ಯುವ ಕಾಂಗ್ರೆಸ್ ನೇತೃತ್ವದಲ್ಲಿ ಬೃಹತ್ ತಿರಂಗಾ ಜಾಥಾ

ಉಡುಪಿ: 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಬೃಹತ್ ತಿರಂಗಾ ಬೈಕ್ ಜಾಥಾವು ಅಕ್ಟೋಬರ್ 29 ರಂದು ಯಶಸ್ವಿಯಾಗಿ ಜರುಗಿತು. ಜಿಲ್ಲೆಯ ಯುವ ಕಾಂಗ್ರೆಸ್ ಕಾರ್ಯಕರ್ತರು ಉತ್ಸಾಹದಿಂದ ಜಾಥಾದಲ್ಲಿ ತಮ್ಮ ಬೈಕ್ ಗಳೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಜಾಥಾದ ಬಳಿಕ ಕಾರ್ಕಳದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ 6 ಮಂದಿ ಯೋಧರನ್ನು ಗೌರವಿಸಲಾಯಿತು. ನಿಕೇತ್ ರಾಜ್ ಮೌರ್ಯ ಮತ್ತು ಸುಧೀರ್ ಕುಮಾರ್ ಮರೋಳಿ ದಿಕ್ಸೂಚಿ ಭಾಷಣ ಮಾಡಿದರು. ಮಾಜಿ ಸಚಿವ ಅಭಯಚಂದ್ರ […]

ಜಿಲ್ಲಾ ಬಿಜೆಪಿ ವತಿಯಿಂದ ವಿದೇಶಾಂಗ ರಾಜ್ಯ ಖಾತೆ ಸಚಿವ ಮುರಳೀಧರನ್ ರವರಿಗೆ ಸ್ವಾಗತ

ಉಡುಪಿ: ಕೇಂದ್ರ ಸರಕಾರದ ವಿದೇಶಾಂಗ ರಾಜ್ಯ ಖಾತೆ ಸಚಿವ ಮುರಳೀಧರನ್ ದಂಪತಿಗಳು ಭಾನುವಾರದಂದು ಉಡುಪಿಗೆ ಆಗಮಿಸಿದಾಗ ಅವರನ್ನು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀಶ ನಾಯಕ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಆತ್ರಾಡಿ ಮತ್ತು ಜಿಲ್ಲಾ ಅಲ್ಪ ಸಂಖ್ಯಾತ ಮೋರ್ಚಾ ದಾವೂದ್ ಅಬುಬಕ್ಕರ್ ರವರು ಜಿಲ್ಲಾ ಬಿಜೆಪಿ ಪರವಾಗಿ ಮಲ್ಲಿಗೆ ಹೂವಿನ ಮಾಲೆ ಮತ್ತು ಪುಷ್ಪಗುಚ್ಛವನ್ನು ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಚಿವರ ಜತೆ ಕಾಸರಗೋಡು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಲರಾಜ್ ನಾಯಕ್, ಕಾಸರಗೋಡು ಜಿಲ್ಲಾ ಬಿಜೆಪಿ […]

ಮುನಿಯಾಲು ಸಂಜೀವಿನಿ ಫಾರ್ಮ್ಸ್ ಮತ್ತು ಡೈರಿ ಟ್ರಸ್ಟ್: ದೇಸಿ ಗೋವುಗಳ ಹಾಲಿನ ಉತ್ಪನ್ನ ಬಿಡುಗಡೆ

ಕಾರ್ಕಳ: ತಾಲೂಕಿನ ಮುನಿಯಾಲಿನ ಸಂಜೀವಿನಿ ಫಾರ್ಮ್ಸ್ ಮತ್ತು ಡೈರಿ ಟ್ರಸ್ಟ್ ನಲ್ಲಿ ದೇಸಿ ಗೋವುಗಳ ಹಾಲಿನ ಉತ್ಪನ್ನಗಳ ಬಿಡುಗಡೆ ಸಮಾರಂಭ ಭಾನುವಾರ ನಡೆಯಿತು. ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಮತ್ತು ಸಿ.ಇ.ಓ ಎಮ್.ಎಸ್. ಮಹಾಬಲೇಶ್ವರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದೇವರು ಗೋವಿನೊಳಗೆ ನೆಲೆಸಿದ್ದಾನೆ, ಹೀಗಾಗಿ ನಾನು ಅವುಗಳ ಮಧ್ಯೆಯೇ ವಾಸಿಸುತ್ತೇನೆ ಎಂದು ಶ್ರೀಕೃಷ್ಣ ಪರಮಾತ್ಮ ಗೀತಾ ಶ್ಲೋಕದ ಮೂಲಕ ತಿಳಿಸಿದ್ದಾನೆ. ಆಧುನಿಕತೆಗೆ ಒಡ್ಡಿಕೊಳ್ಳುತ್ತಿರುವ ಇಂದಿನ ಸಮಾಜದಲ್ಲಿ ರಾಮಕೃಷ್ಣ ಆಚಾರ್ ಮತ್ತು ಸವಿತಾ ಆಚಾರ್ ರವರು ನಡೆಸುತ್ತಿರುವ ಗೋಧಾಮ […]

