ಮಣ್ಣಪಳ್ಳದಲ್ಲಿ ಕೋಟಿ ಕಂಠ ಗಾಯನ

ಮಣಿಪಾಲ: ರೋಟರಿ ಮಣಿಪಾಲ, ರೋಟರಿ ಮಣಿಪಾಲ ಹಿಲ್ಸ್, ರೋಟರಿ ಉಡುಪಿ, ರೋಟರಿ ಮಣಿಪಾಲ ಟೌನ್, ಪವರ್ ಉಡುಪಿ, ಮಣಿಪಾಲ ಮಹಿಳಾ ಸಮಾಜ ಹಾಗೂ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶುಕ್ರವಾರದಂದು ಮಣಿಪಾಲದ ಮಣ್ಣಪಳ್ಳದಲ್ಲಿ ಕೋಟಿ ಕಂಠ ಗಾಯನ ನಡೆಯಿತು.
ಬ್ರಹ್ಮಾವರ: ಎಸ್ ಎಂ ಎಸ್ ಕಾಲೇಜಿನಲ್ಲಿ ಕೋಟಿ ಕಂಠ ಗಾಯನ

ಬ್ರಹ್ಮಾವರ: 67ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಶುಕ್ರವಾರದಂದು ಎಸ್ ಎಂ ಎಸ್ ಕಾಲೇಜಿನಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾಲೇಜಿನ ಪ್ರಾಂಶುಪಾಲರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಾಪಕರು ,ಅಧ್ಯಾಪಕೇತರ ವೃಂದದವರು ಹಾಗೂ 800 ವಿದ್ಯಾರ್ಥಿಗಳು ಭಾಗವಹಿಸಿದರು. ಈ ವಿಶೇಷ ಕಾರ್ಯಕ್ರಮದಲ್ಲಿ ಸರಕಾರದ ಆದೇಶದಂತೆ ಕನ್ನಡ ನಾಡು ನುಡಿ ಶ್ರೇಷ್ಠತೆಯನ್ನು ಸಾರುವ 6 ಗೀತೆಗಳನ್ನು ಹಾಡಲಾಯಿತು ಹಾಗೂ ಕನ್ನಡ ನಾಡು-ನುಡಿ ಉಳಿಸಲು ಬದ್ಧರಾಗಿರುವುದಾಗಿ ಪ್ರತಿಜ್ಞೆ ಮಾಡಲಾಯಿತು.
ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ಧಿಗಾಗಿ ರೋಟರಿ ಕ್ಲಬ್ ವತಿಯಿಂದ ಕನ್ನಡ ರಾಜ್ಯೋತ್ಸವ

ಉಡುಪಿ: ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ಧಿಗಾಗಿ ರೋಟರಿ ಕ್ಲಬ್ ಮಣಿಪಾಲ ಟೌನ್ ಇದರ ಪ್ರಾಯೋಜಕತ್ವದಲ್ಲಿ ರೋಟರಿ ವಲಯ-4 ಮತ್ತು ಪಟ್ಲ ಯು ಎಸ್ ನಾಯಕ್ ಶಾಲಾ ಮಕ್ಕಳೊಂದಿಗೆ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಪಿ. ರಬೀಂದ್ರ ನಾಯಕ್ ಶತವರ್ಷ ಸಂಸ್ಕರಣೆಯ ಅಂಗವಾಗಿ ಶಾಲೆಯ ಮಕ್ಕಳ ಪ್ರಯಾಣಕ್ಕೆ ರೋ. ಪಿ. ಗಣೇಶ್ ನಾಯಕ್ ಅವರು ಶಾಲೆಗೆ 23.00 ಲಕ್ಷ ರೂ ನ ಬಸ್ಸ್ ಅನ್ನು ಕೊಡುಗೆಯಾಗಿ ಹಸ್ತಾಂತರ ಮಾಡಲಿದ್ದಾರೆ. ನವೆಂಬರ್ 1 ರಂದು ಬೆಳಿಗ್ಗೆ 9:30 ರಿಂದ 11.30ರವರೆಗೆ ಯು.ಯಸ್.ನಾಯಕ್ […]