ಪೌರ ಕಾರ್ಮಿಕರ ಜೊತೆ ದೀಪಾವಳಿ ಆಚರಿಸಿದ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ

ಉಡುಪಿ: ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಉಡುಪಿಯ ಬೀಡಿನಗುಡ್ಡೆ ಬಳಿಯ ಪೌರಕಾರ್ಮಿಕ ಕಾಲೋನಿಯ ಸಮಸ್ತರನ್ನು ಅನುಗ್ರಹಿಸಿ ಮನೆಮನೆಗಳಲ್ಲಿ ದೀಪ ಬೆಳಗಿಸುವ ಮೂಲಕ ದೀಪಾವಳಿಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರೊಂದಿಗೆ ಆಚರಿಸಿದರು.

ಕಾರ್ಕಳ: ಜ್ಞಾನಸುಧಾ ಕಾಲೇಜಿನಲ್ಲಿ ಎನ್.ಎಸ್.ಎಸ್. ವಾರ್ಷಿಕ ಶಿಬಿರ ಉದ್ಘಾಟನೆ

ಗಣಿತನಗರ :ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಿಗೆ ಸಮಯಪ್ರಜ್ಞೆ, ಶಿಸ್ತು, ನಾಯಕತ್ವವನ್ನು ಕಲಿಸುವುದರ ಜೊತೆಗೆ ಸಹನೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅನಿಲ್ ಕುಮಾರ್‌ಜೈನ್‌ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಕುಕ್ಕುಂದೂರಿನ ಶ್ರೀ ದುರ್ಗಾದೇವಿ ಅನುದಾನಿತ ಹಿ.ಪ್ರಾ. ಶಾಲೆಯಲ್ಲಿ ಗಣಿತನಗರದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ರಾ.ಸೇ.ಯೋ. ಘಟಕದಿಂದ ನಡೆಯುತ್ತಿರುವ ವಾರ್ಷಿಕ ವಿಶೇಷ ಶಿಬಿರ -2022ರ ದಿಕ್ಸೂಚಿ ಭಾಷಣವನ್ನುದ್ದೇಶಿಸಿ ಮಾತನಾಡಿ, ಎನ್.ಎಸ್.ಎಸ್ ಜೊತೆಗಿನ ತಮ್ಮ ಸ್ವಂತ ಅನುಭವಗಳನ್ನು ಹಂಚಿಕೊಂಡು, ಎನ್.ಎಸ್.ಎಸ್ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ಹಿಂದಿನ ಶಕ್ತಿಯಾಗಿ ಪಾತ್ರವಹಿಸುತ್ತದೆ ಎಂದರು. ಶಿಬಿರವನ್ನು […]

ಇಂದು ಸಂಜೆ ಝೀ5 ನಲ್ಲಿ ಶೀತಲ್ ಶೆಟ್ಟಿ ಚೊಚ್ಚಲ ನಿರ್ದೇಶನದ ವಿಂಡೋ ಸೀಟ್ ಪ್ರದರ್ಶನ

ಇದು ನನ್ನ ಕಲ್ಪನೆಯ ತುಣುಕು, ನೀವೆಲ್ಲರೂ ನೋಡಲೆಂದು ನಾನು ತೆರೆಯ ಮೇಲೆ ತರಲು ಬಯಸಿದ್ದೇನೆ. ವಿಂಡೋ ಸೀಟ್ ನಾನು ತುಂಬಾ ಪ್ರೀತಿ ಮತ್ತು ಸಮರ್ಪಣೆಯಿಂದ ಮಾಡಿದ ಚಿತ್ರ. ನೀವೆಲ್ಲರೂ ಇದನ್ನು ಪ್ರೀತಿಯಿಂದ ವೀಕ್ಷಿಸಿದರೆ ನಾನು ಹೆಚ್ಚು ಕೃತಜ್ಞಳಾಗುತ್ತೇನೆ ಮತ್ತು ಚಿತ್ರವು ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ ಎಂದು ನನಗೆ ಖಾತ್ರಿಯಿದೆ. ಥಿಯೇಟರಿನಲ್ಲಿ ಬಿಡುಗಡೆಯಾದ ನಂತರ ವಿಂಡೋ ಸೀಟ್ ಮೇಲೆ ನಿಮ್ಮೆಲ್ಲರ ಪ್ರೀತಿಯನ್ನು ಧಾರೆಯೆರೆದಿದ್ದಕ್ಕಾಗಿ ನಾನು ನಿಜವಾಗಿಯೂ ಕೃತಜ್ಞಳಾಗಿದ್ದೇನೆ. ಇದೀಗ ಚಿತ್ರವು ಝೀ5 ಮೂಲಕ ನಿಮ್ಮ ಮುಂದೆ ಬರುತ್ತಿದೆ. ದಯವಿಟ್ಟು ಚಂದಾದಾರರಾಗಿ, […]

