ಕೆಮ್ಮಣ್ಣು: ಗುಜ್ಜರಬೆಟ್ಟು ಎಸ್.ಸಿ. ಕಾಲನಿಯಲ್ಲಿ ದೀಪಾವಳಿ ತುಡರ್ ಕಾರ್ಯಕ್ರಮ

ಕೆಮ್ಮಣ್ಣು: ಶಾಸಕ ಕೆ. ರಘುಪತಿ ಭಟ್ ರವರ ನೇತೃತ್ವದ ಕೇದಾರೋತ್ಥಾನ ಟ್ರಸ್ಟ್ ಮತ್ತು ಕೇದಾರೋತ್ಥಾನ ರೈತ ಉತ್ಪಾದಕರ ಕಂಪನಿ ವತಿಯಿಂದ ಕೆಮ್ಮಣ್ಣು ಗುಜ್ಜರಬೆಟ್ಟು ಪರಿಶಿಷ್ಟ ಜಾತಿ ಕಾಲನಿಯಲ್ಲಿ ದೀಪಾವಳಿ ತುಡರ್ ಕಾರ್ಯಕ್ರಮ ನಡೆಯಿತು. ಕೇದಾರೋತ್ಥಾನ ಟ್ರಸ್ಟ್ ಅಧ್ಯಕ್ಷ ಶಾಸಕ ಕೆ. ರಘುಪತಿ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚಿಸಿದರು. ಈ ಸಂದರ್ಭದಲ್ಲಿ ದಲಿತ ಚಿಂತಕ ಜನಪರ ಹೋರಾಟಗಾರ ಹಾಗೂ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ […]

ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಸಿಬ್ಬಂದಿ ಮತ್ತು ಆಡಳಿತ ಮಂಡಳಿಯಿಂದ ಕೋಟಿ ಕಂಠ ಗಾಯನ

ಉಪ್ಪೂರು: 67 ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ವಿ ಸುನಿಲ್ ಕುಮಾರ್ ಅವರ ನಿರ್ದೇಶನದ ಮೇರೆಗೆ ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಸಿಬ್ಬಂದಿಗಳು ಮತ್ತು ಆಡಳಿತ ಮಂಡಳಿಯ ಸದಸ್ಯರಿಂದ ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆಯಿತು. ಸಮಸ್ತ ಕನ್ನಡಿಗರ ಒಕ್ಕೊರಳ ಹಾಡಿಗೆ ಸಂಸ್ಥೆಯ ವತಿಯಿಂದ ಧ್ವನಿಗೂಡಿಸಿ ಕನ್ನಡಾಂಬೆಗೆ ನಮನ ಸಲ್ಲಿಸಲಾಯಿತು.

ಮಂಗಳೂರು ವಿಮಾನ ನಿಲ್ದಾಣಕ್ಕೆ ಕೆ.ಎಸ್.ಆರ್.ಟಿ.ಸಿ ವೋಲ್ವೋ ಬಸ್ ಸಂಚಾರ ಪ್ರಾರಂಭ

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಸ್ ಸಂಚಾರ ಆರಂಭಿಸಲು ಜನರಿಂದ ಬೇಡಿಕೆ ಬರುತ್ತಿದ್ದರೂ ಕಾರಣಾಂತರಗಳಿಂದ ಇಲ್ಲಿಗೆ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಇದೀಗ ಬಸ್ ಪುನರ್ ಸಂಚಾರಕ್ಕೆ ಮುಹೂರ್ತ ಕೂಡಿ ಬಂದಿದ್ದು, ಮಂಗಳೂರು ನಗರದ ಬಿಜೈ ಸರಕಾರಿ ಬಸ್ ನಿಲ್ದಾಣ ಮತ್ತು ಮಣಿಪಾಲದಿಂದ ಬಜ್ಪೆ ಕೆಂಜಾರಿನಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸರಕಾರಿ ವೋಲ್ವೊ ಬಸ್ ಸಂಚಾರ ಆರಂಭವಾಗಲಿದೆ. ಹಲವು ವರ್ಷಗಳಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಸರಕಾರಿ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಬೇಕೆಂಬ ಬೇಡಿಕೆ ಇದ್ದರೂ ಕೂಡ […]