ಶಕಲಕ ಬೂಂ ಬೂಂ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಮಿಂಚಲಿರುವ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್

ಉಡುಪಿ: ತುಳುನಾಡಿನ ಬಹು ನಿರೀಕ್ಷಿತ ಶಕಲಕ ಬೂಂ ಬೂಂ ಚಲನಚಿತ್ರ ಡಿಸೆಂಬರ್ 16 ರಂದು ಬಿಡುಗಡೆಗೊಳ್ಳಲಿದೆ. ತುಳು ಚಲನಚಿತ್ರ ಇತಿಹಾಸದಲ್ಲೆ ಮೊದಲ ಬಾರಿಗೆ ಅರವಿಂದ್ ಬೋಳಾರ್ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜೀನೀ ಪಾತ್ರದಲ್ಲಿರುವ ಬೋಳಾರ್ ಅವರ ಪೋಸ್ಟರ್ ಅನ್ನು ಕಾಂತಾರ ಚಿತ್ರದ ನಾಯಕನ ತಾಯಿಯ ಪಾತ್ರ ಮಾಡಿದ ಮಾನಸಿ ಸುಧೀರ್ ದೊಡ್ದಣ್ಣಗುಡ್ಡೆಯಲ್ಲಿ ಬಿಡುಗಡೆಗೊಳಿಸಿ ಶುಭಹಾರೈಸಿದರು. ವೇದಿಕೆಯಲ್ಲಿ ಚಿತ್ರದ ನಿರ್ಮಾಪಕ ನಿತ್ಯಾನಂದ ನರಸಿಂಗೆ, ನರಸಿಂಗೆ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ್ ಸಾಲ್ವನ್ಕಾರ್, ಆನಂದ ನಾಯಕ್, ಸುಧೀರ್ ಕೊಡವೂರ್, ನಿರ್ದೇಶಕ […]

ಗುಜರಾತಿನಲ್ಲಿ ತೂಗು ಸೇತುವೆ ದುರಂತ: 130 ಕ್ಕೂ ಹೆಚ್ಚು ಜನರ ಸಾವು, ಪರಿಹಾರ ಘೋಷಿಸಿದ ಪ್ರಧಾನಿ

ಅಹಮದಾಬಾದ್: ಭಾನುವಾರ ಸಂಜೆ ಗುಜರಾತ್‌ನ ಮೊರ್ಬಿಯಲ್ಲಿ ತೂಗು ಸೇತುವೆ ಕುಸಿದು 130 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇದು ಸುದ್ದಿಯು ದೇಶಾದ್ಯಂತ ತಲ್ಲಣವನ್ನು ಸೃಷ್ಟಿಸಿದೆ. ಸಶಸ್ತ್ರ ಪಡೆಗಳ ಸಿಬ್ಬಂದಿ ಮತ್ತು ಎನ್‌ಡಿಆರ್‌ಎಫ್ ಸೇರಿದಂತೆ ರಕ್ಷಣಾ ತಂಡಗಳು ಘಟನೆಯ ನಡೆದ ತಕ್ಷಣವೇ ಸ್ಥಳಕ್ಕೆ ಧಾವಿಸಿದೆ ಮತ್ತು ಸುಮಾರು ಇನ್ನೂರು ಜನರ ತಂಡವು ರಾತಿಯಿಡೀ ಕಾರ್ಯಾಚರಣೆಯನ್ನು ಮುಂದುವರಿಸಿದೆ. ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ ಇದುವರೆಗೆ 150 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಭಾನುವಾರ […]