ಲಿ ಹೆಚ್ಚಿನವನ್ನು ಗ್ರಾಹಕರ ಅನುಕೂಲತೆಗಾಗಿ ಮಾಡಲಾಗಿದೆ. 1. ಜೀವವಿಮಾ ಪಾಲಿಸಿಗೆ ಕೆವೈಸಿ ಕಡ್ಡಾಯ ವಿಮಾ ನಿಯಂತ್ರಕ ಐ.ಆರ್.ಡಿ.ಎ.ಐ ಜೀವೇತರ(ನಾನ್-ಲೈಫ್) ವಿಮಾ ಪಾಲಿಸಿಗಳನ್ನು ಖರೀದಿಸಲು ಕೈವೈಸಿ ಅನ್ನು ಕಡ್ಡಾಯಗೊಳಿಸಿದೆ. ಇದುವರೆಗೆ ಜೀವ ವಿಮೆಗೆ ಮತ್ತು ಆರೋಗ್ಯ ಮತ್ತು ವಾಹನ ವಿಮೆಯಂತಹ ಜೀವೇತರ ವಿಮೆಯ ಸಂದರ್ಭದಲ್ಲಿ, ಒಂದು ಲಕ್ಷ […]