ಬ್ರಹ್ಮಾವರ: ನೂತನ್ ಜ್ಯುವೆಲ್ಲರ್ಸ್ ನಲ್ಲಿ ವಜ್ರಾಭರಣ ಮೇಳ

ಬ್ರಹ್ಮಾವರ: ಇಲ್ಲಿನ ಮುಖ್ಯರಸ್ತೆಯಲ್ಲಿರುವ ಬಾರ್ನೆಸ್ ಪ್ಲಾಝಾ ದಲ್ಲಿರುವ ನೂತನ್ ಜ್ಯುವೆಲ್ಲರ್ಸ್ ನ ಮಳಿಗೆಯಲ್ಲಿ ನವೆಂಬರ್ 11,12 ಮತ್ತು 13 ರಂದು ವಜ್ರಾಭರಣಗಳ ಮೇಳವನ್ನು ಆಯೋಜಿಸಲಾಗಿದೆ. ರಾಷ್ಟ್ರಮಟ್ಟದ ಅಧಿಕೃತ ಸಂಸ್ಥೆಗಳಿಂದ ಪ್ರಮಾಣೀಕರಿಸಲಾದ ವಜ್ರಗಳು ಮತ್ತು ಬಿ.ಐ.ಎಸ್ ಹಾಲ್ ಮಾರ್ಕ್ ಹೊಂದಿರುವ ಆಭರಣಗಳಿಗಾಗಿ ನೂತನ್ ಜ್ಯುವೆಲ್ಲರ್ಸ್ ಗೆ ಭೇಟಿ ನೀಡಿ. ಇಲ್ಲಿ ಚಿನ್ನಾಭರಣ ಯೋಜನೆ ಸೌಲಭ್ಯವೂ ಇದೆ. ಮಾಹಿತಿಗಾಗಿ ಸಂಪರ್ಕಿಸಿ: 0820-2522654/0820-2563855

ರಾಷ್ಟ್ರಮಟ್ಟದ ಮುಕ್ತ ಟೇಕ್ವಾಂಡೋ ಕ್ರೀಡಾ ಕೂಟ: ಉಡುಪಿ ಜಿಲ್ಲೆಗೆ 41 ಚಿನ್ನ, 9 ಬೆಳ್ಳಿ ಪದಕ

ಉಡುಪಿ: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ವಿಸ್ವಾರ್ ಕಪ್ ಪ್ರಥಮ ವರ್ಷದ ರಾಷ್ಟ್ರಮಟ್ಟದ ಮುಕ್ತ ಟೇಕ್ವಾಂಡೋ ಕ್ರೀಡಾ ಕೂಟದಲ್ಲಿ ಉಡುಪಿಯ ಜಿಲ್ಲಾ ಟೇಕ್ವಾಂಡೋ ಆಸೋಸಿಯೇಶನ್ ವಿದ್ಯಾರ್ಥಿಗಳು ಭಾಗವಹಿಸಿ 41 ಚಿನ್ನದ ಪದಕ ಹಾಗೂ 9 ಬೆಳ್ಳಿಯ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಪ್ರಶಸ್ತಿ ವಿಜೇತ ಕರಾಟೆ ಪಟುಗಳಿಗೆ ಲಯನ್ಸ್ ಕ್ಲಬ್ ಬ್ರಹಗಿರಿಯ ಜಿಲ್ಲಾ ಸಂಯೋಜಕ ಲಯನ್ ವಾದಿರಾಜ ರಾವ್ ಅವರು ಶಿರಿಬೀಡುವಿನ ಗೌರಿಆ ರ್ಕೇಡ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿನಂದಿಸಿದರು. ಮುಖ್ಯ ಶಿಕ್ಷಕ ರಾಜಶೇಖರ್ , ವರುಣ್ , ದಾದಪೀರ್, ಸಾಥ್ವಿಕ್, […]