ಹಕ್ಕಿ ಬಿಡುಗಡೆ ಹೊಂದಿತು ಎಂದ ಏಲಾನ್ ಮಸ್ಕ್: ಸಿ.ಇ.ಒ ಪರಾಗ್ ಅಗರ್ವಾಲ್ ಗೆ ಟ್ವಿಟರ್ ನಿಂದ ಗೇಟ್ ಪಾಸ್

ಸ್ಯಾನ್ ಫ್ರಾನ್ಸಿಸ್ಕೋ: ಏಲಾನ್ ಮಸ್ಕ್ ಅವರು ಗುರುವಾರ ತಡರಾತ್ರಿ ಟ್ವಿಟರ್‌ನ 44 ಶತಕೋಟಿ ಡಾಲರ್ ಖರೀದಿ ಒಪ್ಪಂದವನ್ನು ಪೂರ್ಣಗೊಳಿಸಿದ ನಂತರ, ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉನ್ನತ ಕಾರ್ಯನಿರ್ವಾಹಕರನ್ನು ವಜಾಗೊಳಿಸಿ ಸಾಮಾಜಿಕ ಮಾಧ್ಯಮ ಕಂಪನಿಯ ಸ್ಯಾನ್ ಫ್ರಾನ್ಸಿಸ್ಕೋ ಪ್ರಧಾನ ಕಛೇರಿಯಿಂದ ಹೊರಕ್ಕೆ ಕಳುಹಿಸಲಾಯಿತು ಎಂದು ಹಲವಾರು ಮಾಧ್ಯಮ ವರದಿಗಳು ತಿಳಿಸಿವೆ. ಸಿಇಒ ಪರಾಗ್ ಅಗರವಾಲ್, ಕಾನೂನು ವ್ಯವಹಾರಗಳು ಮತ್ತು ನೀತಿ ಮುಖ್ಯಸ್ಥ ವಿಜಯ ಗಡ್ಡೆ, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಮತ್ತು ಜನರಲ್ ಕೌನ್ಸಿಲ್ ಸೀನ್ ಎಡ್ಜೆಟ್ ವಜಾಗೊಳಿಸಲಾಗಿರುವ […]

ಕಲಾವಿದ ಸತೀಶ್ಚಂದ್ರ ಅವರ ಕುಂಚದಿಂದ ಮೂಡಿಬಂತು ಕಾಂತಾರದ ಪಂಜುರ್ಲಿ ದೈವ!

ಮಣಿಪಾಲ: ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ ಮಾಡಿದ ಭೂತಾರಾಧನೆ ಕುರಿತ ಕಾಂತಾರ ಚಿತ್ರದ ಪಂಜುರ್ಲಿ ದೈವದ ಅಕ್ರಿಲಿಕ್ ಚಿತ್ರವನ್ನು ಮಣಿಪಾಲದ ಕಲಾವಿದ ಸತೀಶ್ಚಂದ್ರ ಅವರು ಅದ್ಭುತವಾಗಿ ಕುಂಚದಲ್ಲಿ ಸೆರೆಹಿಡಿದಿದ್ದು, ಇದು ಎಲ್ಲೆಡೆ ವೈರಲ್ ಆಗಿದೆ. ದೈವದ ಕಾಲಿನ ಗಗ್ಗರ ಇವರ ಕೈ ಚಳಕದ ಸ್ವಂತ ರಚನೆಯಾಗಿದೆ. ಸತೀಶ್ಚಂದ್ರ ಲಯನ್ಸ್ ಸಂಸ್ಥೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾಗಿದ್ದರು. ತರಂಗ ವಾರಪತ್ರಿಕೆಯಲ್ಲಿ ಇವರ ಚಿತ್ರಗಳು ಪ್ರಕಟವಾಗುತ್ತಿರುತ್ತವೆ.