ಚಿಪ್ಸಿ ಐಟಿ ಸರ್ವಿಸಸ್ ಪ್ರೈ. ಲಿಮಿಟೆಡ್ ನಲ್ಲಿ ಅದ್ದೂರಿ ದೀಪಾವಳಿ ಆಚರಣೆ

ಉಡುಪಿ: ಚಿಪ್ಸಿ ಐಟಿ ಸರ್ವಿಸಸ್ ಪ್ರೈ. ಲಿಮಿಟೆಡ್ ನಲ್ಲಿ ದೀಪಾವಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಸಂಭ್ರಮಾಚರಣೆಯು ಸುಂದರವಾದ ತಂಡ ಬಂಧ ಚಟುವಟಿಕೆಯೊಂದಿಗೆ ಪ್ರಾರಂಭವಾಯಿತು. ಸಿಬ್ಬಂದಿಗಳನ್ನು 4 ತಂಡಗಳಾಗಿ ವಿಂಗಡಿಸಿ ದೀಪಾವಳಿ ಅಲಂಕಾರ ಸ್ಪರ್ಧೆಯನ್ನು ನಡೆಸಲಾಯಿತು. ಪ್ರತಿ ತಂಡಕ್ಕೆ ನಿಗದಿತ ಬಜೆಟ್‌ನೊಳಗೆ ನಮ್ಮ ಕಛೇರಿಯ ಕಾರ್ಯಕ್ಷೇತ್ರದ ಒಂದು ಭಾಗವನ್ನು ಅಲಂಕರಿಸುವ ಕಾರ್ಯವನ್ನು ನಿಯೋಜಿಸಲಾಗಿತ್ತು. ಹೊಟೇಲ್ ವೈಟ್ ಲೋಟಸ್ ಗ್ರೂಪ್‌ನ ಮಾಲಕ ಅಜಯ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಛೇರಿಯ ಮೂಲೆ ಮೂಲೆಗಳಲ್ಲಿ ಸಂಸ್ಥೆಯ ಉದ್ಯೋಗಿಗಳ ಸೃಜನಾತ್ಮಕತೆ ಹೊರಹೊಮ್ಮಿತು. ಪ್ರತಿಯೊಬ್ಬರೂ […]

ಕಾಪು ಸಹಕಾರಿ ವ್ಯವಸಾಯಿಕ ಸಂಘದಲ್ಲಿ ಕೋಟಿ ಕಂಠ ಗಾಯನ

ಕಾಪು: ಕೋಟಿ ಕಂಠ ಗಾಯನದ ನಿಮಿತ್ತ ನನ್ನ ನಾಡು ನನ್ನ ಹಾಡು ಕಾರ್ಯಕ್ರಮದಲ್ಲಿ ಕಾಪು ಸಹಕಾರಿ ವ್ಯವಸಾಯಿಕ ಸಂಘದ ಆಡಳಿತ ಮಂಡಳಿಯ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಕನ್ನಡ ಹಾಡುಗಳನ್ನು ಹಾಡಿ ಕನ್ನಡ ಭಾರತಿಗೆ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ದಿನೇಶ್ ಎ ಸಾಲ್ಯಾನ್, ನಿರ್ದೇಶಕಿ ಶ್ರೀಮತಿ ಜಯಲಕ್ಷ್ಮಿ ಎಸ್ ಆಳ್ವ, ನವೀನ್ ಶೆಟ್ಟಿ, ಸದಾಶಿವ ಶೇರ್ವೆಗಾರ, ಶ್ರೀಮತಿ ಗೀತಾ ಉಪಸ್ಥಿತರಿದ್ದರು.

ಗೀತಾಂಜಲಿ ಸಿಲ್ಕ್ಸ್ ನಲ್ಲಿ ಕೋಟಿ ಕಂಠ ಗಾಯನ

ಉಡುಪಿ: ನಗರದ ಹೆಸರಾಂತ ವಸ್ತ್ರ ಮಳಿಗೆ ಗೀತಾಂಜಲಿ ಸಿಲ್ಕ್ಸ್ ನಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆಯಿತು. ಮಳಿಗೆಯ ಸಿಬ್ಬಂದಿಗಳು ಮತ್ತು ಆಡಳಿತ ಮಂಡಳಿಯ ಸದಸ್ಯರು ಕನ್ನಡ ಬಾವುಟಗಳನ್ನು ಹಿಡಿದು ಕೋಟಿ ಕಂಠ ಗಾಯನದಲ್ಲಿ ಪಾಲ್ಗೊಂಡು ತಮ್ಮ ಕನ್ನಡಾಭಿಮಾನವನ್ನು ಮೆರೆದರು.

ನವೆಂಬರ್ 7 ರಂದು ಆಗಮಿಸಲಿರುವ ಶ್ರೀರಾಮರಥ ದಿಗ್ವಿಜಯ ಯಾತ್ರೆಗೆ ಕೃಷ್ಣನೂರು ಸಜ್ಜು: ವಿಜಯ್ ಕೊಡವೂರು

ಉಡುಪಿ: ಅಯೋಧ್ಯೆ ಪ್ರಭು ಶ್ರೀ ರಾಮಚಂದ್ರ ದೇವರ ದಿಗ್ವಿಜಯ ಯಾತ್ರೆಯು ಅಕ್ಟೋಬರ್‌ 5 ರಂದು ಉ.ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಂದ ಚಾಲನೆಗೊಂಡಿದ್ದು, 60 ದಿನ 27 ರಾಜ್ಯಗಳಲ್ಲಿ15,000 ಕಿ.ಮೀ ಕ್ರಮಿಸಿ ಹಿಂದೂ ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನ.7 ರಂದು ಉಡುಪಿ ಜಿಲ್ಲೆಗೆ ಆಗಮಿಸಲಿದೆ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೊಡವೂರು ನಗರಸಭಾ ಸದಸ್ಯ ವಿಜಯ್ ಕೊಡವೂರು ತಿಳಿಸಿದರು. ಈ ದಿಗ್ವಿಜಯ ಯಾತ್ರೆಯನ್ನು ಸ್ವಾಗತಿಸುವ ನಿಟ್ಟಿನಲ್ಲಿ ಉಡುಪಿಯಲ್ಲಿ ಪ್ರಮುಖರನ್ನು ಒಳಗೊಂಡ ಸ್ವಾಗತ ಸಮಿತಿ ರಚನೆ ಮಾಡಲಾಗಿದ್ದು,ನವೆಂಬರ್ 7 […]

ತ್ರಿಶಾ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ

ಮಂಗಳೂರು: ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಹಾಗೂ ತ್ರಿಶಾ ಸಂಧ್ಯಾ ಕಾಲೇಜ್ ನ ಪ್ರಥಮ ಬಿ.ಕಾಂ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರವನ್ನು ಡಾನ್ ಬಾಸ್ಕೊ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ತ್ರಿಶಾ ಸಮೂಹ ಸಂಸ್ಥೆಗಳ ಸಂಸ್ಥಾಪಕ, ಲೆಕ್ಕ ಪರಿಶೋಧಕ ಗೋಪಾಲಕೃಷ್ಣ ಭಟ್ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಎಂಬುದು ವಿದ್ಯಾರ್ಥಿಯಲ್ಲಿನ ಅಂತಃ ಶಕ್ತಿಯನ್ನು ಹೊರ ತರುವ ಸಾಧನವಾಗಿದೆ. ಪರಿಶ್ರಮದ ಮೂಲಕ ಮಾತ್ರ ಸಾಧನೆ ಎನ್ನುವುದು ಸಾಧ್ಯವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ತ್ರಿಶಾ ಕಾಲೇಜಿನ ಶೈಕ್ಷಣಿಕ ಆಡಳಿತ ಸಲಹೆಗಾರ ನಾರಾಯಣ್ […]