ನ. 5 ರಿಂದ 7 ರವರೆಗೆ ಶಿವಳ್ಳಿ ಮಾದರಿ ತೋಟಗಾರಿಕಾ ಕ್ಷೇತ್ರದಲ್ಲಿ ಸಸ್ಯ ಸಂತೆ
ದೊಡ್ಡಣಗುಡ್ಡೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ, ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 5 ರಿಂದ 7 ರ ವರೆಗೆ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರ ಇಲ್ಲಿನ ಪುಷ್ಪ ಹರಾಜು ಕೇಂದ್ರ (ರೈತ ಸೇವಾ ಕೇಂದ್ರ)ದ ಆವರಣದಲ್ಲಿ ಸಸ್ಯ ಸಂತೆ-2022 ನಡೆಯಲಿದೆ. ಸದರಿ ಸಸ್ಯ ಸಂತೆಯಲ್ಲಿ ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ನರ್ಸರಿಗಳಿಗೆ ಮತ್ತು ವಿವಿಧ ತೋಟಗಾರಿಕೆ ಬೆಳೆಗಳ ಬೀಜ ಮಾರಾಟಗಾರರಿಗೆ ಕಸಿ/ಸಸಿ ಗಿಡಗಳನ್ನು, ಬೀಜಗಳನ್ನು, ನರ್ಸರಿ […]
ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಕೋಟಿಕಂಠ ಗಾಯನ
ಕಾರ್ಕಳ: ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನನ್ನ ಹಾಡು ನನ್ನ ನಾಡು ಶೀರ್ಷಿಕೆಯಡಿ ಕೋಟಿಕಂಠ ಗಾಯನ ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಲಾಗಿತ್ತು. ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ, ಮಾಹೆಯ ಅಡ್ಮಿನಿಸ್ಟ್ರೇಟಿವ್ ಶ್ರೀನಿಧಿ ಕಾಮತ್, ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಉಷಾ ರಾವ್ ಯು, ಉಪ ಪ್ರಾಂಶುಪಾಲೆ ಶ್ರೀಮತಿ ವಾಣಿ ಕೆ, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು, […]
ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ದೀಪಾವಳಿ ಆಚರಣೆ
ಮಂಗಳೂರು: ‘ಕತ್ತಲೆಯಿಂದ ಬೆಳಕಿನಕಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ಸಾಗುವುದೇ ದೀಪಾವಳಿಯ ವಿಶೇಷ. ಆ ಮೂಲಕ ನಮ್ಮಲ್ಲಿ ಪ್ರೀತಿ, ವಿಶ್ವಾಸ ಸೌಹಾರ್ದ ಬೆಳೆಯಬೇಕು. ದೀಪಾವಳಿಯು ಎಲ್ಲರ ಜೀವನದಲ್ಲಿ ಬೆಳಕನ್ನು ತರಲಿ ಎಂದು ಶ್ರೀ ಕ್ಷೇತ್ರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಮಾತಾನಂದಮಯಿ ಹೇಳಿದರು. ಅವರು ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜು ಮಂಗಳೂರು ಇವರ ಆಶ್ರಯದಲ್ಲಿಎಕ್ಸ್ಪೋಡಿಯಂ ಸಭಾಂಗಣದಲ್ಲಿ ನಡೆದ ದೀಪಾವಳಿ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದೀಪಾವಳಿಯ ಸಂಭ್ರಮದಲ್ಲಿ ವಿದ್ಯಾರ್ಥಿಗಳು ಆಧ್ಯಾತ್ಮಿಕ ದೃಷ್ಟಿಕೋನದ ಹಿನ್ನೆಲೆಯಲ್ಲಿ ಲೌಕಿಕ ಮತ್ತು ಅಲೌಕಿಕ ಭಾವವನ್ನು […]
ಹಿಮಾಲಕ್ಕೂ ಹಳೆಯದಾದ ಪಶ್ಚಿಮ ಘಟ್ಟಗಳನ್ನು ರಕ್ಷಿಸುವುದು ಅವಶ್ಯ: ಡಾ.ವಿವೇಕ್ ಪಂಡಿ
ಮಣಿಪಾಲ: ಇಂದು ನಾವು ಪರಿಸರ ಸುಸ್ಥಿರತೆಯ ದೃಷ್ಟಿಯಿಂದ ಯೋಚಿಸದೆ, ಕೇವಲ ಆರ್ಥಿಕ ಸುಸ್ಥಿರತೆಯ ದೃಷ್ಟಿಯಿಂದ ಮಾತ್ರ ಯೋಚಿಸುತ್ತಿರುವುದು ದುರದೃಷ್ಟಕರ ವಿಚಾರ. ಹಿಮಾಲಯಕ್ಕಿಂತ ಹಳೆಯದಾದ ಪಶ್ಚಿಮ ಘಟ್ಟಗಳು ಈಗಾಗಲೇ ಜೀವೈವಿಧ್ಯವನ್ನು ಕಳೆದುಕೊಂಡು ಅಪಾರ ಹಾನಿಯನ್ನು ಅನುಭವಿಸಿವೆ ಹಾಗಾಗಿ ಇದನ್ನು ‘ಹಾಟ್‌ಸ್ಪಾಟ್’ ಎಂದು ಗುರುತಿಸಲಾಗಿದೆ. ಇಲ್ಲಿ ಜೀವವೈವಿಧ್ಯಗಳ ನಡುವೆ ಕ್ಲಿಷ್ಟ ಮತ್ತು ಸೂಕ್ಷ್ಮವಾದ ಪರಿಸರ ಜಾಲವಿದೆ. ಇದನ್ನು ಎಲ್ಲಾ ರೀತಿಯ ಆಕ್ರಮಣಗಳಿಂದ ರಕ್ಷಿಸಬೇಕಾಗಿದೆ ಎಂದು ಮಾಹೆಯ ಪರಿಸರಶಾಸ್ತ್ರಜ್ಞ ಡಾ.ವಿವೇಕ್ ಪಂಡಿ ನುಡಿದರು. ಅವರು ಶನಿವಾರ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ […]
ಹಿರಿಯ ಕಲಾವಿದೆ ವಿನಯಾ ಪ್ರಸಾದ್ ಮನೆಯಲ್ಲಿ ಕಳ್ಳತನ
ಬೆಂಗಳೂರು: ಹಿರಿತೆರೆ ಮತ್ತು ಕಿರುತೆರೆಯ ಹಿರಿಯ ಕಲಾವಿದೆ ವಿನಯ್ ಪ್ರಸಾದ್ ಮನೆಯಲ್ಲಿ ಕಳ್ಳತನವಾಗಿರುವುದಾಗಿ ವರದಿಯಾಗಿದೆ. ವಿನಯ್ ಪ್ರಸಾದ್ ಮತ್ತು ಅವರ ಪರಿವಾರದವರು ಮನೆಯಲ್ಲಿಲ್ಲದ ವೇಳೆಯಲ್ಲಿ ಮನೆಗೆ ನುಗ್ಗಿದ ಕಳ್ಳರುಮಲಗುವ ಕೋಣೆಯಲ್ಲಿಟ್ಟಿದ್ದ 7 ಸಾವಿರ ರೂಪಾಯಿನಗದು ಎಗರಿಸಿದ್ದಾರೆ. ಇತರ ವಸ್ತುಗಳು ಕಳವಾಗಿರುವ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದ್ದು, ಕಳ್ಳತನಕ್ಕೆ ಸಂಬಂಧಿಸಿ ನಟಿ ವಿನಯ ಪ್ರಸಾದ್ ರವರು ನಂದಿನಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಉಡುಪಿಗೆ ತೆರಳಿದ್ದ ವೇಳೆ ಕಳ್ಳತನ ನಟಿ ವಿನಯ್ ಪ್ರಸಾದ್ ಮತ್ತು ಪತಿ ಜ್ಯೋತಿ […]